ಕುಕುನೂರು ಪಟ್ಟಣದ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ

ಕುಕನೂರು ಪಟ್ಟಣದ ಶ್ರೀ ಕಲ್ಲಿನಾಥೇಶ್ವರ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸೋಮವಾರ ದಿನದಂದು ಶ್ರೀ ಕಲ್ಲಿನಾಥೇಶ್ವರನ ಕಾರ್ತಿಕೋತ್ಸವವನ್ನು ನೆರವೇರಿಸಲಾಯಿತು ಎಂದು ದೇವಸ್ಥಾನ ಕಮಿಟಿಯ ಸೇವಾ ಕಾರ್ಯಕರ್ತರಾದ ಸಂಗಯ್ಯ ಸೊಪ್ಪಿಮಠ, ಶರಣಪ್ಪ ವೀರಾಪೂರ ಶಿಕ್ಷಕರು ಮಾತನಾಡಿ ಶ್ರೀ ಕಲ್ಲಿನಾಥೇಶ್ವರನಿಗೆ ಬೆಳಗ್ಗೆ ಅಭಿಷೇಕ ಪೂಜಾ ವಿಧಾನಗಳು ನೆರವೇರಿಸಲಾಯಿತು.
ಸಾಯಂಕಾಲ 6 ಗಂಟೆಗೆ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಸಮರ್ಪಿಸಿ ಮಂಗಳಾರತಿ ನೆರವೇರಿಸಲಾಯಿತು. ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಕಾರ್ತಿಕೋತ್ಸವದಲ್ಲಿ ಸಾವಿರಾರು ಜನ ಭಾಗವಹಿಸಿ ಶ್ರೀ ಕಲೆನಾಥೇಶ್ವರನ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನದ ಕಮಿಟಿಯ ಸೇವಾ ಕಾರ್ಯಕರ್ತರು ಇತರರು ಇದ್ದರು.


ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು
