- * ಸಾಮಾಜಿಕ ಸಮಾನತೆ ಮತ್ತು ಭಕ್ತಿ ಚಳುವಳಿಗೆ ಕನಕದಾಸರು ನೀಡಿದ ಕೊಡುಗೆ ಅಪಾರ : ಆರ್ ಪಿ ರಾಜೂರು, *

ಕುಕನೂರು : ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ, ಜಾತಿಯನ್ನು ನಿರಾಕರಿಸಿ, ಉಡುಪಿಯ ಶ್ರೀಕೃಷ್ಣನ ದರ್ಶನವನ್ನು “ಕನಕನ ಕಿಂಡಿ” ಮೂಲಕ ಎಲ್ಲರಿಗೂ ದರ್ಶನ ಸಾಧ್ಯವಾಗಿಸಿದವರು ವಿಶ್ವ ಮಾನವ ಸಂತ ಕವಿ ದಾಸ ಶ್ರೇಷ್ಠ ಭಕ್ತ ಕನಕದಾಸರು ಎಂದು ನಿವೃತ್ತ ಉಪನ್ಯಾಸಕ ಆರ್ ಪಿ ರಾಜೂರು ಹೇಳಿದರು.
ಕುಕುನೂರು ಪಟ್ಟಣದ ಇಟಗಿ ಮಸೂತಿ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ವಿಶ್ವಮಾನವ ಸಂತ ಕವಿ ದಾಸ ಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತೋತ್ಸವ ವೇದಿಕೆ ಕಾರ್ಯಕ್ರಮ ಹಾಗೂ ಶ್ರೀ ಅಮೋಘಸಿದ್ದೇಶ್ವರ ಮಠದಲ್ಲಿ ಕುರುಬ ಸಮಾಜದ ಸಾಮೂಹಿಕ ವಿವಾಹ ಮತ್ತು ಸನ್ಮಾನ ಸಮಾರಂಭ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಕವಿ, ತತ್ವಜ್ಞಾನಿ, ಮತ್ತು ಹರಿದಾಸರಾಗಿ ಕನ್ನಡ ಭಾಷೆಯಲ್ಲಿ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಮತ್ತು ಹರಿಭಕ್ತಿಸಾರ ಮುಂತಾದ ಶ್ರೇಷ್ಠ ಕೃತಿಗಳನ್ನು ರಚಿಸಿದರು ಅಂತಹ ವಿಶ್ವ ಮಾನವ ಕವಿ ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವ ಆದರ್ಶಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ ನೆರವೇರಿಸಿ ಮಾತನಾಡಿ ಇಂದು ಕನಕದಾಸರ 538ನೇ ಜಯಂತೋತ್ಸವ ನಿಮಿತ್ಯ ನಾಲ್ಕು ಜೋಡಿ ವಿವಾಹ ಮಹೋತ್ಸವ ನೇರವೇರಿದ್ದು, ನೂತನ ದಾಂಪತ್ಯಕ್ಕೆ ಕಾಲಿಟ್ಟ ಮಹಿಳೆಯರು ಅತ್ತೆ ಮಾವಂದಿರನ್ನು ತಂದೆಯ ತಾಯಿಯ ಸ್ವರೂಪದಲ್ಲಿ ಕಂಡುಕೊಂಡು ಮನೆಯ ಜವಾಬ್ದಾರಿಯನ್ನು ಹೊತ್ತು ಹಿರಿಯರಿಗೆ ಗೌರವ ನೀಡುವುದರೊಂದಿಗೆ ಸಂಸಾರ ನಡೆಸಿದಾಗ ಸುಖ ಸಂಸಾರವಾಗಲು ಸಾಧ್ಯ ಎಂದು ನೂತನ ವಧು ವರರಿಗೆ ಕಿವಿ ಮಾತನ್ನು ಹೇಳಿದರು.
ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಅನ್ನದಾನೀಶ್ವರ ಶಾಖಾ ಮಹಾದೇವ ಮಹಾಸ್ವಾಮಿಗಳು ಮಾತನಾಡಿ ಕನಕದಾಸರು ತಮ್ಮ ಕೃತಿಗಳ ಮೂಲಕ ಅಂದಿನ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿ ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಕನ್ನಡ ಸಾಹಿತ್ಯ ಲೋಕಕ್ಕೂ ತಮ್ಮ ಕೊಡಗೆಯನ್ನು ಹೇಳಿದರು.
ಹಾಲುಮತ ಸಮಾಜದವರಾದ ಶೇಕಪ್ಪ ಕಂಬಳಿ, ಲಕ್ಷ್ಮಣ ಬೆದವಟ್ಟಿ, ಕಳಕಪ್ಪ ಕಂಬಳಿ ಕೊಡಗೈ ದಾನಿಗಳಿದ್ದು ಎಲ್ಲಾ ಸಮುದಾಯದ ಧರ್ಮದವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಾಯ ಸಹಕಾರ ನೀಡುವ ಮೂಲಕ ಎಲ್ಲರಿಗೂ ಅವಿನೋಭಾವ ಸಂಬಂಧವನ್ನು ಬೆಳೆಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರವು, ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮರ್ಪಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೇಷ್ಠ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ಮೂಲಕ ಬಯಲು ರಂಗ ಮಂದಿರ ಇಟಗಿ ಮಸೂತಿ ವರೆಗೂ ನೆರವೇರಿಸಲಾಯಿತು.
ಭಾವಚಿತ್ರ ಮೆರವಣಿಗೆಗೆ ಲೋಕಸಭಾ ಸದಸ್ಯರಾದ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಹಾಲಪ್ಪ ಆಚಾರ್, ನವೀನ್ ಗುಳಗಣ್ಣವರ್ ನೀಡಿದರು,

ಕಾರ್ಯಕ್ರಮದ ವೇದಿಕೆಯ ದಿವ್ಯ ಸಾನಿಧ್ಯ
ಆತ್ಮಾನಂದ ಭಾರತಿ ಸ್ವಾಮಿಗಳು ಶ್ರೀ ರಾಘವಾನಂದ ಮಠ ಹಾಗೂ ವಿರುಪಾಕ್ಷಯ್ಯ ಗುರುವಿನ ಮಠ, ಮಂಜುನಾಥಯ್ಯ ಗುರುವಿನಮಠ ವಹಿಸಿದ್ದರು.
ವೇದಿಕೆಯಲ್ಲಿ ತಹಶೀಲ್ದಾರ ಎಚ್.ಪ್ರಾಣೇಶ್, ನವೀನ ಗುಳಗಣ್ಣವರ್, ಮುಖ್ಯಾಧಿಕಾರಿ ನಬಿಸಾಬ, ಕಳಕಪ್ಪ ಕಂಬಳಿ, ಕೃಷಿ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ
ಭರಮಪ್ಪ ತಳವಾರ , ಪಟ್ಟಣ ಪಂಚಾಯತಿ ಅಧ್ಯಕ್ಷೆ ಲಲಿತಾ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ್ ಆರ ಬೆರಳಿನ, ಪ್ರಭಾರಿ ತಹದಾರ ಬಸವರಾಜ, ಶಿರಸ್ತೇದಾರ ಮಹಮ್ಮದ್ ಮುಸ್ತಫ, ಸಮಾಜದ ಮುಖಂಡರಾದ ಮಂಜುನಾಥ್ ಕಡೆಮನಿ, ಅಧ್ಯಕ್ಷರು, ಕೆರಿಬಸಪ್ಪ ನಿಡಗುಂದಿ, ಕಾಶಿಮಸಾಬ್ ತಳಕಲ್, ಮಹೇಶ್ ಗಾವರಾಳ, ದೇವಪ್ಪ ಹಟ್ಟಿ, ಲಕ್ಷ್ಮಣ ಬೆದವಟ್ಟಿ, ಮಲ್ಲಪ್ಪ ಚಳ್ಳಮರದ, ಉಮೇಶಪ್ಪ ಬೆದವಟ್ಟಿ, ಶರಣಮ್ಮ ಗುರುವಿನ, ಮಂಜುನಾಥ ಗಟ್ಟಿಪ್ಪನವರ, ರವಿ ಕುರಿ, ಕೇಶವ ಜುಮ್ಮಣ್ಣವರ್, ರೇವಣಪ್ಪ ಹಟ್ಟಿ, ನಿಂಗಪ್ಪ ಕಂಬಳಿ, ಶರಣಪ್ಪ ಕೊಪ್ಪದ, ಸಂಗಪ್ಪ ಕೊಪ್ಪದ, ಮಹೇಶ ಬೆದವಟ್ಟಿ, ಉಮೇಶ್ ಕಂಬಳಿ, ಹಾಗೂ ಅಮೋಘಸಿದ್ದೇಶ್ವರನ ಭಜನಾ ಕುಕನೂರು ಪಟ್ಟಣದ ಹಾಗೂ ಉತ್ತಮ ಸಮಾಜದ ಬಾಂಧವರು ಪ್ರಮುಖರು ಪ್ರಮುಖರು.
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು
ಚನ್ನಯ್ಯ ಹಿರೇಮಠ ಕುಕನೂರು
