ಅಸ್ಮಿತಾ ಖೇಲೊ ಇಂಡಿಯಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದ ಖೇಲೋ ಇಂಡಿಯಾ ಒಲಂಪಿಕ್ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿರುತ್ತಾರೆ .

Breaking news -ನಿರ್ಭಯ ದೃಷ್ಟಿ ನ್ಯೂಸ್
ಕುಕನೂರು ಇಂದು ದಿನಾಂಕ 23 /11 /2025 ರಂದು ಜಿಲ್ಲಾ ಕ್ರೀಡಾಂಗಣ ಕೊಪ್ಪಳದಲ್ಲಿ ನಡೆದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆದಿನದಲ್ಲಿ ಬರುವ ಅಸ್ಮಿತಾ ಖೇಲೊ ಇಂಡಿಯಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆ ಕುಕನೂರು ಶಾಲೆಯ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದ ಖೇಲೋ ಇಂಡಿಯಾ ಒಲಂಪಿಕ್ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿರುತ್ತಾರೆ
ಸ್ಪರ್ಧೆಯ ವಿವರ
1) ಶೈಲಾ ಮನ್ನಾಪುರ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ
2) ಮಲ್ಲಮ್ಮ ಗ್ವಾಲಗೇರಿಮಠ ತೃತೀಯ ಸ್ಥಾನ
3) ಅಪೂರ್ವ ಲಿಂಗಾಪುರ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ
4) ಶೈಲಾ ಮನ್ನಾಪುರ್ ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ
5) ಮಲ್ಲಮ್ಮ ಗ್ವಾಲಗೇರಿಮಠ ಜಾವೆಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ
6) ಅನುಷಾ ಸೂಳಿಕೆರೆ 60 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ
7) ಅನುಷಾ ಸೂಳಿಕೇರಿ ಬ್ಯಾಕ್ ಥ್ರೋ ಎಸೆತದಲ್ಲಿ ದ್ವಿತೀಯ ಸ್ಥಾನ
8) ಸುಷ್ಮಾ ಹೊನ್ನುಂಚಿ ಬ್ಯಾಕ್ ಥ್ರೋ ಎಸೆತದಲ್ಲಿ ತೃತೀಯ ಸ್ಥಾನ ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿರುತ್ತಾರೆ.
ಈ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಯವರು ಆಡಳಿತ ಮಂಡಳಿಯವರು ಶಾಲೆಯ ಮುಖ್ಯೋಪಾಧ್ಯರಾದ ವೆಂಕಟೇಶ್ ಬಂಡಿವಡ್ಡರ್ ಸಹ ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜಕುಮಾರ್ ರಾಠೋಡ್ ಶಿಕ್ಷಕರು ಮತ್ತು ಕುಕುನೂರಿನ ಗುರುಹಿರಿಯರು ವಿದ್ಯಾರ್ಥಿಗಳಿಗೆ ಮುಂದಿನ ಕ್ರೀಡಾ ಕೂಟಗಳಲ್ಲಿ ಒಳ್ಳೆಯ ಸಾಧನೆ ಮಾಡಲಿ ಎಂದು ಅಭಿನಂದಿಸಿದ್ದಾರೆ.
ಸುದ್ದಿ ಜಾಹೀರಾತಿಗಾಗಿ , ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ.