ಶತ್ರುಗಳ ಸಂಹಾರವನ್ನು ಮಾಡಿದ ಮಹಾನ್ ಮಹಿಳೆ ಒನಕೆ ಓಬವ್ವರವರು, ಇಂದಿನ ಮಹಿಳೆಯರಿಗೆ ಭದ್ರವಾದ ಬುನಾದಿಯಾಗಿದೆ:-ಹೆಚ್ ಪ್ರಾಣೇಶ್

ಕುಕುನೂರು ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಮತ್ತು ವೀರವನೆತೆ ಒನಕೆ ಓಬವ್ವ ವೃತ್ತದಲ್ಲಿ ಪೂಜೆಯನ್ನು ತಾಲೂಕ ಆಡಳಿತ ಮತ್ತು ಸಮಾಜದವರಿಂದ ನೆರವೇರಿಸಲಾಯಿತು.

ಹೆಚ್. ಪ್ರಾಣೇಶ್ ತಹಶೀಲ್ದಾರರು ಪೂಜೆಯನ್ನು ಸಮರ್ಪಿಸಿ ಮಾತನಾಡಿ ವೀರವನೆತೆ ಒನಕೆ ಓಬವ್ವ ರವರು ಚಿತ್ರದುರ್ಗ ಕೋಟೆ ಸಂಸ್ಥಾನದ ನಾಯಕರಾದ ವೀರ ಮದಕರಿ ನಾಯಕ ಸಂಸ್ಥಾನದಲ್ಲಿ ಒನಕೆ ಓಬವ್ವರವರ ಹೆಸರು ಅಜರಾಮರವಾಗಿದೆ. ಶತ್ರುಗಳು ಕೋಟೆಯನ್ನು ನುಗ್ಗಿದಾಗ ಭಯಭೀತರಾಗದೆ ಶತ್ರುಗಳ ಸಂಹಾರವನ್ನು ಮಾಡಿದ ಮಹಾನ್ ಮಹಿಳೆ ಒನಕೆ ಓಬವ್ವರವರು, ಇಂದಿನ ಮಹಿಳೆಯರಿಗೆ ಭದ್ರವಾದ ಬುನಾದಿಯಾಗಿದೆ ಎಂದು ಮಾತನಾಡಿದರು.

ರಾಮಣ್ಣ ಬಂಕದ ಮನಿ ಪಟ್ಟಣ ಪಂಚಾಯತ್ ಸದಸ್ಯರು ಮಾತನಾಡಿ ಒನಕೆ ಓಬವ್ವ ಅವರ ಆದರ್ಶಗಳನ್ನು ಮಹಿಳೆಯರು ತಮ್ಮಲ್ಲಿ ದಿಟ್ಟತನ, ಸಾಹಸ, ಸಮಯೋಚಿತ ಯುಕ್ತಿ, ಸ್ಥೈರ್ಯ ಮತ್ತು ನಿಸ್ವಾರ್ಥ, ದೇಶಪ್ರೇಮ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಅಳವಡಿಸಿಕೊಳ್ಳಬಹುದು. ಕಷ್ಟಕಾಲದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ತಮ್ಮನ್ನು, ಸಮಾಜವನ್ನು ರಕ್ಷಿಸಿಕೊಳ್ಳಲು ಅವರು ಸ್ಫೂರ್ತಿಯಾಗಿದ್ದಾರೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಯಲ್ಲಪ್ಪ ಕಲ್ಮನಿ, ನಾಗಪ್ಪ ಕಲ್ಮನಿ, ಶರಣಪ್ಪ ಕಾಳಿ, ಲಕ್ಷ್ಮಣ ಎಂ, ಗುದ್ನೇಶ ಬಂಕದ ಮನಿ, ರಾಜೇಶ್ ಕಾತ್ತರಕಿ, ಹನುಮಂತಪ್ಪ ಘಾಟಿ, ಉಮೇಶ್ ಮಾಳೆಕೊಪ್ಪ, ಮಂಜುನಾಥ್ ಯಡೆಯಾಪುರ, ಗ್ರೇಡು ಟು ತಹಶೀಲ್ದಾರ್ ಮುರಳಿಧರ್, ಕುಲಕರ್ಣಿ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ನಬಿ ಸಾಬ್, ಸಮುದಾಯದ ಹಿರಿಯ ಮುಖಂಡರು ಮತ್ತು ಯುವಕರು ಇದ್ದರು.

 

ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು

ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *