ಬ್ರೇಕಿಂಗ್ ನ್ಯೂಸ್:- ನಿರ್ಭಯ ದೃಷ್ಟಿ ನ್ಯೂಸ್

ಮನುಕುಲಕ್ಕೆ ಕನಕದಾಸರ ಕೊಡುಗೆ ಅಪಾರ : ಚಿನ್ನೂರು

ಕುಕನೂರು :-ಕೀರ್ತನೆ ಹಾಗೂ ಸಾಹಿತ್ಯ ಕೃತಿಗಳಿಂದ ಸಮಾಜದಲ್ಲಿನ ಅಂಕುಡೊಂಕು ತಿದ್ದರು ತಮ್ಮ ಸರಳ ಜೀವನ ಮುಡುಪಾಗಿಟ್ಟ ಸಂತ ಕವಿದಾಸ ಶ್ರೇಷ್ಠ ಭಕ್ತ ಕನಕದಾಸರ ಕೊಡುಗೆ ಮನುಕುಲಕ್ಕೆ ಅಪಾರವಾಗಿದೆ ಎಂದು ಗ್ರಾಮ ಪಂಚಾಯತಿ ಅದ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು ಹೇಳಿದರು.

ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದ ವಿಶ್ವ ಮಾನವ ಸ್ವಂತ ಕವಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವದ ಪ್ರಯುಕ್ತ ಮಂಗಳೂರು ಗ್ರಾಮ ವೃತ್ತದಲ್ಲಿ ಇರುವ ಕನಕದಾಸರ ಭಾವಚಿತ್ರಕ್ಕೆ ಪೂಜೆ ಮಹಾ ಮಂಗಳಾರುತಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಸಮಾಜದಲ್ಲಿ ಮೌಡ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ.ದಾಸಸಾಹಿತ್ಯ, ಸಮಾಜದ ಮೂಲಕ ಒರೆ-ಕೊರೆಗಳನ್ನು ತಿದ್ದಿ, ಅನಿಷ್ಠ ಪದ್ಧತಿಗಳು, ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದವರಾಗಿದ್ದರೆ, ಅಂತಹ ಶ್ರೇಷ್ಠರ ತತ್ವಾದರ್ಶನಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಂಕ್ರಪ್ಪ ಕುರಬರ,ಗವಿಸಿದ್ಧಪ್ಪ ಚಟ್ಟಿ,ಪ್ರಭುರಾಜ,ಸುರೇಶ ಮ್ಯಾಗಳೇಶಿ,ಮಾರುತ್ತೆಪ್ಪ ಅಳವಂಡಿ,ಮಂಗಳೇಶಪ್ಪ ಬಂಡಿ,ಮಂಗಳೇಶ ಯತ್ನಟ್ಟಿ,ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಮಂಗಳೇಶ ಸೊಟ್ನರ್,ಮರಿಯಪ್ಪ ಸೊಟ್ನರ್,ವಿರೇಶ ಇಟಗಿ,ಹಾಗೂ ಗ್ರಾಮದ ಎಲ್ಲಾ ಸಮಾಜದ ಬಾಂಧವರು ರವಿ ಆಗೋಲಿ ವರದಿಗಾರರು, ರವಿ ತೋಟದ ವರದಿಗಾರರು.

ಸುದ್ದಿ, ಜಾಹಿರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ವರದಿ ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *