ಬ್ರೇಕಿಂಗ್ ನ್ಯೂಸ್- ಕೊಪ್ಪಳ:-ನಿರ್ಭಯ ದೃಷ್ಟಿ ನ್ಯೂಸ್

ಜಾತ್ರೆಗಳು ನಾಗರಿಕರಲ್ಲಿ ಭಾವನಾತ್ಮಕ ಗುಣಗಳನ್ನು ಬೆಳೆಸುತ್ತವೆ. ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಭಕ್ತರು ಒಂದೆಡೆ ಸೇರಿ ಹಬ್ಬ ಆಚರಿಸುವುದು ಮಹತ್ವದ್ದಾಗಿದೆ ಎಂದು ಪಿಎಸ್ಐ ಯಶೋಧ ಕಟಕೆ ಹೇಳಿದರು .
ರವಿವಾರ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಗ್ರಾಮ ದೇವತೆ ದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು, ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗಟ್ಟಿಸುವ ಸಾಮರಸ್ಯದ ಸಂಕೇತವಾಗಿದೆ, ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗ ರಚನೆ. ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಸಿಗುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ರಾಜಯೋಗಿನಿ ಯೋಗಿನಿ ಅಕ್ಕನವರು ಈಶ್ವರಿ ವಿದ್ಯಾಲಯ ಕೊಪ್ಪಳದಲ್ಲಿ
ಪ್ರತಿಯೊಬ್ಬರು ಧಾರ್ಮಿಕ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಮಾತನಾಡಬೇಕು . ಗ್ರಾಮೀಣ ಜನತೆಯ ದುಶ್ಚಟಗಳಿಗೆ ದಾಸರಾಗುತ್ತಿರುವ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ಹೊರಬೇಕಾದರೆ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಬದುಕು ಸಾಗಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಅನ್ನಪೂರ್ಣಮ್ಮ ಮನ್ನಾಪುರ ಸಾಹಿತಿಗಳು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಮಹಿಳಾ ಗೋಷ್ಠಿಯಲ್ಲಿ ಪ್ರದರ್ಶನ.
ಶ್ರೀ ಗ್ರಾಮ ದೇವತೆಯಾದ್ಯಾಮಮ್ಮ ದೇವಿ ಜಾತ್ರಾ ಮಹೋತ್ಸವ
ನವೆಂಬರ್ 23 24 25 ಮೂರು ದಿನಗಳ ನೆರವೇರುವುದು ನವೆಂಬರ್ 23 ರಂದು ಬೆಳಿಗ್ಗೆ 5:00 ಗಂಟೆಗೆ ಪೂರ್ಣಕುಂಭದೊಂದಿಗೆ ಗಂಗಾ ಸ್ಥಳಕ್ಕೆ ಹೋಗಿ ನೇರವಾಗಿ ಚೌಕಿ ಕಟ್ಟಿಗೆ ರಾಜ್ಯದ ವಿವಿಧ ಕಲಾತಂಡಗಳಿಂದ ಹಾಗೂ ಬಾಜಾ ಭಜಂತ್ರಿ ವಿದ್ಯಾ ಶ್ರೀ ಗ್ರಾಮ ದೇವತೆಯ ಮೆರವಣಿಗೆಯ ಮೂಲಕ ಚೌಕಿಕಟ್ಟೆಗೆ ವರೆಗೆ ನೆರವೇರಿಸಲಾಯಿತು.
ಒಂದು ಗಂಟೆಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಮಹಿಳಾ ಗೋಷ್ಠಿ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭವಾಯಿತು.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:00 ರವರೆಗೆ ಗ್ರಾಮದ ಭಕ್ತಾದಿಗಳಿಂದ ಉಡಿ ತುಂಬುವ ಕಾರ್ಯಕ್ರಮ ಸಾಯಂಕಾಲ ಭಕ್ತಿ ಸಂಗೀತ ನೆರವೇರಿತು ಜಾನಪದ ಕಲಾವಿದರು ಮಹೇಶ್ ತಳವಾರ್ ಮತ್ತು ಗ್ಯಾನಪ್ಪ ಬಡಿಗೇರ್ ವಾದಕರಿಂದ ನೆರವೇರಿಸಲಾಯಿತು.
ಸಾಯಂಕಾಲ 5:00 ರಿಂದ ಧಾರ್ಮಿಕ ಹಾಗೂ ಅನುಭವಿಗಳ ಅಮೃತ ಚಿಂತನ ಹಾಗೂ ಕೃಷಿ ಚಿಂತನ ನೆರವೇರಿಸುವ ಕಾರ್ಯಕ್ರಮವನ್ನು ಆಯ್ಕೆ.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವನಜಾ ಗಂಗಾಧರ್ ಪುರೋಹಿತ್ ವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಶಿವರಂಜಿನಿ ಹಿರೇಗೌಡ್ರು ಮತ್ತು ಮಹಾದೇವಿ ಸೋಮಪ್ಪ ಬೈರಣ್ಣವರ್ ನೆರವೇರಿಸಿದರು,
ಈ ಸಂದರ್ಭದಲ್ಲಿ
ಶಿವಮ್ಮಶಪ್ಪ ಬೈರಣ್ಣವರ್ ಈ ಗ್ರಾಮ ಪಂಚಾಯತ್ ಅಧ್ಯಕ್ಷರು, ಶೋಭಾ ಬಸವರಾಜ್ ಮೇಟಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್ ಮಾಜಿ ನಗರಸಭೆ ಅಧ್ಯಕ್ಷರು ಕೊಪ್ಪಳ, ಕೋಮಲಕ್ಕೆ ಕುದುರೆಮೋತಿ ಅಧ್ಯಕ್ಷರು ಅಕ್ಕಮಹಾದೇವಿ ಮಹಿಳಾ ಮಂಡಲ ಕೊಪ್ಪಳ, ಜ್ಯೋತಿ ಮಂಜುನಾಥ್ ಗೊಂಡಬಾಳ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಕೊಪ್ಪಳ, ಗ್ರಾಮದ ಗುರುಹಿರಿಯರು ಹಾಗೂ ಮಹಿಳೆಯರು ಸಕಲ ಸದ್ಭಕ್ತರು ಮಂಡಳಿಯವರು ಎಟ್.
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು
