ಹಿಂದಿನ ಶಾಸಕರು ಭೂಮಿ ಕೊಡಿಸಿದ್ದಾರೆ ಅಂತಾರಲ್ಲಾ, ಆ ಭೂಮಿಯನ್ನು ನಾಳೆಯೇ ಕೊಡಿಸಿ ಅಲ್ಲಿಯೇ ತಾಲೂಕಾಡಳಿತ ಕಚೇರಿ ನಿರ್ಮಾಣ ಮಾಡೋ:-ಬಸವರಾಜು ರಾಯರಡ್ಡಿ

ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಜಿಲ್ಲಾಡಳಿತ ಪ್ರಸ್ತಾವನೆ ಅನ್ವಯ ಗುತ್ತಿಗೆ ಆಧಾರದ ಮೇಲೆ ನಿಗದಿಯಾಗಿರುವ ಗುದ್ನೇಪ್ಪನಮಠ ದೇವಸ್ಥಾನ ಜಾಗವನ್ನು ತಾಲೂಕಾಡಳಿತ ಕಚೇರಿ, ಕೋರ್ಟ್, ಭವನ ನಿರ್ಮಾಣಕ್ಕೆ ನೀಡಿ, ಇಲ್ಲವೇ ಖಾಸಗಿ ಜಮೀನು ಕೊಡಿಸಿರಿ, ಇವೆರೆಡೂ ಆಗದಿದ್ದರೆ ನಾನು ತಳಕಲ್ಲಿನ ನಮ್ಮ ಸ್ವಂತ ಜಾಗದಲ್ಲಿ ತಾಲೂಕಾಡಳಿತ ಕಚೇರಿ ನಿರ್ಮಾಣಕ್ಕೆ ಜಾಗ ನೀಡುವೆ.
ಗುದ್ನೇಪ್ಪನಮಠದ ದೇವಸ್ಥಾನ ಜಾಗದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣದ ಕುರಿತು ಜರುಗಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಗುದ್ನೇಪ್ಪನಮಠದ ಜಾಗ ಕುರಿತು ಅಲ್ಲಿನ ಸೇವಾದಾರರು ಆ ಭೂಮಿ ತಮ್ಮದು ಎಂದು ಕೋರ್ಟ ಮೊರೆ ಹೋಗಿದ್ದಾರೆ.
ಇದು ಯಾರ ಕೈಯಲ್ಲೂ ಇಲ್ಲ. ಇದು ನ್ಯಾಯಾಂಗ ಹಂತದಲ್ಲಿದೆ. ವಯಕ್ತಿಕವಾಗಿ ದೇವಸ್ಥಾನದ ಜಾಗ ಯಾರಿಗೂ ಕೊಡುವುದಿಕ್ಕೆ ಬರುವುದಿಲ್ಲ. ದೇವಸ್ಥಾನದ ಭೂಮಿ ದೇವಸ್ಥಾನಕ್ಕೆ ಇರುವಂತೆ ಜಿಲ್ಲಾಧಿಕಾರಿಗಳು ತಮ್ಮ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಗುತ್ತಿಗೆ ಆಧಾರದ ಮೇಲೆ ಭೂಮಿ ನಿಗಧಿ ಮಾಡಿದ್ದಾರೆ. ನ್ಯಾಯಾಂಗದ ತೀರ್ಮಾನಕ್ಕೆ ಬದ್ಧರಾಗೋಣ ಎಂದರು.
ದೇವಸ್ಥಾನದ ಭೂಮಿ ಯಾರಿಗಾದರೂ ಕೊಡಲು ಬರುತ್ತಿದ್ದರೆ ನಾನು ಸಂಸ್ಕೃತ ಕಲಿತು ಪೂಜಾರಿಯಾಗಿ ಭೂಮಿ ಪಡೆದುಕೊಳ್ಳುತ್ತಿದ್ದೆ, ನನ್ನ ಹಿಂದೆ ಇದ್ದವರಿಗೂ ಸೇವಾದಾರರು ಎಂದು ಹೇಳಿ ಕೊಡಿಸುತ್ತಿದ್ದೆ, ಗುದ್ನೇಪ್ಪನಮಠ ಜಾಗ ತಾಲೂಕಾಡಳಿತ ಕಚೇರಿಗೆ ನೀಡಲು ಅಲ್ಲಿನ ಗಣಿ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆದಾರರು ತಮ್ಮ ಲಾಭಿಗಾಗಿ ಗುದ್ನೇಪ್ಪನಮಠದ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ. ಅವರಿಗೆ ಅಭಿವೃದ್ಧಿಯ ಮುಂದಾಲೋಚನೆ ಇಲ್ಲ ಎಂದರು. ಜನ ನನಗೆ ಬಾಯಿಗೆ ಬಂದಂತೆ ಮಾತನಾಡಿದರು ನಾನು ಅದನ್ನು ಸ್ವಾಗತಿಸುತ್ತೇನೆ. ಅವರು ಬೈದರೇ ಅವರ ಬಾಯಿ ಹೊಲಸಾಗುತ್ತದೆ. ಅದರಿಂದ ನನಗೇನು ಆಗುವುದಿಲ್ಲಾ, ನನಗೆ ಅಭಿವೃದ್ದಿ ಮುಖ್ಯ ನಾನು ರಾಜಕಾರಣಕ್ಕೆ ಬರಬೇಕಾದರೇ ದುಡ್ಡು ಮಾಡಲು ಬಂದಿಲ್ಲಾ, ಅಭಿವೃದ್ದಿ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಸ್ಪಷ್ಟ ಪಡಿಸಿದರು.
ಹಿಂದಿನ ಶಾಸಕರು ಭೂಮಿ ಕೊಡಿಸಿದ್ದಾರೆ ಅಂತಾರಲ್ಲಾ, ಆ ಭೂಮಿಯನ್ನು ನಾಳೆಯೇ ಕೊಡಿಸಿ ಅಲ್ಲಿಯೇ ತಾಲೂಕಾಡಳಿತ ಕಚೇರಿ ನಿರ್ಮಾಣ ಮಾಡೋಣ. ಖಾಸಗಿ ಜಮೀನೀನವರು ಕೋರ್ಟ ಮೊರೆ ಹೋಗಿ ಸ್ಟೇ ತಂದಿದ್ದಾರೆ. ಗುದ್ನೇಪ್ಪನಮಠದ ಜಮೀನು ಯಾರಿಗೂ ಸಿಗುವುದಿಲ್ಲ. ಅದು ಸರ್ಕಾರದ ಭೂಮಿ. ಒಂದು ವೇಳೆ ಅಲ್ಲಿ ತಾಲೂಕಾಡಳಿತ ಕಚೇರಿ ನಿರ್ಮಾಣ ಬೇಡ ಅಂದರೆ ಅದು ಸರ್ಕಾರಕ್ಕೆ ಹೋಗುತ್ತದೆ.
*ಶಾಸಕ ಬಸವರಾಜ ರಾಯರಡ್ಡಿ*

