ರೈತರಿಗಾಗಿ ಶ್ರಮಿಸಬೇಕು:-ಶರಣಪ್ಪ ಗೌಡ ಹೊರಪೇಟೆ

ಕುಕನೂರು:-ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರ ತಾಲೂಕು ಮಂಡಲಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಶ್ರೀಧರ ಆರ್ ಹೊಸಮನಿ, ಹಾಗೂ ಉಪಾಧ್ಯಕ್ಷರಾಗಿ ಕನಕಪ್ಪ ತಳವಾರ ಆಯ್ಕೆ,
ಶರಣಪ್ಪ ಗೌಡ ಹೊರಪೇಟೆ
ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನ ಬಿಜೆಪಿ ಮಡಿಲಿಗೆ ಲಭಿಸಿದ್ದು ಅವಿರೋಧವಾಗಿ ಅಧ್ಯಕ್ಷರಾಗಿ
ಶ್ರೀಧರ ಆರ್ ಹೊಸಮನಿ, ಹಾಗೂ ಉಪಾಧ್ಯಕ್ಷರಾಗಿ ಕನಕಪ್ಪ ತಳವಾರ ಆಯ್ಕೆಯಾಗಿದ್ದಾರೆ. ಮಾಜಿ ಸಚಿವರಾದ ಹಾಲಪ್ಪ ಆಚಾರ್ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕೃಷಿ ಪತ್ತಿನ ಸಹಕಾರ ದಿಂದ 11 ಜನ ಆಯ್ಕೆಗೊಂಡಿದ್ದು. ಸಂಘದ ಅಭಿವೃದ್ಧಿಯನ್ನು ಪಡಿಸುವುದರೊಂದಿಗೆ ಎಲ್ಲಾ ಸದಸ್ಯರುಗಳ ಹಾಗೂ ರೈತರ ವಿಶ್ವಾಸವನ್ನ ತೆಗೆದುಕೊಂಡು ಅವರಿಗಾಗಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಕೊಡುವುದರೊಂದಿಗೆ ರೈತರಿಗಾಗಿ ಶ್ರಮಿಸಬೇಕು ಸಹಕಾರ ಸಂಘಗಳು ರೈತರಿಗೆ ಕಣ್ಣುಗಳಿದ್ದಂತೆ. ಸಹಕಾರ ಸಂಘಗಳಲ್ಲಿ ದೊರಕುವ ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ರೈತರು ಆರ್ಥಿಕವಾಗಿ ಸದೃಢ ರಾಗಬೇಕು ಎಂದರು.
ಹಂಚಾಳಪ್ಪ ತಳವಾರ
ಮಾತನಾಡಿ, ಸಹಕಾರಿ ಸಂಘಗಳು ರೈತರಿಗೆ ಸಹಾಯಕವಾಗಲಿದ್ದು, ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ರೈತರಿಗೆ ಮುಟ್ಟಿಸುವ ಮೂಲಕ ರೈತರ ಏಳಿಗೆಗೆ, ಸಹಕಾರಿ ಸಂಘದ ಅಭಿವೃದ್ಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರುಗಳು ಶ್ರಮಿಸಬೇಕು. ಸಂಘದ ಎಲ್ಲ ಸದಸ್ಯರು ಸಹಕರಿಸಬೇಕು ಎಂದರು.
ಅವಿರೋಧ ಆಯ್ಕೆ ಘೋಷಣೆ ಮಾಡಿದರು.ನಂತರ ಮಾತನಾಡಿದ ಅಧ್ಯಕ್ಷ ಶ್ರೀಧರ ಆರ್ ಹೊಸಮನಿ, ರೈತನ ಮಗನಾಗಿರುವ ನಾನು ಕೃಷಿ ರಂಗದ ಸಮಸ್ಯೆ ತಿಳಿದಿದ್ದೇನೆ. ಸಂಘದಲ್ಲಿ ರೈತರ ಬೆನ್ನೆಲುಬಾಗಿ ನಿಂತು ಪ್ರಗತಿಗೆ ಸಹಕಾರ ನೀಡುತ್ತೇನೆ ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡನಗೌಡರು, ಶಿವಲೀಲಾ ದಳವಾಯಿ, ಪ್ರಕಾಶ ಹೊರಪೇಟೆ, ಮಲ್ಲಪ್ಪ ಗುಡಿಹಿಂದಲ್, ಹಂಚಾಳಪ್ಪ ಕಲ್ಗೋಡಿ, ಕನಕಪ್ಪ ವಾಯ್ ಬ್ಯಾಡರ, ಮಲ್ಲಿಕಾರ್ಜುನ ಕರಮುಡಿ, ಷಣ್ಮುಖನಗೌಡ ಪಾಟೀಲ್, ಮತ್ತು ಸೋಂಪುರ, ಸಿದ್ನೆಕೊಪ್ಪ, ಬಟಪ್ಪನಹಳ್ಳಿ, ಮಂಡಲ ಗೇರಿ ಗ್ರಾಮದ ಗುರು ಹಿರಿಯರು ಇತರರು ಇದ್ದರು.
_ನಿರ್ಭಯ ದೃಷ್ಟಿ ನ್ಯೂಸ್
ಸಂಪಾದಕರು
ಚನ್ನಯ್ಯ ಹಿರೇಮಠ_