ಇವರೇನು ಡಿ ಗ್ರೂಪ್ ನೌಕರರು ಅಥವಾ ಶಾಲೆಯ ಮುಖ್ಯಸ್ಥರು ?

ಸಾರ್ವಜನಿಕರಿಗೆ ಡಿ ಗ್ರೂಪ್ ಸಿಬ್ಬಂದಿಯಿಂದ ಅನುಚಿತ ವರ್ತನೆ:
ನೌಕರಸ್ಥಳ ವಿರುದ್ದ ಪಾಲಕರು, ಸಾರ್ವಜನಿಕರ ಆಕ್ರೋಷ

ಕುಕನೂರ ತಾಲೂಕಿನ ಮಂಗಳೂರ ಗ್ರಾಮದ ಕೆಪಿಎಸ್ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ವಿಭಾಗದ ಎಸ್ ಡಿ ಎಂ ಸಿ ರಚನೆಯ ಸಭೆಯಲ್ಲಿ ಪ್ರೌಡ ಶಾಲೆಯ ಡಿ ಗ್ರೂಪ್ ನೌಕರಸ್ಥೆ ಶಹಿರಾಬಾನು ಗಂ ಮಲಂಗಸಾಬ ಯಲಬುರ್ಗಿ ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಹಾಗೂ ಪತ್ರಕರ್ತರಿಗೆ ಏಕಾಏಕಿಯಾಗಿ ಬಂದು ಅನುಚಿತವಾಗಿ ವರ್ತನೆ ಮಾಡಿ ದಮ್ಕಿ ಹಾಕಿದ್ದಾರೆ.

ಬುಧವಾರ ಎಸ್ ಡಿ ಎಂ ಸಿ ರಚನೆಯ ಸಲುವಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಪಾಲಕರ ಸಭೆ ಕರೆದಿದ್ದರು, ಪಾಲಕರು ಹಾಗೂ ಸಾರ್ವಜನಿಕರು ಶಾಲಾ ಆವರಣದಲ್ಲಿ ಸ್ವಶ್ಚತೆ ಇಲ್ಲ, ಇಲ್ಲಿರುವ ಡಿ ಗ್ರೂಪ್ ನೌಕರಸ್ಥರ ಮುಖಾಂತರ ಸ್ವಶ್ಚತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು, ನಂತರ ಸಭೆಯ ಪಕ್ಕದಲ್ಲೆ ಕೂತಿದ್ದ ಶಾಲೆಯ ಡಿ ಗ್ರೂಪ್ ನೌಕರಸ್ಥೆ ಶಹಿರಾಬಾನು ಸಾರ್ವಜನಿಕರಿಗೆ ನಿಂದಿಸಿ, ಬಾಯಿಗೆ ಬಂದ ಹಾಗೇ ಬೈದು ದಮ್ಕಿ ಹಾಕಿದ್ದಾರೆ. ನಾನು ಕೆಲಸ ಮಾಡುವುದಿಲ್ಲ, ನನ್ನ ಏನು ಮಾಡೊಕೆ ಆಗಲ್ಲ, ನಾನು ಕೆಲಸ ಮಾಡಿದರು ಸಂಬಳ ಬುರುತ್ತೆ, ಮಾಡದಿದ್ದರು ಬರುತ್ತೆ ಎಂದು ಶಾಲಾ ಉಪಪ್ರಾಂಶುಪಾಲರಿಗೆ ಹಾಗೂ ಸಾರ್ವಜನಿಕರಿಗೆ ಬೇಜವಾಬ್ದಾರಿಯುತವಾಗಿ ಮಾತನಾಡಿ, ಕೆಲಸದಲ್ಲಿ ನಿರ್ಲಕ್ಷ್ಯ ತೊರಿದ್ದಾರೆ.

ತಾಲೂಕಿನ ಮಂಗಳೂರ ಗ್ರಾಮದ ಕೆಪಿಎಸ್ ಪ್ರೌಡ ಶಾಲೆಯ ಡಿ ನೌಕರಸ್ಥೆ ಶಹಿರಾಬಾನು ಗಂ ಮಲಂಗ ಸಾಬ ಯಲಬುರ್ಗಿ ಶಾಲೆಯಲ್ಲಿ ಕೆಲಸ ಮಾಡೊದೆ ಇಲ್ಲ ಎಂದು ಸಾರ್ವಜನಿಕ ದೂರುಗಳು ಬಂದಿವೆ, ಸಭೆಯಲ್ಲಿ ಹಾಜರಿದ್ದ ಪತ್ರರ್ಕರಿಗೂ ಸಹ ಬೈದು, ನೀವೂ ಏನು ಮಾಡೊಕೆ ಆಗಲ್ಲ, ನೀವೂ ಏನು ಅಂತ ಎಲ್ಲರಿಗೂ ಗೊತ್ತಿರುತ್ತೆ ಎಂದು ಪತ್ರಕರ್ತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

ಉಪಪ್ರಾಂಶುಪಾಲರ ಮಾತು ಕೇಳದ ನೌಕರಸ್ಥೆ!
ಸಭೆಯಲ್ಲಿ ಜಗಳ ಪ್ರಾರಂಭವಾಗುತ್ತಿದ್ದಂತೆ , ಉಪಪ್ರಾಂಶುಪಾಲರು ” ರೀ ಸುಮ್ಮನೆ ಇರ್ರಿ, ಯಾಕೆ ಜಗಳ ಮಾಡ್ತಿರಾ, ಬರೀ ಇದೆ ಕಥೆ ಆಯ್ತು ನಿಮ್ದು, ಈಗ ಸದ್ಯಕ್ಕೆ ಸುಮ್ಮನೆ ಇರಿ ಎಂದರು, ಅವರ ಮಾತಿಗೆ ಬೆಲೆ ಕೊಡದೆ ಮತ್ತೆ ಸಾರ್ವಜನಿಕರ ವಿರುದ್ದ ಜಗಳ ಮಾಡಲು ಶುರು ಮಾಡಿದರು, ಅಸಹಾಯಕರಾದ ಶಾಲಾ ಆಡಳಿತ ಮಂಡಳಿಯವರು ಮೌನಕ್ಕೆ ಶರಣಾದರು.

ಪ್ರಾಂಶುಪಾಲರು ಸಹ ಕೈಮುಗಿದರು, ಸುಮ್ಮನಿರದ ನೌಕರಸ್ಥೆ!

ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡಿದ ನೌಕರಳನ್ನು ಸಮಾಧಾನಿಸಿ, ಯಾಕೆ ಪಾಲಕರಿಗೆ, ಸಾರ್ವಜನಿಕರಿಗೆ ಬೈಯುತ್ತಿಯಾ ಸುಮ್ಮನಿರಮ್ಮ ಅವರದು ತಪ್ಪೆನಿದೆ, ಸುಮ್ನೆ ಕೆಲಸ ಮಾಡು ಹೋಗು ಎಂದರು, ಹಿರಿಯ ಅಧಿಕಾರಿಗೂ ಸಹ ಗೌರವ ಕೊಡದೆ ದರ್ಪದಿಂದ ಸಾರ್ವಜನಿಕರೊಂದಿಗೆ ವಾಗ್ವಾದಕ್ಕೆ ಮುಂದಾದರು. ಕೊನೆಗೆ ಪ್ರಾಂಶುಪಾಲರು ಕೈಮುಗಿದು ಸುಮ್ನಿರಮ್ಮ ಎಂದರು,
ಶಹಿರಾಬಾನು ಮಾತು ಕೇಳಲೇ ಇಲ್ಲ!

ಶಿಸ್ತು ಕ್ರಮಕ್ಕೆ ಮುಂದಾಗುತ್ತಾ ಇಲಾಖೆ:
ಶಹಿರಾಬಾನು ಸಾರ್ವಜನಿಕರ ಜೋತೆ ಅಸಭ್ಯವಾಗಿ ಮಾತನಾಡಿ ಕರ್ತವ್ಯ ಲೋಪ ಎಸಗಿದ್ದಾರೆ.‌
ಪಾಲಕರಿಗೆ, ಸಾರ್ವಜನಿಕರಿಗೆ, ಪತ್ರಕರ್ತರಿಗೆ ಹಾಗೂ ಶಾಲಾ ಆಡಳಿತ ಮಂಡಳಿಯವರಿಗೆ ಗೌರವ ಕೊಡದೆ ಶಿಷ್ಟಾಚಾರ, ಕಾನೂನು ಪಾಲನೆ ಮಾಡದೆ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ದರ್ಪದಿಂದ ದುರ್ವರ್ತನೆ ತೊರಿದ ಶಹಿರಾಬಾನು ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಇಲ್ಲವೇ ಬೇರೆ ಶಾಲೆಗೆ ನಿಯೋಜನೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಂದರ್ಭದಲ್ಲಿ ಪೋಷಕರಾದ ಗಟ್ಟೆಪ್ಪ ಉಮಚಗಿ, ಸಿದ್ದಪ್ಪ ಬಳಿಗಾರ್, ನಿಂಗನಗೌಡ ಪೊಲೀಸ್ ಪಾಟೀಲ್ , ಸುಭಾಸ ಮದಕಟ್ಟಿ, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ಶರಣಪ್ಪ ಹ್ಯಾಟಿ, ಕರವೇ ಅಧ್ಯಕ್ಷ ನಿಲನಗೌಡ ಪೊಲೀಸ್ ಪಾಟೀಲ್,ವರದಿಗಾರ ಅನಿಲ್ ಕುಮಾರ್ ಎಂ ಕಲ್ಭಾವಿ, ವಿರೇಂದ್ರ ಈಳಿಗೇರ್, ಮುತ್ತು ತಳವಾರ, ಚನ್ನಪ್ಪಗೌಡ ಪೊಲೀಸ್ ಪಾಟೀಲ್, ಬಸವರಾಜ ಕುದರಿಕೊಟಗಿ, ಶಿವು ಬಂಡಿ, ನಾಗರಾಜ ಬಂಡಿ, ಸಂತೋಷ ನಿಲಗೇರ್, ಇನ್ನೂ ಅನೇಕ ಪಾಲಕರು, ಪೋಷಕರು ಉಪಸ್ಥಿತರಿದ್ದರು.‌

ನಿರ್ಭಯ ದೃಷ್ಟಿ ನ್ಯೂಸ್ಚ ಸಂಪಾದಕರು ಚನ್ನಯ್ಯ  ಹಿರೇಮಠ ಕುಕನೂರು

Leave a Reply

Your email address will not be published. Required fields are marked *