ಕುಕುನೂರು ತಾಲೂಕಿನ ಅರಕೇರಿ ಗ್ರಾಮದ
ಸರಕಾರಿ ಪ್ರೌಢಶಾಲೆಯಲ್ಲಿ, ಪೋಷಕ – ಶಿಕ್ಷಕರ ಮಹಾಸಭೆ ಶುಕ್ರವಾರ 14.11.2025ರಂದು ನೆರವೇರಿಸಲಾಯಿತು.

ಎಸ್,ಡಿ,ಎಮ್,ಸಿ ಅಧ್ಯಕ್ಷರು, ಸದಸ್ಯರು, ಗ್ರಾ,ಪಂ ಸದಸ್ಯರು ಮತ್ತು ಪೋಷಕರನ್ನು ಊರಿನ ನಾಗರಿಕರನ್ನು ವಿಧ್ಯಾರ್ಥಿಗಳು ಪುಷ್ಪಾರ್ಪಣೆ ಪುಷ್ಪಾರ್ಪಣೆ ನೀಡುವುದರ ಮೂಲಕ ಕರೆತರಲಾಯಿತು. ಲಕ್ಷ್ಮವ್ವ ಮ್ಯಾಗಳಕೇರಿ ಎಸ್,ಡಿ,ಎಮ್,ಸಿ ಅಧ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ವಾಗತ ಪುಷ್ಪಾರ್ಪಣೆ ಮತ್ತು ಪ್ರಾಸ್ತಾವಿಕ ನುಡಿಗಳನ್ನು , ಹೊನ್ನೂರಲಿ ಸ,ಶಿ ಸಿರ್ವಹಿಸಿದರು.
ಕಾರ್ಯಕ್ರಮದ ನಿರೂಪನೆಯನ್ನು ರೇವಣಸಿದ್ದಪ್ಪ ಸ.ಶಿ ಸಿರ್ವಹಿಸಿದರು.
ಯಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಕುಮಾರಿ ಯಶೋಧಾ ಬಡಿಗೇರ ವಿಧ್ಯಾರ್ಥಿನಿ ನೆಡೆಸಿ ಕೊಟ್ಟರು. ಸಭೆಯ ಉದ್ದೇಶಗಳನ್ನು ಪಾಲಕ ಪೋಷಕರ ಕರ್ತವ್ಯಗಳನ್ನು ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರವನ್ನು ಸವಿಸ್ತರವಾಗಿ ಕಲ್ಲಪ್ಪ ಗಡಾದ ಸ,ಶಿ ರವರು ಮನವರಿಕೆ ಮಾಡಿದರು.

ಸರಕಾರದ ನಿರ್ದೇಶನದಂತೆ ಶಾಲೆಯಲ್ಲಿ ತರಗತಿ ಬೋಧನೆ ಆಟೋಟಗಳು ಪ್ರತಿಭಾ ಕಾರಂಜಿ, ವಿಜ್ಞಾನ ವಸ್ತು ಪ್ರದರ್ಶನ, ಪರಿಸರ ದಿನಾಚರಣೆ,ಸಂವಿಧಾನ ಪೀಟಿಕೆ ಓದುವುದು, ಘಟಕ ಪರೀಕ್ಷೆ . ಎಲ್,ಬಿ,ಎ ಹಾಗೂ ಇತರೆ ಪರೀಕ್ಷೆಗಳ ಬಗ್ಗೆ ಶ್ರೀ, ಬಸವರಾಜ ಮೇಟಿ ಇವರು ಪಾಲಕ ಪೋಷಕರಿಗೆ ತಿಳಿಸಿದರು ಈ ಮಧ್ಯ ಕೆ,ಎಸ್,ಇ,ಎ,ಬಿ ಮಂಢಳಿಯ ನಿರ್ದೇಶಕರ 10 ನೇ ತರಗತಿಗೆ ಸಂಬಂದಿಸಿದ ವಿಡಿಯೋವನ್ನು ತೋರಿಸಲಾಯಿತು.
ಮಕ್ಕಳಿಗೆ ಶಾಲೆಯಲ್ಲಿ ನೀಡಲಾಗುವ ಎಲ್ಲ ಪ್ರೋತ್ಸಾಹದಾಯಕ ಸೌಲಬ್ಯಗಳ ಬಗ್ಗೆ ತಿಳಿಸಲಾಯಿತು.
ಮುಖ್ಯ ಶಿಕ್ಷಕರು ಶ್ರೀ ಬಾಷುಸಾಬ ರವರು ಪೋಕ್ಸೋ ಕಾಯ್ದೆ ಆರ್,ಟಿ,ಇ, ಮತ್ತು ಮಕ್ಕಳ ಸುರಕ್ಷತಾ ನೀತಿ ಮಕ್ಕಳ ಹಕ್ಕುಗಳು ಬಾಲ್ಯ ವಿವಾಹ ದುಷ್ಪರಿಣಾಮಗಳು, ಕಡ್ಡಾಯ ಶಿಕ್ಷಣ ಮತ್ತು ಕಾನೂನು ಕ್ರಮಗಳ ಬಗ್ಗೆ ಸವಿಸ್ತರವಾಗಿ ತಿಳಿಸಿದರು ನಂತರ ದೈಹಿಕ ಶಿಕ್ಷಕರಾದ ಶರಣಪ್ಪ ವೀರಾಪೂರ ಇವರು ಪಾಲಕರ ಜವಾಬ್ದಾರಿ ಗೈರು ಹಾಜರಿ ಮಕ್ಕಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ವೀರೇಶ ಗಡಾದ ವಂದನೆಗಳನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮವನು ಯಶಸ್ವಿಗಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವರ್ಗದವರು ಮತ್ತು ಪೋಷಕರು ಗ್ರಾಮದ ಗುರು ಹಿರಿಯರು ಇತರರು ಇದ್ದರು
ಕ್ಷಣ ಕ್ಷಣದ ಸುದ್ದಿಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚೆನ್ನಯ್ಯ ಹಿರೇಮಠ ಕುಕನೂರು ಸಂಪರ್ಕಿಸಿ.📞9164386713