ಕುಕನೂರ ಜೆಸ್ಕಾಂನಿಂದ ತಾಲೂಕಿನ ವಿದ್ಯುತ್ ಗುತ್ತಿಗೆದಾರರಿಗೆ ಅನ್ಯಾಯ

ಕುಕನೂರ : ಕುಕುನೂರು ಜೆಸ್ಕಾoನ ಅಧಿಕಾರಿಗಳು ಅವರ ತಾಲೂಕಿನ ವಿದ್ಯುತ್ ಗುತ್ತಿಗೆದಾರರಿಗೆ ಅನ್ಯಾಯ, ಹಾಗೂ ಅವಕಾಶ ವಂಚಿತ ಮಾಡುತ್ತಿದ್ದಾರೆ. ಕುಕನೂರು ತಾಲೂಕಿನ ವಿದ್ಯುತ್ ಗುತ್ತಿಗೆದಾರರಿಗೆ ಬಹಳ ಅನ್ಯಾಯವಾಗಿದ್ದು, ಜೆಸ್ಕಾಂ ಎ ಇ ಇ ನಾಗರಾಜ ಅವರನ್ನು ಅವರನ್ನು ವರ್ಗಾವಣೆ ಮಾಡಬೇಕೆಂದು ಕುಕನೂರು ತಾಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಕುಕನೂರು ಪಟ್ಟಣದ ಜೆಸ್ಕಾಂನಲ್ಲಿ ಕುಕನೂರ ತಾಲೂಕು ವಿದ್ವತ್ ಗುತ್ತಿಗೆದಾರ ಸಂಘದ ಪದಾಧಿಕಾರಿಗಳು ಪ್ರತಿಪಟಿಸಿ ಮಾತನಾಡಿದ ಅವರು, ಕುಕನೂರಿನ ಗುದ್ನೇಶ್ವರ ಜಾತ್ರೆಯಲ್ಲಿ 150ಕ್ಕೂ ಹೆಚ್ಚು ಅಂಗಡಿಗಳು ಇವೆ, ಹೆಚ್ಚುವರಿ ಅಮೌಂಟನ್ನು ಅಂಗಡಿಯವರ ಮಾಲೀಕರಿಂದ ತೆಗೆದುಕೊಳ್ಳುವುದು ಗಮನಕ್ಕೆ ಬಂದಿದೆ, ಸರ್ಕಾರಕ್ಕೆ ಹಾಗೂ ಗುತ್ತಿಗೆದಾರರಿಗೆ ಬಹಳ ಅನ್ಯಾಯ ಮಾಡಿ ಗ್ರಹಕರಿಗೆ ಕೂಡ ಅನ್ಯಾಯ ಮಾಡುತ್ತಿರುವುದು ವಿಪರ್ವಾಸ, ಮೇಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು, ಜಾತ್ರೆ ಸಂದರ್ಭದಲ್ಲಿ ಕೆಲ ಗುತ್ತಿಗೆದಾರರು ಅಂಗಡಿಗಳಿಗೆ ವೈರಿಂಗ್ ಮಾಡಿ ಮೀಟರ್ ಸಂಪರ್ಕಿಸುತ್ತಿದ್ದರು, ಇದರಂದಾಗಿ ಬರುತ್ತಿದ್ದ ಅಲ್ಪಸಲ್ಪ ಆದಾಯಕ್ಕೂ ಕೂಡ ಅಧಿಕಾರಿಗಳು, ಎಳ್ಳು ನೀರು ಬಿಟ್ಟಿರುವುದು ಸರಿಯಲ್ಲ ಈ ಕೂಡಲೇ ಅವರನ್ನು ವರ್ಗಾವಣೆ ಮಾಡಿ ಎಂದು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೀರನ್ ಜೈನ್, ದೇವಪ್ಪ ಸಿಲಿನ, ವಿಜಯ್ ಮರಾಠಿ, ಸಂಗಯ್ಯ ಸಾಗಾಳಿಮಠ, ವಿಜಯಕುಮಾರ್ ಅಂಗಡಿ, ಮಾಜಿದ್ ಮುಲ್ಲಾ, ನಿಂಗಪ್ಪ ಕುರಿ, ಖಾದರ್ ಸಾಬ್ ನದಾಫ್, ರಿಯಾಜ್ ನದಾಫ್, ತಾಜಾವುದ್ದೀನ್, ತಿಮ್ಮಣ್ಣ ಕನಕಗಿರಿ ಇತರರು ಉಪಸ್ಥಿತರಿದ್ದರು.
ಸುದ್ದಿ ಜಾಹೀರಾತಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713
