
ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಶ್ರೀ ಗ್ರಾಮ ದೇವತೆ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ
ನವೆಂಬರ್ 23 24 25 ಮೂರು ದಿನಗಳು ನೆರವೇರುತ್ತಿತ್ತು.
ಅದ್ದೂರಿಯಿಂದ ಜಾತ್ರೆ ನೆರವೇರತ್ತಿದ್ದು ರಸ್ತೆಯಲ್ಲಿ ನೋಡಿದರೆ ಅಲ್ಲಿ ಇಲ್ಲಿ ತೆಗ್ಗು ದಿಣ್ಣೆಗಳು ಕೂಡಿದ್ದು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಜಾತ್ರೆಯನ್ನು ಮಾಡಬೇಕಾಗಿದೆ.
ರಸ್ತೆಯಲ್ಲಿ ಸಂಚಾರ ಮಾಡುವ ಸಾರ್ವಜನಿಕರು ಮಾಧ್ಯಮದೊಂದಿಗೆ ಮಾತನಾಡಿ ಜಾತ್ರೆ ಅತ್ಯಂತ ವಿಜ್ರಂಭಣೆಯಿಂದ ನೆರವೇರುತ್ತಿದ್ದು. ಗ್ರಾಮದ ಪ್ರಮುಖ ಈ ರಸ್ತೆ ಇದುವರೆಗೂ ಅಭಿವೃದ್ಧಿ ಕಾಣುತ್ತಿಲ್ಲ. ಸಾಕಷ್ಟು ಬಾರಿ ಸಾರ್ವಜನಿಕರು ಬಿದ್ದು ನೋವನ್ನು ಅನುಭವಿಸಿದ ಪ್ರಸಂಗಗಳು ಜರುಗಿದವು ಸಂಬಂಧಪಟ್ಟ ಅಧಿಕಾರಿಗಳ ಕಣ್ಣು ಮುಚ್ಚಿ ಕುಳಿತಿದ್ದಾರೆ ಏನು ಎನ್ನುವ ರೀತಿಯಲ್ಲಿ ಎದ್ದು ಕಾಣುತ್ತಿದೆ. ಸರ್ಕಾರ ಸಾಕಷ್ಟು ರಸ್ತೆ ಸುಧಾರಣೆಗೆ ಹಣ ಬಿಡುಗಡೆ ಮಾಡಿದರು ರಸ್ತೆಗಳು ಇನ್ನೂ ಅಭಿವೃದ್ಧಿ ಕಾಣುತ್ತಿಲ್ಲ.
ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರಸ್ತೆ ಅಭಿವೃದ್ಧಿಯನ್ನು ಮಾಡುತ್ತಾರೆ, ಇಲ್ಲವೋ ?
ನಿರ್ಭಯ ದೃಷ್ಟಿ ನ್ಯೂಸ್
ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು