oplus_1026

ಸರ್ವೆ ನಂಬರ್ 78 ರಲ್ಲಿ ತಾಲೂಕ ಆಡಳಿತ ಕಚೇರಿಗಳನ್ನು ನಿರ್ಮಿಸಬಾರದು ಎಂದು ನಾಳೆ ಪಾದಯಾತ್ರೆಯ ಮೂಲಕ ಮನವಿ.

ಕೊಪ್ಪಳ ಜಿಲ್ಲೆ, ಕುಕನೂರು ಪಟ್ಟಣದ ಆರಾಧ್ಯ ದೈವ ಶ್ರೀ ಗುದ್ನೇಶ್ವರ ಭಕ್ತರಿಂದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ರುದ್ರಮುನೇಶ್ವರನ ಭಕ್ತರಾದ ಮಾರುತಿ ಗೌರಾಳ ಮಾತನಾಡಿ ತಾಲೂಕ ಆಡಳಿತಾತ್ಮಕ ಹಿತ ದೃಷ್ಟಿಯಿಂದ ತಾಲೂಕ ಆಡಳಿತ ಕಚೇರಿಗಳು ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಭವನ ಕೋಟು ತಾಲೂಕ ಕ್ರೀಡಾಂಗಣ ನಿರ್ಮಾಣಕ್ಕಾಗಿ ಹೋರಾಟ ಮಾಡುತ್ತಿರುವುದು ಸ್ವಾಗತ ಅರ್ಹ ಆದರೆ ಇವುಗಳನ್ನೆಲ್ಲ ನಿರ್ಮಾಣ ಮಾಡಲು ಕುಕುನೂರು ಪಟ್ಟಣದ ಐತಿಹಾಸಿಕ ಪರಂಪರೆಯುಳ್ಳ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀಗುದ್ನೇಪ್ಪನ ಆಸ್ತಿ ಸರ್ವೆ ನಂಬರ್ 78 ರಲ್ಲಿ ಆಗಬೇಕು ಎಂದು ಪಟ್ಟ ಬದ್ಧ ರಾಜಕಾರಣಿಗಳು ಮತ್ತು ಸರ್ಕಾರ ಹೇಳುತ್ತಿರುವುದು ಖಂಡನೀಯ.

ಜಾತ್ರೆ ಸಮಯದಲ್ಲಿ ಲಕ್ಷಗಟ್ಟಲೆ ಜನಸಾಗರ ಸೇರುವಂತಹ ಐತಿಹಾಸಿಕ ಪರಂಪರೆಯುಳ್ಳ ಪಂಚಕಳಶ ಮಹಾ ರಥೋತ್ಸವಕ್ಕೆ ಭಕ್ತ ಸಾಗರ ಹರಿದುಬರುತ್ತದೆ.

ಬರುವಂತಹ ಭಕ್ತಾದಿಗಳಿಗೆ ದೇವಸ್ಥಾನ ವತಿಯಿಂದ ಅನುಕೂಲತೆಗಳು ಇಲ್ಲ ದೇವಸ್ಥಾನದ ಅಭಿವೃದ್ಧಿಯ ಕಾಣದೆ ಇದೆ,
ಶ್ರೀ ಗುದ್ನೇಪ್ಪನ ಮಠವು ಜಂಗಮರು ವಾಸಿಸುತ್ತಿದ್ದು. ಈ ಹಿಂದೆನಿಂದಲೂ ಸೇವಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದು. ಬಡ ಕುಟುಂಬಗಳು ವಾಸವಾಗಿದ್ದು ಅವರಿಗೆ ಹೆದರಿಸಿ ಬೆದರಿಸಿ ಸರ್ವೇ ನಂಬರ್ 78 ರಲ್ಲಿ ಆಡಳಿತ ಭವನ ಕಟ್ಟುವುದು ಎಷ್ಟರಮಟ್ಟಿಗೆ ಸರಿ.

ರಾಜಕಾರಣ ಮಾಡುವವರು ಯಾವುದೇ ದೇವಸ್ಥಾನದ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳದೆ ಜೀರ್ಣೋದ್ಧಾರ ಮಾಡಬೇಕೆ ಹೊರತು ಗ್ರಾಮದ ಜನರನ್ನು ಹೆದರಿಸಿ ಅವರಿಗೆ ನೋಟಿಸು ನೀಡುವಂತಹದಲ್ಲ.

ಈ ಪ್ರಕ್ರಿಯೆ ಇದೇ ತರನಾಗಿ ಮುಂದುವರೆದರೆ ಎಲ್ಲದಕ್ಕೂ ಮಠದ ಸದ್ಭಕ್ತರು ಸಿದ್ಧರಿದ್ದೇವೆ ಎಂದು ಹೇಳಿದರು.

ನಾಳೆ ಶುಕ್ರವಾರ ದಿನ ಶ್ರೀ ಗುದ್ನೇಶ್ವರ ಮಠದಿಂದ ಪಾದಯಾತ್ರೆಯ ಮೂಲಕ ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದ ಮೂಲಕ ಶ್ರೀ ವೀರಭದ್ರಪ್ಪ ವೃತ್ತದಲ್ಲಿ ಶಾಂತಿಯುತವಾದ ಪಾದಯಾತ್ರೆಯ ಮೂಲಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಗುತ್ತದೆ ಎಂದು ಮಾತನಾಡಿದರು.

ಸುರೇಶ ಬಳೂಟಗಿ ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ
ಕುಕನೂರಿನಲ್ಲಿ ಒತ್ತಾಯಪೂರ್ವಕವಾಗಿ ಶಾಲೆ,ಅಂಗಡಿ ಮುಂಗಟ್ಟು,ಸಾರಿಗೆ ವ್ಯವಸ್ಥೆ ಬಂದ್ ಮಾಡಿರುವುದು ರಾಯರೆಡ್ಡಿಯವರ ಅಸಹಾಯಕ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಕುಕನೂರು ತಾಲೂಕಿನ ಗುದ್ನೆಪ್ಪನಮಠದ ಶ್ರೀ ರುದ್ರಮುನೇಶ್ವರ ದೇವಸ್ಥಾನದ ಭೂಮಿಯಲ್ಲಿ ಸರಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕೆಂದು ಈ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿಯವರು ಇಂದು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪಟ್ಟಣ ಪಂಚಾಯತನವರನ್ನು ದುರ್ಬಳಕೆ ಮಾಡಿಕೊಂಡು ಅವರ ಮೂಲಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ.ಅಲ್ಲದೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುವ ಹಾಗೆ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಿಸಿದ್ದಾರೆ.ಸಾರ್ವಜನಿಕ ಸಾರಿಗೆ ಬಂದ್ ಮಾಡಿ, ಬಡ,ಅಸಹಾಯಕ ಜನರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದ ಇವರು ತಮ್ಮ ಹಠ ಸಾಧಿಸಲು ಇಂಥ ಕೃತ್ಯ ಎಸಗಿದ್ದು ಅವರ ಹತಾಶ ಭಾವನೆಯನ್ನು ತೋರಿಸುತ್ತಿದೆ.ಅಲ್ಲದೆ ದೇವಸ್ಥಾನದ ಉಳಿವಿಗಾಗಿ ಸಾರ್ವಜನಿಕರು ಹಮ್ಮಿಕೊಂಡಿದ್ದ ಪ್ರತಿಭಟನಾ ಹೋರಾಟವನ್ನು ಪೊಲೀಸ್ ಇಲಾಖೆಯ ಮೂಲಕ ಸೂಕ್ತ ಬಂದೋಬಸ್ತ್ ನೀಡಲು ನಮ್ಮಲ್ಲಿ ಸಿಬ್ಬಂದಿ ಇಲ್ಲ ಎಂಬ ಹಿಂಬರಹ ನೀಡಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಸರಕಾರವೇ ಅಧಿಕಾರದಲ್ಲಿದ್ದು, ನೀವು ಶಾಸಕರಾಗಿದ್ದು, ವಿಷಯ ಹೈಕೋರ್ಟಿನಲ್ಲಿ ಇರುವಾಗ ಇಂಥ ನಾಟಕ ಮಾಡುವ ಅವಶ್ಯಕತೆ ಇರಲಿಲ್ಲ. ಮಾನ್ಯ ರಾಯರೆಡ್ಡಿ ಸಾಹೇಬರೇ ನಿಮಗೆ ಕಿಂಚಿತ್ತಾದರೂ ಮಾನವೀಯತೆ ಇದ್ದರೆ, ಈ ಜಾಗವನ್ನು ಬಿಟ್ಟು ಬೇರೆ ಕಡೆ ಎಲ್ಲಿಯಾದರೂ ಭೂಮಿ ಹುಡುಕಿ ಕಟ್ಟಡ ನಿರ್ಮಾಣ ಮಾಡಿ, ಅದರ ಬದಲು ಶ್ರೀ ರುದ್ರಮುನೇಶ್ವರ ದೇವಸ್ಥಾನದ ಭೂಮಿ ಕಬಳಿಸುವ ಹುನ್ನಾರ ನಡೆಸಿದರೆ ಈ ದೇವಸ್ಥಾನದ ಸದ್ಭಕ್ತರ ಕೆಂಗಣ್ಣಿಗೆ ಗುರಿಯಾಗುತ್ತೀರಿ ಎಂದು ಹೇಳಿದರು.

ನಂತರ ಶ್ರೀ ರುದ್ರಮುನೇಶ್ವರ ಸ್ವಾಮಿಯ ಭಕ್ತಾರಾದ ಮಂಜುನಾಥ ನಾಡಗೌಡರ, ಕರಬಸಯ್ಯ ಬಿನ್ನಾಳ, ಮಹೇಶ್ ಕಲ್ಮಠ, ನಾಗಪ್ಪ ಕಲ್ಮನಿ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ
ಶಿವಕುಮಾರ್ ನಾಗಲಾಪುರ ಮಠ, ಮಹಾಂತೇಶ್ ಹೂಗಾರ, ರಾಜು ದ್ಯಾಂಪುರ, ವಿನಯ ಸರ್ಗಣಾಚಾರ, ಬಸವರಾಜ ಹಾಳಕೇರಿ, ಲಕ್ಷ್ಮಣ ಕಾಳೆ, ಶರಣಯ್ಯ ಹುಣಿಸಿಮರದ, ಕನಕಪ್ಪ ವಾಯ್ ಬ್ಯಾಡರ್, ಜಗನ್ನಾಥ್ ಭೋವಿ, ಸಿದ್ದು ಉಳ್ಳಾಗಡ್ಡಿ, ಮಲ್ಲಿಕಾರ್ಜುನ್ ಚೌದರಿ, ಚಂದ್ರು ಬಗನಾಳ, ಮಹಾಂತೇಶ್ ಹೂಗಾರ್ ಹಾಗೂ ಶ್ರೀ ರುದ್ರಮುನೇಶ್ವರ ಭಕ್ತರು ಇತರರು ಇದ್ದರು.

ವರದಿ ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *