110 ನೇಯ ಕೆ.ಎಲ್.ಐ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ””

ಕುಕನೂರ ಪಟ್ಟಣದ ಕೆ.ಎಲ್.ಐ. ಸಂಸ್ಥೆಯ
ಪದವಿಪೂರ್ವ ಮಹಾವಿದ್ಯಾಲಯದಲ್ಲಿ
“110 ನೇಯ ಕೆ.ಎಲ್.ಐ. ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು 13.11.2025 ದಂದು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಗಂಗಾವತಿಯ ಕೆ.ಎಲ್.ಐ. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಎಸ್.ಸಿ. ಪಾಟೀಲರ ಅತಿಥಿಗಳು ಉಪನ್ಯಾಸ ನೀಡುತ್ತಾ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪ್ರಭಾಕರ ಕೋರೆಯವರು ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಾಗ ಕೇವಲ 34 ಸಂಸ್ಥೆಗಳಿದ್ದು ಈಗ 316ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು. ಈ ಸಂಸ್ಥೆಯು “ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಸಹ ನೀಡುತ್ತಿದೆ” ಎಂದು ಶ್ಲಾಘಿಸಿದರು.
ಕೆ.ಎಲ್.ಐ. ಕಾಲೇಜಿನ ಉಪನ್ಯಾಸಕರಾದ ಎಸ್.ಎಸ್. ರಾಜೂರರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಕುಕನೂರಿನಂತಹ ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೆ.ಎಲ್.ಐ. ಸಂಸ್ಥೆಯು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಒಳ್ಳೆಯ ಕಾರ್ಯ ಎಂದು ಹೇಳಿದರು.
ಕೆ.ಎಲ್.ಐ. ಕಾಲೇಜಿನ ಇನ್ನೋರ್ವ ಉಪನ್ಯಾಸಕರಾದ ಕುಂಟೆಪ್ಪ ಬೇವೂರರವರು ಸಂಸ್ಥಾಪನಾ ದಿನಾಚರಣೆಯ ಬಗ್ಗೆ ಉಪನ್ಯಾಸ ನೀಡುತ್ತಾ
ಏಳು ಜನ ಶಿಕ್ಷಕರಿಂದ ಸ್ಥಾಪಿಸಲಾಗಿದೆ ಕೆ.ಎಲ್.ಐ. ಸಂಸ್ಥೆಯು ಇಂದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹದಾಕಾರವಾಗಿ ಬೆಳೆದಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಅರುಣಕುಮಾರ ಹಿರೇಮಠ ರವರು ಮಾತನಾಡುತ್ತಾ ಸಂಸ್ಥಾಪಕ ಆಜೀವರಾದ ಎಸ್.ಎಸ್. ಬಸವನಾಳ, ಬಿ.ಬಿ. ಮಮದಾಪೂರ, ಎಚ್.ಎಫ್. ಕಟ್ಟಿಮನಿ, ಎಂ.ಆರ್. ಸಾಖರೆ, ಬಿ.ಎಸ್. ಹಂಚಿನಾಳ, ಪಿ.ಆರ್. ಚಿಕ್ಕೋಡಿ, ವಿ.ವಿ. ಪಾಟೀಲ ಮತ್ತು ಸಂಸ್ಥಾಪಕರಾದ ವಿ.ಜಿ. ನಾಯಕ ಬಹಾದ್ದೂರ ದೇಸಾಯಿ, ರಾವ ಬಹಾದ್ದೂರ ಆರ್.ಸಿ. ಅರಟಾಳ, ರಾವ ಬಹಾದ್ದೂರ ವೈಜಪ್ಪ ಅನಿಗೋಳ ಮಹಾದಾನಿಗಳಾದ ರಾಜಾಲಖಮಗೌಡ ಸರದೇಸಾಯಿ, ಭೂಮರಡ್ಡಿ ಬಸಪ್ಪನವರು ಹಾಗೂ ಶಿರಸಂಗಿ ಲಿಂಗರಾಜರು, ತಮ್ಮ ತ್ಯಾಗ ಬಲಿದಾನಗಳ ಮೂಲಕ ಪ್ರಾತಃಸ್ಮರಣೀಯ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶರಣಪ್ಪ ಉಮಚಗಿಯವರು ಮಾತನಾಡುತ್ತಾ ಕೆ.ಎಲ್.ಐ. ಸಂಸ್ಥೆಯ ಸಪ್ತರ್ಷಿಗಳು ಉತ್ತರ ಕರ್ನಾಟಕದ ಜನತೆ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಕೆ.ಎಲ್.ಐ. ಸಂಸ್ಥೆಯನ್ನು ಸ್ಥಾಪಿಸಿದರು. “ಅಂದು ಅವರು ನೆಟ್ಟ ಸಣ್ಣ ಸಸಿ ಇಂದು ಹೆಮ್ಮರವಾಗಿ ಬೆಳೆದು ವಿದೇಶಕ್ಕೂ ತನ್ನ ಬಾಹುಗಳನ್ನು ಚಾಚಿದೆ ಎಂದು ಹೇಳಿದರು”.
ಕುಮಾರ. ಸರ್ವೇಶ ಕುಕನೂರ ವಿದ್ಯಾರ್ಥಿಯು ಪ್ರಾರ್ಥಿಸಿದರು. ನೇತ್ರಾವತಿ ಉಳ್ಳಾಗಡ್ಡಿ, ಉಪನ್ಯಾಸಕಿಯು ಅತಿಥಿಗಳನ್ನು ಸ್ವಾಗತಿಸಿದರು. ಕಿರಣಕುಮಾರ ಪುಷ್ಪಾರ್ಪಣೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಂಜುಳಾ ಎಂ. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪೂಜಾ ಸಸಿಮಠ, ಉಪನ್ಯಾಸಕರು ವಂದನಾರ್ಪಣೆಗೈದರು. ಸಮಾರಂಭದಲ್ಲಿ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕ ಬಂಧುಗಳು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಸೇರಿವೆ.
ಕ್ಷಣ ಕ್ಷಣದ ಸುದ್ದಿಗಾಗಿ ಸಂಪರ್ಕಿಸಿ:-
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು