ಬ್ರೇಕಿಂಗ್ ನ್ಯೂಸ್:– ನಿರ್ಭಯ ದೃಷ್ಟಿ ನ್ಯೂಸ್

ಬನ್ನಿಕಟ್ಟಿ ಪ್ರಕಾಶನ “ಗುಡಿಸಲಿಗೆ ಬಂದ ದೇವರು”ಚೊಚ್ಚಲ ಕೃತಿ ಕವನ ಸಂಕಲನ ಬಿಡುಗಡೆ

ಕುಕುನೂರು ತಾಲೂಕಿನ ಅಂಜುಮನ್ ಶಾದಿ ಮಹಲ್ ನಲ್ಲಿ ರವಿವಾರ ದಿನದಂದು ಬನ್ನಿಕಟ್ಟಿ ಪ್ರಕಾಶನ ಕೊರತರುತ್ತಿರುವ ರಹೀಮ್ ಬನ್ನಿಕಟ್ಟಿ ರವರ ಚೊಚ್ಚಲ ಕೃತಿ “ ಗುಡಿಸಲಿಗೆ ಬಂದ ದೇವರು” ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಸಸಿಗಳಿಗೆ ನೀರು ಎರೆಯುವ ಮೂಲಕ ಬಿಡುಗಡೆ ಸಮಾರಂಭವನ್ನು ನೆರವೇರಿಸಲಾಯಿತು.

ನಿವೃತ್ತ ಉಪನ್ಯಾಸಕರು ಮತ್ತು ಸಾಹಿತಿಗಳು ಆರ್. ಪಿ. ರಾಜೂರ ಸಸಿಗಳಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಾಯಕವೇ ಕೈಲಾಸ ಎಂಬ ತತ್ವದ ಮೇಲೆ ಬಾಳುತ್ತಿರುವ ಕಾಯಕಯೋಗಿ ಶ್ರಮ ಜೀವಿ ಸುಮಾರು 20 ವರ್ಷಗಳ ಕಾಲ ಸೈಕಲ್ ರಿಕ್ಷಾ ಚಾಲನೆ ಮಾಡಿ ಪ್ರಸ್ತುತ ದಿನಮಾನದಲ್ಲಿ ಆಟೋ ಚಾಲಕರಾಗಿ ಕುಕನೂರಿನ ಸರ್ವ ಜನರ ವಿಶ್ವಾಸಕ್ಕೆ ಪಾತ್ರರಾದ ಸಲೀಮ್ ಸಾಬ್ ಶ್ರೀಮತಿಯವರಾದ ರೆಹನಾ ಬೇಗಂ ರವರ ನಾಲ್ಕನೇ ಸುಪುತ್ರನೇ ರಹೀಂ ಬನ್ನಿಕಟ್ಟಿ ಇವರ ಸಾಧನೆಯ ಹಿಂದೆ ಅವರ ತಂದೆ ತಾಯಿಯವರ ಶ್ರಮವೇ ಮೂಲಾಧಾರವಾಗಿದೆ. ಕಡು ಬಡತನದಲ್ಲಿ ಜೀವನ ನಿರ್ವಹಣೆ ನಡೆಸಿಕೊಂಡು ಇಂದು
ಕುಕನೂರು ತಾಲೂಕ ವಟಪರವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಶಿಕ್ಷಕರಾಗಿ ರಹೀಂ ಬನ್ನಿಕಟ್ಟಿಯವರು ಸೇವೆ ಸಲ್ಲಿಸಿದರು. ತಮ್ಮ ಮೊದಲ ಕವನ ಸಂಕಲನವಾದ ‘ಗುಡಿಸಲಿಗೆ ಬಂದ ದೇವರು’ ಕವನ ಸಂಕಲನದಲ್ಲಿ ತಾಯಿಯ ಪ್ರೀತಿ, ತಂದೆಯ ಪರಿಶ್ರಮ, ಬಾಲ್ಯದ ಕಹಿ ನೆನಪು, ಬರೆದ ಅಕ್ಷರ ಮೊದಲ, ಅನುಭವಿಸಿದ್ದ ಕಷ್ಟ ಸುಖ, ತಂದೆ ತಾಯಿಗಳ ತ್ಯಾಗ ಮತ್ತು ಗುರಿ ಮುಟ್ಟಿದ ಭಾಗ್ಯ ಇಂತಹ ಹತ್ತು ಹಲವು ದೃಷ್ಟಿಕೋನಗಳನ್ನು ಇಟ್ಟುಕೊಂಡು ತಮ್ಮ ಕವನಗಳಲ್ಲಿ ಅರ್ಥಗರ್ಭಿತವಾಗಿ, ಸುಂದರವಾದ ಅಕ್ಷರಗಳನ್ನು ಜೋಡಿಸಿ, ತಮ್ಮ ಸರಳ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವಂತೆ, ಮನ ಮುಟ್ಟುವಂತೆ, ತನು ಮಿಡಿಯುವಂತೆ, ಸಮಾಜ ಸುಸಂಸ್ಕೃತವಾಗಿ ನಡೆಯುವಂತೆ ತಮ್ಮ ಕವಿತೆಗಳ ಮೂಲಕ ಸಾರಿ ಹೇಳಿದ್ದಾರೆ.

ಕವನ ಸಂಕಲನದ ಮೊದಲ ಕವಿತೆಯಾದ ‘ಗುಡಿಸಲಿಗೆ ಬಂದ ದೇವರು’

ಅವ್ವ
ಇರುವ ಗುಡಿಯಲ್ಲಿ
ಯಾವತ್ತೂ ದೀಪ ಹಚ್ಚಲೇ ಇಲ್ಲವೆಂದು
ಬಯ್ಯಲಿ ?

ಅವಳು ಒಲೆ ಹಚ್ಚಿದಾಗೊಮ್ಮೆ

ದೇವರೇ ಗುಡಿಸಲಿಗೆ ಬರುತ್ತಾನೆ ಆರತಿಗಾಗಿ’

ಸದರಿ ಕವಿತೆಯಲ್ಲಿ ಕವಿಯು ಬಡತನ ಮತ್ತು ಶ್ರದ್ಧೆಯಿಂದ ದುಡಿದ ಹಣದಿಂದ ತಾಯಿ ಓಲೆ ಹೊತ್ತಿಸಿದರೆ ಅದೇ ದೇವರ ಗುಡಿಯಲ್ಲಿ ದೀಪ ಹಚ್ಚಿದಂತೆ. ನಮ್ಮ ಒಲೆಯ ಉರಿಯುವಿಕೆಯಲ್ಲಿ ಶ್ರಮ ಮತ್ತು ಪ್ರೇಮದ ಅನ್ನ ಬೇಯಬೇಕು. ಅದೇ ಸರ್ವದೇವರಿಗೂ ಮೀಸಲಾಗಿರುತ್ತದೆ. ದೇವರೇ ಮನೆಗೆ ಬಂದು ಆರತಿ ತೆಗೆದುಕೊಳ್ಳುತ್ತಾನೆ. ಎಂಬ ಆಶಯವನ್ನು ಕವಿ ವ್ಯಕ್ತಪಡಿಸಿದ್ದಾರೆ ಈ ಹತ್ತಾರು ಪುಸ್ತಕಗಳನ್ನು ಪ್ರಕಟಿಸಿ ಕುಕನೂರು ಪಟ್ಟಣದ ಹೆಸರು ಎಲ್ಲೆಲ್ಲಿಯೂ ರಾರಾಜಿ ಸುವಂತೆ ಬೆಳೆಯಲಿ ಎಂದು ಶುಭರೈಸಿದರು.

ನಿವೃತ್ತ ಪ್ರಾಚಾರ್ಯ ಕೆ.ಆರ್. ಕುಲಕರ್ಣಿ ಮಾತನಾಡಿ ಪ್ರತಿಭಾವಂತ ಬರಹಗಾರರು ಸಾಹಿತ್ಯ ಕ್ಷೇತ್ರದಿಂದ ಸರಿಯುವ ಈ ಹೊತ್ತಿನಲ್ಲಿ ಹೊಸ ಚಿಗುರು, ಸ್ವಂತಿಕೆಯಿಂದ ಪುಟಿದೆದ್ದು ಬರಬೇಕಾದ ಅನಿರ್ವಾಯತೆಯಿದೆ. ಒಬ್ಬರ ದಾರುಣ ಸ್ಥಿತಿಯನ್ನು ಚೆನ್ನಾಗಿ ಕಟ್ಟಿಕೊಡುವ ಪರಿಗಳಿಗೆ ಕಾವ್ಯದ ಸ್ಪರ್ಶಾನುಭವ ಕುಟುಂಬ. ಕೊನೆಗೂ, ಈ ಕುಟುಂಬದ ಕನಸು ನನಸಾಗದೇ ಉಳಿಯುವುದು ಕವನ ಸಂಕಲನದಲ್ಲಿ ಸಾಂಕೇತಿಕವಾಗಿ ಧ್ವನಿಸಿದ್ದು ತಂದೆ ತಾಯಿಯ ಬಡ ಕುಟುಂಬದಲ್ಲಿ ಬೆಳೆದ ರಹೀಮ್ ಬನ್ನಿಕಟ್ಟಿ ರವರ ಜೀವನದ ಯಶೋಗಾಥೆ ಇಟ್ಟುಕೊಂಡು ಕವನ ಸಂಕಲನಗಳನ್ನು ಬರೆಯುವ ಮೂಲಕ ಕೃತಿಗಳನ್ನು ರಚಿಸಿ ಬಿಡುಗಡೆ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಗೆ ಕೀರ್ತಿ ಸಲ್ಲುತ್ತದೆ ಎಂದು ಶುಭ ಕೋರಿದರು.

ಮುಖ್ಯ ಅತಿಥಿಗಳಾದ ಮಾರುತೇಶ ತಳವಾರ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಕನೂರು ತಾಲೂಕ ಅಧ್ಯಕ್ಷರು, ಸೋಮಶೇಖರ್ ಲಮಾಣಿ ವಿದ್ಯಾನಂದ ಗುರುಕುಲಶಾಲೆ ಮುಖ್ಯೋಪಾಧ್ಯಾಯರು, ಅಲ್ಲಾವುದ್ದೀನ್ ಎಮ್ಮಿ ಸಾಹಿತಿಗಳು ಮತ್ತು ಪತ್ರಕರ್ತರು, ವಿಶಾಲಾಕ್ಷಿ ವಿವೇಕಿ ಆಂಗ್ಲ ಭಾಷಾ ಉಪನ್ಯಾಸಕರು ಕಾತರಕಿ-ಗುಡ್ಲಾನೂರ, ಭೀಮಣ್ಣ ಬೀಡನಾಳ ಮುಖ್ಯೋಪಾಧ್ಯಾಯರು ವಟಪರವಿ, ವೀರೇಶ್ ಕುರಿ ಶಿಕ್ಷಕರು ಮತ್ತು ಸಾಹಿತಿಗಳು, ಶಫಿ ಅಹ್ಮದ್ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳು, ಶಿವಶಂಕರ್ ಹಿರೇಮಠ ಶಿಕ್ಷಕರು ,ಬನ್ನಿಕಟ್ಟಿ ಪ್ರಕಾಶನ ಹೊರತರುತ್ತಿರುವ ರಹೀಮ್ ಬನ್ನಿಕಟ್ಟಿ ರವರ ಚೊಚ್ಚಲ ಕೃತಿ ಗುಡಿಸಲಿಗೆ ಬಂದ ದೇವರು ಕವನ ಸಂಕಲನದ ಬಿಡುಗಡೆಗೊಳಿಸಿದ ಸಮಾರಂಭದಲ್ಲಿ.

ಈ ಸಂದರ್ಭದಲ್ಲಿ
ಕವಿಗಳಾದ ರಹೀಮ್ ಬನ್ನಿಕಟ್ಟಿ ಹಾಗೂ ಅವರ ಧರ್ಮಪತ್ನಿ ಅವರ ತಂದೆಯವರಾದ
ಸಲೀಂ ಸಾಬ್ ಬನ್ನಿಕಟ್ಟಿ ಹಾಗೂ ಅವರ ಧರ್ಮಪತ್ನಿ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ರಷಿದ್ ಸಾಬ್ ಉಮಚಗಿ  ಮುಸ್ಲಿಂ ಅಂಜುಮನ್ ಕಮಿಟಿ ಅಧ್ಯಕ್ಷರು ಕುಕನೂರು, ಹಾಗೂ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು.

ಸಂವಿಧಾನ ಪೀಠಿಕೆಯನ್ನು ಗದ್ದೆಪ್ಪ ಬೊಮ್ಮನಾಳ ವಾಚನ ನೆರವೇರಿಸಿದರು.

ಶಿವನಗೌಡ ಕಬಾಡಿ ದೈಹಿಕ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಟಪರವಿ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಸ್ವಾಗತ ಬಸವರಾಜ ಬಳಿಗೇರ ಶಿಕ್ಷಕರು ನೆರವೇರಿಸಿದರು.

ಈ ಸಂದರ್ಭದಲ್ಲಿ

ರಹೀದ್ ಸಾಬ್ ಹಣಜಗಿರಿ,ಪೀರ್ ಸಾಬ್ ದಪೇದಾರ್, ಗುಡುಸಾಬ್ ಮಕ್ಕಂದಾರ್, ಲಾಲ್ ಭಾಷಾ ಗುಡಿಹಿಂದಲ್, ಅಬ್ದುಲ್ ಖದೀರ್ ದೇವದುರ್ಗ, ಮೈಬೂಬ್ ಸಾಬ್ ಗುಡಿಹಿಂದಲ್, ಖಾಜಾ ಸಾಬ್ ಹೊಸಳ್ಳಿ, ರಾಜು ಶಿಕ್ಷಕರು, ಶಿವಕುಮಾರ್ ಶಿಕ್ಷಕರು, ವಟಪರವಿ ಶಾಲಾ ಶಿಕ್ಷಕ ಬಳಗದವರು, ವಿವಿಧ ಶಾಲೆಗಳ ಶಿಕ್ಷಕ ವೃಂದದವರು ಹಾಗೂ ಬನ್ನಿಕಟ್ಟಿ ಕುಟುಂಬಸ್ಥರು ಎಟ್ ಇಬ್ಬರು.

ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು

ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *