ಶ್ರೀ ಗುದ್ದೇಶ್ವರ (ರುದ್ರಮುನೇಶ್ವರ) ದೇವಸ್ಥಾನ ಜಾತ್ರಾ ಮಹೋತ್ಸವ
2025-26
ಹರಾಜು ಪ್ರಕಟಣೆ

ಕುಕನೂರು:-
ಈ ಮೂಲಕ ಯಾವತ್ತೂ ಸಾರ್ವಜನಿಕರಲ್ಲಿ ತಿಳಿಸುವುದೇನೆಂದರೆ, 2025-26ನೇ ಸಾಲಿನ ಶ್ರೀ ಗುದ್ದೇಶ್ವರ (ಶ್ರೀ ರುದ್ರಮುನೇಶ್ವರ) ದೇವಸ್ಥಾನ ಕಮೀಟಿ ಗುದ್ದೆಪ್ಪನಮಠ-ಕುಕನೂರ ಇವರಿಂದ ದಿನಾಂಕ : 18-11-2025 ಮಂಗಳವಾರ ಕುಕನೂರ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯ ಚಾವಡಿಯಲ್ಲಿ ದೇವಸ್ಥಾನ ಕಮೀಟಿಯ ಯಥಾ ಸ್ಥಿತಿಯಲ್ಲಿರುವ ಹುಣಿಸಿಗಿಡದ ಹಣ್ಣಿನ ಹರಾಜು ಕಾಯಿಚೀಟಿ,ಬಜಾರ,ತೊಟ್ಟಿಲು ಹರಾಜು ಪ್ರಕ್ರಿಯೆ ನಡೆಯಲಿದ್ದು ಸದರಿ ಹರಾಜು ಪ್ರಕ್ರಿಯೆಯಲ್ಲಿ ಕುಕನೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಆಸಕ್ತರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ಮಾನ್ಯ ತಹಸಿಲ್ದಾರರು ಕುಕನೂರ ಹಾಗೂ ಅಧ್ಯಕ್ಷರು ಗುದ್ದೇಶ್ವರ ದೇವಸ್ಥಾನ ಕಮಿಟಿ ಇವರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
ಕಾರಣ ಆಸಕ್ತರು ಕುಕನೂರಿನ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ (ಚೌವಡಿ) ಹರಾಜು ಪ್ರಕ್ರಿಯೆ ನಡೆಯಲಿದೆ.
ಹರಾಜಿನ ಕರಾರುಗಳು:-
1) ಹುಣಸೆ ಹಾನ ಹರಾಜಿಗೆ ಭಾಗವಹಿಸುವವರು ಮುಂಗಡವಾಗಿ ರೂ 10,000-00 ಹಣವನ್ನು ಮಠದ ಕಾರ್ಯದರ್ಶಿ ಇವರಲ್ಲಿ ಕಟ್ಟಿ ಹರಾಜಿನಲ್ಲಿ ಭಾಗವಹಿಸತಕ್ಕದ್ದು ಹರಾಜುದಾರರು ಬಾಂಡ, ಮತ್ತು ಮನೆ ಉತಾರ, ಪಹಣಿ ಪತ್ರಿಕೆ ಕೊಡತಕ್ಕದ್ದು.
2) ಹರಾಜಿನಲ್ಲಿ ಹೆಚ್ಚಿನ ಹಣ ಹರಾಜು ಮಾಡಿದರೆ ಹರಾಜು ಆದ ಮೊತ್ತದ ಕಾಲು ಭಾಗ (1/4) ಹಣವನ್ನು ಹರಾಣ ಮುಗಿದ ತಕ್ಷಣ ಹಣ ಪಾವತಿ ಮಾಡಿ ರಶೀದಿ ಪಡೆಯತಕ್ಕದ್ದು ಒಂದು ವೇಳೆ ಈ ಹಣವನ್ನು ಕಟ್ಟದೇ ಇದ್ದ ಪಕ್ಷದಲ್ಲಿ ಕಟ್ಟಿದ 10,000-00 ರೂ. ಹಣ ಮುಟ್ಟಗೋಲು ಹಾಕಿಕೊಳ್ಳಲಾಗುವುದು. ಮುಂಗಡ ಹಣ ಪಾವತಿ ಮಾಡಿದವರು ಮಾತ್ರ ಹರಾಜಿನಲ್ಲಿ ಭಾಗವಹಿಸಿತಕ್ಕದ್ದು,
3) ಹರಾಜು ಹಿಡಿದವರು ಉಳಿದ ಹಣವನ್ನು 7 ದಿನದಲ್ಲಿ ಪೂರ್ತಿ ಹಣ ಪಾವತಿ ಹರಾಜು ಆದ ಬಗ್ಗೆ ತಹಶೀಲ್ದಾರರಿಂದ ದೃಢೀಕರಣ ಪತ್ರವನ್ನು ಕೊಟ್ಟ ನಂತರವ ಹಿಡಿದ ಹರಾಜಿನ ಬಗ್ಗೆ ಕಾರ್ಯಪ್ರವೃತ್ತರಾಗತಕ್ಕದ್ದು.
4) ಹರಾಜು ಆದ ತಕ್ಷಣ ಹರಾಜಿನ ಕರಾರುಗಳಿಗೆ ಒಪ್ಪಿ 200-00 ರೂ ಛಾಪಾ ಕಾಗದದ ಹಾಗೂ ಆಧಾರ್ ಕಾರ್ಡ ಝರಾಕ್ಸ್ ಪ್ರತಿ ಮೇಲೆ ಸಮಂಜಸ ಜಾಮೀನುದಾರರು ನೊಂದಣಿ ಪತ್ರ ಕೊಡತಕ್ಕದ್ದು ಮತ್ತು ಸದ್ರಿ ಮೊತ್ತಕ್ಕೆ ಸೂಕ್ತ ಆಸ್ತಿಯನ್ನು ಬರೆದು ಕೊಡತಕ್ಕದ್ದು.
5) ನಿಗಧಿಪಡಿಸಿದ ಅವಧಿ ಒಳಗೆ ಹಣ ಪಾವತಿ ಮಾಡದೇ ಇದ್ದಲ್ಲಿ ಸದ್ರಿ ಹರಾಜು ಆದ 1/4 ಅಂಶ ಕಟ್ಟಿದ ಹಣವನ್ನು ದೇವಸ್ಥಾ ಕಮೀಟಿಗೆ ಒಟ್ಟುಗೋಲು ಹಾಕಿಕೊಂಡು ಪುನಃ ಹರಾಜು ನಡೆಸಲಾಗುವದು.
ಶ್ರೀ ಗುದ್ದೇಶ್ವರ ದೇವಸ್ಥಾನ ಕಮೀಟಿ ಗುದ್ನೇಪ್ಪನಮಠ ಹೆಚ್. ಪ್ರಾದೇಶ
ತಹಶೀಲ್ದಾರರು ಕುಕನೂರ ಹಾಗೂ ಅಧ್ಯಕ್ಷರು
ಶ್ರೀ ಗುದ್ದೇಶ್ವರ ದೇವಸ್ಥಾನ ಕಮೀಟಿ ಗುದ್ನೇಪ್ಪನಮಠ ಇವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.
ಕ್ಷಣ ಕ್ಷಣದ ಸುದ್ದಿಗಾಗಿ,
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ.📞9164386713