ವಸತಿ ನಿಲಯದಲ್ಲಿಯೇ ವಿದ್ಯಾರ್ಥಿನಿ ಹೆರಿಗೆ; ಪ್ರಕರಣ ದಾಖಲು
Breaking news:-ನಿರ್ಭಯ ದೃಷ್ಟಿ ನ್ಯೂಸ್

ಕೊಪ್ಪಳ
ವಸತಿ ನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಹೆರಿಗೆಯು ವಸತಿ ನಿಲಯದಲ್ಲೇ ಆಗಿದ್ದು ಪ್ರಕರಣ ದಾಖಲಾಗಿರುತ್ತದೆ.
ಜಿಲ್ಲೆಯ ಕುಕನೂರು ತಾಲೂಕಿನ ಗ್ರಾಮ ಒಂದರಲ್ಲಿ ವಸತಿ ನಿಲಯದಲ್ಲಿ ಇದ್ದುಕೊಂಡು ಹತ್ತನೇ ತರಗತಿ ಓದುತ್ತಿದ್ದ 16 ವರ್ಷದ ವಿದ್ಯಾರ್ಥಿನಿಗೂ ಬೆಳಗಿನ ಜಾವ ಸುಮಾರು 6:00 ಗಂಟೆಯ ವೇಳೆಗೆ ಹೆರಿಗೆ ಹೇಗಿದ್ದು ಬಾಣಂತಿ ಹಾಗೂ ಮಗುವನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ನವಜಾತ ಶಿಶು 1.2 ಕೆಜಿ ತೂಕವನ್ನು ಹೊಂದಿದ್ದು ಮಗವನ್ನು ತೀವ್ರನಿಗಾದಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು ಉಳಿದಂತೆ ತಾಯಿ ಮಗು ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕುಕುನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸುದ್ದಿ ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪರ್ಕಿಸಿ.