ಶಿರೂರು ವೀರಭದ್ರಪ್ಪನವರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು:-ಬಸವರಾಜ ರಾಯರಡ್ಡಿ

ಕುಕನೂರು ತಾಲೂಕಿನ ಅಡೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ, ಜಾತ್ರಾ ಮಹೋತ್ಸವ ಹಾಗೂ ಹಿರಿಯ ಸ್ವಾತಂತ್ರ ಹೋರಾಟಗಾರರು ಹಾಗೂ ಮಾಜಿ ಶಾಸಕರಾದ ಲಿಂಗೈಕ್ಯ ಶಿರೂರು ವೀರಭದ್ರಪ್ಪನವರ ಮೂರ್ತಿ ಪ್ರತಿಷ್ಠಾಪನ ಸಮಾರಂಭ ನವೆಂಬರ್ 24 ಸೋಮವಾರ ದಂದು ಆಡೂರು ಗ್ರಾಮದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಯಲಬುರ್ಗಾ, ಒಪ್ಪತ್ತೇಶ್ವರ ಶ್ರೀಗಳು ಗುಳೇದಗುಡ್ಡ, ಗುರುಸಿದ್ದ ಶಿವಾಚಾರ್ಯ ಶ್ರೀಗಳು ಜಿಗೇರಿ, ವಹಿಸಿದ್ದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕ ಬಸವರಾಜ ರಾಯರಡ್ಡಿ ಜ್ಯೋತಿ ಬೆಳಗಿಸಿ ಮಾತನಾಡಿ ಶಿರೂರು ವೀರಭದ್ರಪ್ಪನವರ ಪುತ್ತಳಿ ಅನಾವರಣವು ತ್ವರಿತ ಗತಿ, ಅವಸರ ಅವಸರವಾಗಿ ಮಾಡಿರುವುದು ಏತಕ್ಕೆ ಎಂದು ಗೊತ್ತಿಲ್ಲ. ಇದನ್ನು ಇದಕ್ಕೂ ಮೊದಲು ವಿಷಯವನ್ನು ಪ್ರಸ್ತಾಪಿಸಿದ್ದಾರೆ ಹಾಲಪ್ಪ ಆಚಾರ್, ನಾನು ಸಮಾಜದವರು ಕುಳಿತುಕೊಂಡು ಚರ್ಚೆ ಮಾಡಿ ಇನ್ನೂ ಅದ್ದೂರಿಯಾಗಿ ಮಾಡಬಹುದಿತ್ತು.
ಸಮಾಜ ಎಂದರೆ ಈಗಿನ ಒಂದು ಕಾಲದಲ್ಲಿ ಜಾತಿ ಎಂದುಕೊಳ್ಳುತ್ತಾರೆ. ಜಾತಿಗೂ ಇಂತಹ ಮಹಾನ್ ದಾರ್ಶನಿಕರ ಪುತ್ತಳಿ ಅನಾವರಣಕ್ಕೂ ಸಂಬಂಧವೇ ಇಲ್ಲ. ವೀರಭದ್ರಪ್ಪನವರು ಎಲ್ಲಾ ಸಮಾಜದವರ ಆಸ್ತಿ, ದೇಶದ ಆಸ್ತಿ ಅವರು ಬಿಟ್ಟುಹೋದ ವಿಚಾರಗಳನ್ನು ಇಂದಿನ ಜನಕ್ಕೆ ತಿಳಿಸಬೇಕಾಗಿದೆ. ಸಾಮಾಜಿಕ, ರಾಜಕೀಯ, ವ್ಯವಸ್ಥೆ ಹಾಳಾಗುತ್ತಿವೆ. ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ ಪ್ರಾಮಾಣಿಕತೆ ವಿಚಾರಗಳಿಗೆ ಬೆಲೆನೇ ಇಲ್ಲದಂತಾಗುತ್ತಿದೆ. ಇವತ್ತು ಧರ್ಮ, ಜಾತಿ, ಭ್ರಷ್ಟಾಚಾರ ಇದೆ ಸರ್ವಜನಕ್ಕ ಭಾಗವಾಗಿದೆ. ಯಾಕೆಂದರೆ ನಾವು ಪ್ರಾಮಾಣಿಕರಲ್ಲ ಚುನಾವಣೆ ಪ್ರಾರಂಭವಾಗುತ್ತಿದ್ದಂತೆ ಅಂದಿನಿಂದಲೇ ಭ್ರಷ್ಟಾಚಾರ ಪ್ರಾರಂಭವಾಗುತ್ತವೆ.

ಇಂತಹ ಭ್ರಷ್ಟ ಆಡಳಿತ ಇಲ್ಲದಂತೆ ಶಿರೂರು ವೀರಭದ್ರಪ್ಪನವರು ಸಮಾಜಕ್ಕಾಗಿ ಜೀವನ ಮುಡುಪು ಇಟ್ಟಂತವರು. ಜನರ ಸೇವೆ ಮಾಡುವವರು ಸುಳ್ಳು, ಮೋಸ ,ಹಿಂಸೆ, ಈ ಮೂರು ಶರಣರ ತತ್ವದಲ್ಲಿ ಕಾರ್ಯ ನಿರ್ವಹಿಸಬೇಕು.ಆದರೆ ಇಂದು ಪುತ್ತಳಿ ಅನಾವರಣ ಮಾಡಿ ಪೂಜೆ ಸಮರ್ಪಿಸಿದರೆ ಇಲ್ಲಿಗೆ ಮುಗಿಯಿತು ಎಂದು ತಿಳಿದುಕೊಳ್ಳಬಾರದು. ಇಂತಹ ಮಹಾನ ಪ್ರಾಮಾಣಿಕ ಜನಸೇವೆಯನ್ನು ನಿರ್ವಹಿಸಿದ ಶಿರೂರು ವೀರಭದ್ರಪ್ಪನವರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ನಮ್ಮ ತಾಲೂಕಿನಲ್ಲಿ ಇನ್ನೂ ಇಂತಹ ಶಕ್ತಿ ಉಳಿದುಕೊಂಡಿದೆ ಎಂದಾದರೆ ಹಾಲಪ್ಪ ಆಚಾರ ಅವರಂತಹ ಉತ್ತಮ ಪ್ರಾಮಾಣಿಕ ವಿಚಾರಗಳನ್ನು ಚಿಂತನೆ ಮಾಡುವವರು ಉಳಿದುಕೊಂಡಿದ್ದಾರೆ ಶಿರೂರು ವೀರಭದ್ರಪ್ಪನವರ ಮೂರ್ತಿಯನ್ನು ಕುಕನೂರು ಪಟ್ಟಣದಲ್ಲಿ ಶೀಘ್ರವಾಗಿ ನಿರ್ಮಾಣ ಮಾಡುವುದಾಗಿ ಹೇಳಿದರು.

ಹಾಲಪ್ಪ ಬಸಪ್ಪ ಆಚಾರ ಮಾಜಿ ಸಚಿವರು ಮಾತನಾಡಿ ವೀರಭದ್ರಪ್ಪನವರು ತಮ್ಮ ಬದುಕಿನ ಜೀವಿತಾವಧಿಯಲ್ಲಿ ಉತ್ತಮ ಮೌಲ್ಯಗಳನ್ನು ಆದರಿಸಿಕೊಂಡ ಮಹಾನ್ ವ್ಯಕ್ತಿಯಾಗಿದ್ದು ಅವರ ಪ್ರೇರಣೆಯಿಂದಲೇ ನಾನು ಸಹ ಶಾಸಕ ಹಾಗೂ ಸಚಿವನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣೆ ಎದುರಿಸಿ ಜಯಗಳಿಸಿದ ಮೊದಲ ವ್ಯಕ್ತಿ ವೀರಭದ್ರಪ್ಪನವರಾಗಿದ್ದು ನ್ಯಾಯಾಲಯದ ಮೊರೆ ಹೋಗಿ 50 ದಿನ ಶಾಸಕರಾಗಿದ್ದು ಇತಿಹಾಸವಾಗಿದ್ದು ಇಂಥವರ ಪ್ರತಿಮೆಯನ್ನು ಹನುಮಂತರಡ್ಡಿ ಶಿರೂರು ಗೋವಾ ರಾಜ್ಯದಲ್ಲಿ ಕೆಲಸ ಮಾಡುತ್ತ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಯುವಕರ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನು ಹನುಮಂತರಡ್ಡಿ ಶಿರೂರು ಅಖಿಲ ಗೋವಾ ಮಹಾ ಕನ್ನಡ ಸಂಘ ಅಧ್ಯಕ್ಷರು ನೆರವೇರಿಸಿದರು.
ಡಾ. ಕೆ ಬಿ ಬ್ಯಾಳಿ ಹಿರಿಯ ಸಾಹಿತಿಗಳು ಮತ್ತು ಬಿ ವ್ಹಿ ಶಿರೂರು ಮಾತನಾಡಿದರು.
ಈ ಸಂದರ್ಭದಲ್ಲಿ ಹನುಮಂತರೆಡ್ಡಿ ಶಿರೂರ, ವೀರೇಶ್ ನಾಗುಜಿ, ಭೀಮರೆಡ್ಡಿಪ್ಪ ಹಾಳಕೇರಿ, ಬಸವರಾಜ ರಾಜೂರ, ಶಿವಕುಮಾರ್ ನಾಗಲಾಪುರಮಠ, ಶರಣಪ್ಪ ಹೊಸಮನಿ, ಭೀಮರೆಡ್ಡಿ ಹಾಳಕೇರಿ, ಮಲ್ಲನಗೌಡ ಕೋಣನಗೌಡ, ವೀರಣ್ಣ ಹುಬ್ಬಳ್ಳಿ, ಕೇರಿಬಸಪ್ಪ ನಿಡಗುಂದಿ, ಸಂಗಮೇಶ ಗುತ್ತಿ, ದಾನ ರೆಡ್ಡಿ,
ಡಾ. ಕೆ ರವೀಂದ್ರನಾಥ, ಪ್ರಭುರಾಜ ಚನ್ನಪ್ಪ ಮುತ್ತಾಳ, ಭೀಮರೆಡ್ಡಿಪ್ಪ ಬಸವನ ಗೌಡ ಹಾಳಕೇರಿ, ಶರಣಪ್ಪ ಮೊಟ್ಟಮ್ಮನವರ ಗ್ರಾಮದ ಗುರು ಹಿರಿಯರು ಹಾಗೂ ಇತರರು ಇದ್ದರು.
ಸುದ್ದಿ, ಜಾಹೀರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ.