ಮಲಕಸಮುದ್ರ ಕೆರೆಯಲ್ಲಿ ಇಬ್ಬರು ಮೀನುಗಾರರು ತೆಪ್ಪ ಮಗಚಿ ಮರಣ, ಎರಡು ದಿನಗಳ ನಂತರ ಶವ ಪತ್ತೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಮಲಕಸಮುದ್ರ ಗ್ರಾಮದ ಕೆರೆಯಲ್ಲಿ ಭಾನುವಾರ ಮೀನು ಹಿಡಿಯಲು ವಜ್ರಬಂಡಿ ಹಾಗೂ ಗುತ್ತೂರು ಗ್ರಾಮದ ಇಬ್ಬರು ಯುವಕರು ನೀರು ನಿರುಪಾಲಾದ ಘಟನೆ ನಡೆದಿತ್ತು.
ಮೃತರ ಹೆಸರು
ಪಕೀರ ಸಾಬ್ ಮುಜಾವರ್ ವಜ್ರಬಂಡಿ ಮತ್ತು ಶರಣಪ್ಪ ಎಮ್ಮೆಯರ್ ಗುತ್ತೂರು ಇವರ ಶವ ಪತ್ತೆ ಸ್ಥಳದಲ್ಲಿ ಎಸ್ ಪಿ, ಡಿಎಸ್ ಪಿ, ಸಿಪಿಐ, ಪಿಎಸ್ಐ, ತಹಶೀಲ್ದಾರರು, ಶಾಮಕ ಇಲಾಖೆ ಅಧಿಕಾರಿಗಳು, ಜಿಂದಾಲ್ ಪೆಷಲ್ ತಂಡದವರು ಯಲಬುರ್ಗಾ ಪೊಲೀಸ್ ಠಾಣೆ ಸಿಬ್ಬಂದಿ ಶವ ಪತ್ತೆ ಕಾರ್ಯಚರಣೆಯಲ್ಲಿ , ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಒಂದು ಶವ ಪತ್ತೆ ಮತ್ತೊಂದು ಶವ 2 ಗಂಟೆ 20 ನಿಮಿಷಕ್ಕೆ ಪತ್ತೆ ಹಚ್ಚಿ ನೀರಿನಿಂದ ಶವ ಹೊರತೆಗೆಲಾಯಿತು. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸ್ಥಳಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

* ಸ್ಥಳಕ್ಕೆ ಮಾಜಿ ಸಚಿವ ಹಾಲಪ್ಪ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. *

ಸುದ್ದಿ ಜಾಹಿರಾತಿಗಾಗಿ
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 9164386712