ಶಾಂತಿನಿಕೇತನ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಕುಕನೂರು ತಾಲೂಕಿನ ಮಂಗಳೂರು ಗ್ರಾಮದ ಮಂಗಳೇಶ್ವರ ಶಿಕ್ಷಣ ಸಂಸ್ಥೆ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿಗೆ ನೀರು ಹಾಕುವ ಮೂಲಕ ಶಾಲೆಯ ಮಕ್ಕಳಿಂದ ಚಾಲನೆ ನೀಡಲಾಯಿತು. ನಂತರ ರವೀಂದ್ರನಾಥ ಕೊಟ್ರಪ್ಪ ತೋಟದ ಪತ್ರಕರ್ತರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮಾತನಾಡಿ ಮಕ್ಕಳು ನಮ್ಮ ಉಜ್ವಲ ನಾಳೆಯ ಭರವಸೆಗಳನ್ನು ಮತ್ತು ನಮ್ಮ ಸಂತೋಷದ ಕನಸುಗಳನ್ನು ಹೊತ್ತಿರುವ ಕುಸುಮಗಳು ಆ ಮಕ್ಕಳು ಜೀವನದ ಸುಖವನ್ನು ಸವಿಯುವ ಹಕ್ಕನ್ನು ಹೊಂದಲು ದೇಶದ ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಲು ಅವಕಾಶ ನೀಡುವುದಕ್ಕಾಗಿ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಸವಿ ನೆನಪಿಗಾಗಿ ಈ ದಿನದಂದು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನವಂಬರ್ 14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮೇಘನಾ ರವೀಂದ್ರನಾಥ ತೋಟದ, ಮುಖ್ಯ ಗುರುಗಳಾದ ವೀರೇಶ ಕುಂಬಾರ, ಶಿಕ್ಷಕರಾದ ದೇವಣ್ಣ ದೇಸಾಯಿ, ಶರಣಪ್ಪ ಗೊಂಡಬಾಳ, ಸುಜಾತ ಕಂದಗಲ್, ಶಿವಲೀಲಾ ಕಂದಗಲ್, ದೀಪಾ ಬಾರಕೇರ, ನಾಗರತ್ನ ದೊಡ್ಡಮನಿ, ಅಪೂರ್ವ ಹಾಳಕೇರಿ ಶಿರೂರು, ಮಂಜುಳಾ ಪತ್ತಾರ,ಆಯಾ ಮುದಕಮ್ಮ ಹಡಪದ, ಯಮನಪ್ಪ, ದೇವಪ್ಪ ದೇಸಾಯಿ, ಸವಿತಾ, ಪಾಲಕ ಪೋಷಕರು, ಮುದ್ದು ಮಕ್ಕಳು ಹಾಜರಿದ್ದರು.
ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಕ್ಷಣ ಕ್ಷಣದ ಸುದ್ದಿಗಾಗಿ ,ಜಾಹೀರಾತಿಗಾಗಿ
ನಿರ್ಭಯ ದೃಷ್ಟಿ ನ್ಯೂಸ್
ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು
📞9164386713