ನಿರ್ಭಯ ದೃಷ್ಟಿ ನ್ಯೂಸ್ breaking news

ಹಿಂಗಾರು ಹಂಗಾಮಿನ ಕಡಲೆ ಕೀಟ ರೋಗ ನಿರ್ವಹಣೆಗೆ ರೈತರು ಮುಂದಾಗಿ : ಪ್ರಮೋದ ತುಂಬಳ

ಕುಕನೂರು/ಯಲಬುರ್ಗಾ ತಾಲೂಕಿನ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡ ಕಡಲೆ ಬೆಳೆಯಲ್ಲಿನ ಕೀಟ ಹಾಗೂ ರೋಗ ನಿರ್ವಹಣೆಗೆ ರೈತರು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಸಲಹೆ ನೀಡಿದ್ದಾರೆ.

ಈ ಕುರಿತು ಪತ್ರಿಕೆ ಪ್ರಕಟಣೆ ನೀಡಿರುವ ಅವರು ಕಡಲೆಯು ಉತ್ತರ ಕರ್ನಾಟಕದ ಮುಖ್ಯವಾದ ಹಿಂಗಾರು ದ್ವಿದಳ ಧಾನ್ಯದ ಬೆಳೆಯಾಗಿದೆ. ಇದನ್ನು ಹೆಚ್ಚಾಗಿ ಆಳವಾದ ಕಪ್ಪು ಮಣ್ಣಿನಲ್ಲಿ ಬೆಳೆಯಲಾಗುತ್ತಿದೆ. 2024-25 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಯಲಬುರ್ಗಾ ಮತ್ತು ಕುಕನೂರು ತಾಲೂಕಿನಲ್ಲಿ ಕ್ರಮವಾಗಿ 31637 ಹೇ. ಮತ್ತು 20856 ಹೇ. ಖುಷ್ಕಿ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ.
ಕಡಲೆ ಬೆಳೆಗೆ ಬಿತ್ತನೆಯಿಂದ ಕಟಾವಿನ ವರಗೆ, ಅನೇಕ ರೀತಿಯ ಕೀಟ ಮತ್ತು ರೋಗ ಬಾದೆ ಕಂಡು ಬರುವುದು ಬೆಳೆಯ ಇಳುವರಿ ಕುಂಠಿತಗೊಳಿಸಿಲು ಕಾರಣವಾಗುತ್ತದೆ. ಕಡಲೆ ಬೆಳೆಯಲ್ಲಿ ಪ್ರಮುಖವಾಗಿ ಕಾಯಿ ಕೊರಕದ ಬಾದೆ ಮತ್ತು ರೋಗಗಳಲ್ಲಿ, ನಟೆ ರೋಗ/ ಸಿಡಿ ರೋಗದ ಬಾದೆ ಹೆಚ್ಚಾಗಿ ಕಂಡು ಬರುತ್ತದೆ.

ಕಡಲೆ ಬಿತ್ತುವಾಗ ಪ್ರತಿ ಎಕರೆಗೆ 20 ಗ್ರಾಂ. ಸೂರ್ಯಕಾಂತಿ ಹಾಗೂ 20 ಗ್ರಾಂ. ಜೋಳದ ಬೀಜಗಳನ್ನು ಕೂಡಿಸಿ ಬಿತ್ತಬೇಕು. ನಂತರ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರಿಮುರಿಯನ್ನು (ಮಂಡಕ್ಕಿ/ಮಂಡಾಳ) ಹೊಲದ ತುಂಬೆಲ್ಲಾ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು ತಿನ್ನಲು ಪ್ರೋತ್ಸಾಹಿಸಿದಂತೆ ಆಗುತ್ತದೆ.
*ಬೆಳೆಯು ಹೂವಾಡುವ ಹಂತದಲ್ಲಿದ್ದಾಗ ತತ್ತಿನಾಶಕ ಕೀಟನಾಶಕವಾದ ಪ್ರೊಫೆನೋಫಾಸ್ 50 ಇ. ಸಿ. ಪರ್ತಿ ಲೀ ನೀರಿಗೆ 2 ಮಿ.ಲೀ. ಬೇರೆಸಿ ಸಿಂಪಡಿಸಬೇಕು* ಮತ್ತು ಹೇಕ್ಟರ್ ಗೆ 10 ರಿಂದ 12 ಮೋಹಕ ಬಲೆಗಳನ್ನು ಬಳಸುವುದರಿಂದ ಕೀಟದ ಬಾದೆ ಹತೋಟಿಗೆ ಬರುತ್ತದೆ.
ತದನಂತರ ಕೀಟನಾಶಕಗಳಾದ 0.075 ಮಿ. ಲೀ ಫೂಬೆಂಡಿಯಾಮೈಡ್ 39.35 ಎಸ್.ಸಿ ಅಥವಾ ಕ್ಲೋರೆಂಟ್ರಿನಾ ಲಿಪ್ರೋಲ 18.5 ಎಸ್.ಸಿ. 0.15 ಮಿ.ಲೀ. ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ 5 ಎಸ್. ಜಿ. ಅಥವಾ 0.1 ಮಿ. ಲೀ. ಸ್ಟೈನೊಸ್ಯಾಡ್ 45 ಎಸ್.ಸಿ. ಅಥವಾ 0.3 ಮಿ.ಲೀ. ಇಂಡಾಕ್ಸಾಕಾರ್ಬ್ 14.5 ಎಸ್.ಸಿ. ಅಥವಾ 4 ಗ್ರಾಂ ಕಾರ್ಬರಿಲ್ 50 ಡಬ್ಲ್ಯುಪಿ. ಅಥವಾ 1.0 ಮಿ.ಲೀ. ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಅಥವಾ 2 ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ. ಅಥವಾ 2 ಮಿ.ಲೀ. ಮಿಥೊಮಿಲ್ 40 ಎಸ್.ಪಿ. ಅಥವಾ ಅಥವಾ ಬೆಳ್ಕೊಳ್ಳಿ ಮತ್ತು ಹಸಿಮೆಣಸಿನಕಾಯಿ ಕಷಾಯವನ್ನು 20 ಮಿ. ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುದರಿಂದ ಕಾಯಿ ಕೋರಕವನ್ನು ನಿಯಂತ್ರಿಸಬಹುದು.

ಪ್ರತಿ ಕಿ. ಗ್ರಾಂ. ಬೀಜಕ್ಕೆ 2 ಗ್ರಾಂ ಕ್ಯಾಪ್ಟಾನ್ 80 ಡಬ್ಲೂ.ಪಿ. ಅಥವಾ ಥೈರಾಮ್ 75 ಡಬ್ಲೂ.ಪಿ. ಅಥವಾ ಮೆಂಕೋಜೆಬ್ 75 ಡಬ್ಲೂ.ಪಿ. ಅಥವಾ 3.5 ಗ್ರಾಂ (ಕಾರ್ಬನಡೈಜಿಮ್ + ಮ್ಯಾಂಕೋಜೆಬ್) ಅಥವಾ 4 ಗ್ರಾಂ. ಟ್ರೈಕೋಡರ್ಮಾ ಜೈವಿಕ ಶಿಲೀಂದ್ರದಿಂದ ಬೀಜೋಪಚಾರ ಮಾಡಬೇಕು. ರೋಗ ಬಾಧಿತ ಗಿಡಗಳನ್ನು ಆಗಾಗ ಕಿತ್ತು ಸುಡಬೇಕು.

ನೆಟೆ ರೋಗ ಮತ್ತು ಬೇರು ಕೊಳೆ ರೋಗದ ಪರಿಣಾಮಕಾರಿ ನಿರ್ವಹಣೆಗೆ ಬಿತ್ತನೆ ಬೀಜಕ್ಕೆ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರನಾಶಕವನ್ನು ಪ್ರತಿ ಕಿ. ಗ್ರಾಂ. ಬೀಜಕ್ಕೆ 4 ಗ್ರಾಂ ದಂತೆ ಬೀಜೋಪಚಾರ ಮಾಡುವುದರ ಜೊತೆಗೆ 1 ಕಿ. ಗ್ರಾಂ. ಟ್ರೈಕೋಡರ್ಮಾ ಪುಡಿಯನ್ನು 100 ಕಿ. ಗ್ರಾಂ. ಪುಡಿ ಮಾಡಿದ ತಿಪ್ಪೆಗೊಬ್ಬರ ಮತ್ತು 20 ಕಿ. ಗ್ರಾಂ ಬೇವಿನ ಬೀಜದ ಪುಡಿಯಲ್ಲಿ ಮಿಶ್ರಮಾಡಿ ಶೇ. 50 ರಷ್ಟು ತೇವಾಂಶ ಇರುವಂತೆ ಮಾಡಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ 7 ದಿವಸಗಳವರೆಗೆ ಇಟ್ಟು ಒಂದು ಎಕರೆಗೆ ಜಮೀನಿಗೆ (ಮಣ್ಣಿಗೆ) ಬಿತ್ತುವ ಸಮಯದಲ್ಲಿ ಉಪಯೋಗಿಸುವುದರಿಂದ ರೋಗ ಹತೋಟಿಲ್ಲಿಡಬಹುದು. ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.

ಸುದ್ದಿ, ಜಾಹೀರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ

Leave a Reply

Your email address will not be published. Required fields are marked *