ಗುತ್ತಿಗೆದಾರರ ಎದುರಿಸುವ ಸಮಸ್ಯೆಗಳಿಗೆ ನವೆಂಬರ್ 12ರಂದು ಶಾಂತಿಯುತ ಧರಣಿ ಜಿಲ್ಲಾಧಿಕಾರಿಗಳಿಗೆ ಮನವಿ

ಕುಕನೂರು:-

ಕೊಪ್ಪಳ ಜಿಲ್ಲೆಯ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾಧಿಕಾರಿಗಳಿಗೆ ಇದೆ ನವೆಂಬರ್ 12ರಂದು ಸಾಂಕೇತಿಕ ಧರಣಿ ನೇರವೇರಿಸುವ ಮುಖಾಂತರ ಮನವಿ ಸಲ್ಲಿಸಲಾಗುವುದು ಎಂದು ಗುತ್ತಿಗೆದಾರರ ಅಧ್ಯಕ್ಷರು ಸುರೇಶ್ ಬೂಮರೆಡ್ಡಿ  ಮಾತನಾಡಿದರು.

ಅವರು ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ನಡೆಸಿದ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ್ ಭೂಮರೆಡ್ಡಿ ಮಾತನಾಡಿ ಕೊಪ್ಪಳ ಜಿಲ್ಲೆಯ ಎಲ್ಲಾ ಕ್ರಶರ್ ಗಳು ಮಾಲೀಕರು ಹಾಗೂ ಗುತ್ತಿಗೆದಾರರು ಇಲ್ಲಿಯವರೆಗೆ ಸಮನ್ವಯತೆಯಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿ, ಜಿಲ್ಲೆಯ ಎಲ್ಲಾ ರೀತಿಯ ಕಾಮಗಾರಿಗಳು ಸರಕಾರಿ ಮತ್ತು ಖಾಸಗಿ ಸರಾಗವಾಗಿ ನಡೆಯುತ್ತಾ ಬರುತ್ತಿದ್ದವು. ಆದರೆ ಈಗ ರಾಜಶೇಖರ್ ಯತ್ನಾಳ ಸಂಸದರು ತಮ್ಮದೇ ಆದ ಪ್ರೇರಣಾ ಕನ್ಸ್ಟ್ರಕ್ಷನ್ ಸಂಸ್ಥೆಯನ್ನು ಅಗ್ರಿ ಗೇಟ್ ಮಾರ್ಕೆಟಿಂಗ್ ಏಜೆನ್ಸಿಯನ್ನು ಹುಟ್ಟು ಹಾಕಿದ್ದಾರೆ ವಿಜಯ ದಶಮಿ ದಿನದಂದು ಹೊಸಪೇಟೆ ರಸ್ತೆಯಲ್ಲಿ ಅದರ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಸನ್ಮಾನ್ಯ ಸಂಸದರು, ತಮ್ಮ ಈ ಏಜೆನ್ಸಿಯ ಮೂಲಕ ಜಿಲ್ಲೆಯ ಎಲ್ಲಾ ಕ್ರಶರ್ ಗಳು ಮಾಲೀಕರನ್ನು ತಮ್ಮ ಅದಿನಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ, ಯಾರಿಗಾದರೂ ಕ್ರಶರ್ ಮೆಟೀರಿಯಲ್ ಬೇಕೆಂದರೆ. ಸಾರ್ವಜನಿಕರಿಗಾಗಲಿ ಗುತ್ತಿಗೆದಾರರಾಗಲಿ, ಅದನ್ನು ತಮ್ಮ ಏಜೆನ್ಸಿ ಮೂಲಕವೇ ಪಡೆದುಕೊಳ್ಳಬೇಕೆಂದು ನಿರ್ಣಯ ಮಾಡಿದ್ದಾರೆ. ಆದರೆ ಕ್ರಶರ್ ಮಟೀರಿಯಲ್ ಪಡೆಯಬೇಕೆಂದರೆ. ತಮಗೆ ಬೇಕಾದ ಕ್ರಶರ್ ಮಾಲೀಕರನ್ನು ಸಂಪರ್ಕಿಸಿ ಪಡೆದುಕೊಳ್ಳಲು ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೆ ಇನ್ನು ಮುಂದೆ ಅವಕಾಶ ಇರುವುದಿಲ್ಲ.
ಅಲ್ಲದೆ, ಏಜೆನ್ಸಿ ಮೂಲಕ ಮೆಟೀರಿಯಲ್ ಪಡೆದುಕೊಳ್ಳಲು ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಮೆಟೀರಿಯಲ್ ದರವನ್ನು ಏಜೆನ್ಸಿಯೇ ನಿರ್ಧರಿಸುತ್ತದೆ ಹಾಗೂ ಮೆಟೀರಿಯಲ್ ಪಡೆಯಬೇಕಾದರೆ ಅದಕ್ಕೆ ಬೇಕಾದ ಪೂರ್ತಿ ಹಣವನ್ನು ಮುಂಗಡವಾಗಿ ಪಾವತಿಸಬೇಕು. ಹೀಗೆ ಏಜೆನ್ಸಿ ಮಾಡಿಕೊಂಡಿರುವ ರಾಜಶೇಖರ ಹಿಟ್ನಾಳ ಅವರು ಈ ಪದ್ಧತಿಯನ್ನು ಏಕಗವಾಕ್ಷಿ ವಿಧಾನ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
ನಗದು ನೀಡಿಯೇ ಮೆಟೀರಿಯಲ್ ಖರೀದಿ ನೀಡುವುದರಿಂದ ಯಾವುದೇ ಬಾಕಿ ಉಳಿಯುವುದಿಲ್ಲ ಎಂಬ ಆಮಿಷ ಒಡ್ಡಿ ಕ್ರಶರ್ ಮಾಲೀಕರನ್ನು ಏಜೆನ್ಸಿ ಒಳಗೆ ಸೇರಿಸಿಕೊಳ್ಳಲಾಗಿದೆ.
ಕ್ರಶರ್ ಉದ್ಯಮವನ್ನು ಸಂಸದರು ಹೇಗೆ ಏಕೆ ಸೌಮ್ಯ ಮಾಡಿಕೊಂಡಿರುವುದು ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೆ ಮರಣ ಶಾಸನವಾಗಲಿದೆ. ಏಕೆಂದರೆ ಈವರೆಗೆ ಗುತ್ತಿಗೆದಾರರು ಮತ್ತು ಸಾರ್ವಜನಿಕರು ಕ್ರಶರ್ ಗಳ ಮಾಲೀಕರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದರು. ತಮಗೆ ಬೇಕಾದಾಗ ಕ್ರಸರ್ ನಿಂದ, ಹೊಂದಾಣಿಕೆಯ ಮೇಲೆ ದರ ನಿಗದಿಪಡಿಸಿಕೊಂಡು, ತಮಗೆ ಬೇಕಾದ ಮೆಟೀರಿಯಲ್ ಪಡೆದುಕೊಳ್ಳಲು ಸ್ವಾತಂತ್ರ್ಯರಾಗಿದ್ದರು. ಆದರೆ ಏಕ ಸ್ವಾಮ್ಯ ಪದ್ಧತಿಯಿಂದ ಈ ಸಮನ್ವಯತೆಗೆ ಕೊಡಲಿ ಪೆಟ್ಟು ಬೀಳಲಿದೆ, ಅಲ್ಲದೆ ಮುಂದೆ ಜಿಎಸ್​ಟಿ. ಆದಾಯ ತೆರಿಗೆ ಪಾವತಿ. ಹಾಗೂ ರಾಯಲ್ಟಿಯಲ್ಲಿಯೂ ಗುತ್ತಿಗೆದಾರರಿಗೆ ತೊಂದರೆಯಾಗಲಿದೆ. ಅಲ್ಲದೆ ಈ ರೀತಿ ಏಜೆನ್ಸಿ ಮಾಡಿಕೊಂಡು ಸಾರ್ವಜನಿಕರ ಬಳಕೆಯ ವಸ್ತುಗಳ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಮಾಡಿಕೊಳ್ಳುವುದರಿಂದ ಗ್ರಾಹಕರ ಹಕ್ಕುಗಳ ಉಲ್ಲಂಘನೆ ಯಾಗುತ್ತಿದ್ದು, ಕಾನೂನು ಪ್ರಕಾರ ಸಹ ಅಕ್ರಮವಾಗಿದೆ.

ಆದರೆ ಈ ವಿಷಯವನ್ನು ಸಂಘರ್ಷದ ಬದಲು ಸಾಮರಸ್ಯದಿಂದ ಪರಿಹರಿಸಿಕೊಳ್ಳುವುದು ನಮ್ಮ ಉದ್ದೇಶ. ಸಂಸದರೊಂದಿಗೆ ನಡೆದ ಈ ವರೆಗಿನ ಮಾತು ಕಥೆಗಳು ಬಲಪ್ರದವಾಗಿಲ್ಲದಿಲ್ಲದಿರುವ ಹಿನ್ನಲೆಯಲ್ಲಿ ಹಾಗೂ ಇದು ಕಾನೂನು ಉಲ್ಲಂಘನೆಗೆ ಒಳಪಟ್ಟಿರುವ ವಿಷಯವಾಗಿರುವುದರಿಂದ ತಮಗೆ ಮನವಿ ಸಲ್ಲಿಸುತ್ತೇವೆ ಈಗಾಗಲೇ ಈ ಕುರಿತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಯಲಬುರ್ಗಾ ಶಾಸಕ ಬಸವರಾಜ್ ರಾಯರೆಡ್ಡಿ, ಗಂಗಾವತಿ ಶಾಸಕರಾಗಿರುವ ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಷ್ಟಗಿ ಶಾಸಕರಾಗಿರುವ ದೊಡ್ಡನಗೌಡ ಪಾಟೀಲ್ ಅವರಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಈ ಸಮಸ್ಯೆ ಇತ್ಯರ್ಥವಾಗದಿದ್ದರೆ ದಿನಾಂಕ 12 -11-2025 ಬುಧವಾರ ದಿವಸ ಕೊಪ್ಪಳ ಜಿಲ್ಲಾ ಗುತ್ತಿಗೆದಾರ ಸಂಘದಿಂದ ಪ್ರತಿಭಟನೆಯನ್ನು ಕೊಪ್ಪಳದ ಅಶೋಕ್ ಸರ್ಕಲ್ ಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪ್ರತಿಭಟನೆ ಮಾಡಲಾಗುವುದು ಪ್ರತಿಭಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಎಲ್ಲಾ ಗುತ್ತಿಗೆದಾರರು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಎಂದು ಗುತ್ತಿಗೆದಾರರಿಗೆ ಕರೆ ನೀಡಿದರು.
ಮತ್ತು 13-11-25 ರಂದು ಜಿಲ್ಲೆಯ ಎಲ್ಲಾ ಗುತ್ತಿಗೆದಾರರು, ತಾವು ನಿರ್ವಹಿಸುತ್ತಿರುವ ಸರಕಾರಕ್ಕೆ ಸಂಬಂಧಿಸಿದ ಹಾಗೂ ಸರ್ಕಾರದ ಅನುದಾನಿತ ಕಾಮಗಾರಿಗಳನ್ನು ತಗಿತಗೊಳಿಸಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ ಆದ್ದರಿಂದ ತಾವು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ಮೊದಲಿನ ಪದ್ಧತಿಯನ್ನು ಮುಂದುವರಿಸುವಂತೆ ಸಂಬಂಧಪಟ್ಟ ಸಂಸದರು ಹಾಗೂ ಶಾಸಕರೊಂದಿಗೆ ಚರ್ಚಿಸಿ ಇತ್ಯರ್ಥ ಪಡಿಸುವ ಮೂಲಕ ಗುತ್ತಿಗೆದಾರರಿಗೆ ಹಾಗೂ ಸಾರ್ವಜನಿಕರಿಗೆ ನೆರವಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ದೇವಪ್ಪ ಅರಕೇರಿ, ಗುತ್ತಿಗೆದಾರರಾದ ವೀರಪ್ಪ ಬಿಸನಹಳ್ಳಿ, ಪರುಶುರಾಮ ಸಕ್ರಣ್ಣವರ, ಎಲ್.ಎಂ.ಮಲ್ಲಯ್ಯ, ಎಸ್. ಪ್ರಸಾದ, ಬಸವರಾಜ ಹಳ್ಳೂರ, ನೀಲಪ್ಪ ಬೆಣಕಲ್ ರಾಮಣ್ಣ ಕಲ್ಲನವರ, ವಿನೋದ ಪೂಜಾರ್, ಕನಕಪ್ಪ ಬ್ಯಾಡರ್, ಕೃಷ್ಣ ಇಟ್ಟಂಗಿ, ಸುಖಿರಾಜ ತಾಳಕೇರಿ ಯಮನೂರಪ್ಪ ನಡುವಿನಮನಿ, ಶರಣಬಸವರಾಜ್ ವೀರಯ್ಯ ಸ್ವಾಮಿ, ಬಾಲಚಂದ್ರ ಸಾಲಬಾವಿ ಇತರರು ಇದ್ದರು.

ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *