oplus_1026

ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ಭೂಗಳ್ಳತನ ಮಾಡುತ್ತಿದ್ದಾರೆ:-ವೀರಯ್ಯ ಇನಾಮ್ಹಾರ್.

ಕುಕನೂರು: ಪಟ್ಟಣದ ಗುದ್ನೇನಪ್ಪನ ಮಠದ ಸರ್ವೆ ನಂಬರ್ 78ರ ಜಮೀನಿಗೆ ಸಂಬಂಧಿಸಿದಂತೆ. ಈಗಾಗಲೇ ಹೈಕೋರ್ಟ್ ನಲ್ಲಿ ಪ್ರಕರಣವು ಇನ್ನು ವಿಚಾರಣಾ ಹಂತದಲ್ಲಿದ್ದು, ವಿಚಾರಣೆ ಇದ್ದಾಗಲೂ ಪರ ವಿರೋಧ ಚರ್ಚೆಗಳು ತಾರಕಕ್ಕೇರಿದೆ.

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎರಡು ದಿನದ ಹಿಂದೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ

ಕುಕುನೂರು ಪಟ್ಟಣದ ವಿವಿಧ ಸಂಘಟನೆಗಳು, ನಾಗರಿಕ ವೇದಿಕೆ ಪತ್ರಿಕಾಗೋಷ್ಠಿ ನಡೆಸಿ. ತಾಲೂಕಿನ ಆಡಳಿತಾತ್ಮಕ ಹಿತ ದೃಷ್ಟಿಯಿಂದ ತಾಲೂಕು ಆಡಳಿ ಕಚೇರಿಗಳು ಹಾಗೂ ಬುದ್ಧ ಬಸವ ಅಂಬೇಡ್ಕ‌ರ್ ಭವನ, ಕೋರ್ಟ್, ತಾಲೂಕು ಕ್ರೀಡಾಂಗಣವೂ ಸರ್ಕಾರಕ್ಕೆ ಸಂಬಂಧಿಸಿದ ಸರ್ವೆ ನಂಬರ್ 78 ರಲ್ಲಿ ಆಗಬೇಕು ಎಂದು ಅಂಗಡಿ ಮುಂಗಟುಗಳು ಮತ್ತು ಶಾಲೆಗಳನ್ನು ಬಂದು ಕರೆಕೊಟ್ಟು ಪ್ರತಿಭಟನೆ ಮಾಡುವುದಾಗಿ ಹೇಳಿದರು.

ಇದನ್ನು ಕುರಿತು ಕುಕನೂರು ಪಟ್ಟಣದ ಶ್ರೀ ಗುದ್ನೇಶ್ವರ ಮಠದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ದೇವಸ್ಥಾನದ ಅರ್ಚಕರು ಮತ್ತು ಸೇವಾದಾರರು ಹಾಗೂ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೀರಯ್ಯ ಇನಾಮ್ಹಾರ್.ಈಗ ಎರಡು ದಿನಗಳ ಕೆಳಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ‘ಗುದ್ದೇಪ್ಪನ ಮಠದ ಜನರು ಭೂಗಳ್ಳರು ಎಂದು ಮಾತನಾಡಿದರು, ಆದರೆ ಶ್ರೀ ಗುದ್ನೇಶ್ವರ ಮಠದ ಅರ್ಚಕರು, ಸೇವಾದಾರರು ಭೂಗಳ್ಳರಲ್ಲ, ಸರ್ಕಾರ ನಮ್ಮ ಭೂಮಿಯನ್ನು ಕಸಿದುಕೊಂಡು ನಮ್ಮನ್ನು ಭೂ ವಂಚಿತರನ್ನಾಗಿ ಮಾಡಿದೆ.

ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ಭೂಗಳ್ಳತನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಆರೋಪಿಸಿದರು.

ದೇವಸ್ಥಾನದ ಜಮೀನು ಮತ್ತು ಸೇವಾದಾರರ ಜೀವನದ ಉಳಿವಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ.

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ದೇವಾಲಯ ಹಾಗೂ ಸರ್ವ ಜನಾಂಗ ಮತ್ತು ವಿವಿಧ ಧರ್ಮದವರು ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಸ್ಥಾನವು ಪ್ರತಿವರ್ಷ ಡಿಸೆಂಬರ್ ನಲ್ಲಿ ಬರುವ ಹೊಸ್ತಿಲ ಹುಣ್ಣಿಮೆಯ ದಿನದಂದು ಲಕ್ಷಾಂತರ ಭಕ್ತ ಸಮೂಹದೊಂದಿಗೆ ಪ್ರಭುಲಿಂಗ ದೇವರು ಇವರ ದಿವ್ಯ ಸಾನಿಧ್ಯದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.

ಈ ಹಿಂದಿನ ಕುಂತಳಪುರದ ಆರಸರು ಶ್ರೀ ರುದ್ರ ಮುನೇಶ್ವರರಿಗೆ ಉಂಬಳವಾಗಿ ಸುಮಾರು 188 ಎಕರೆ ಜಮೀನನ್ನು ಶ್ರೀ ರುದ್ರಮುನಿಶ್ವರ ಶ್ರೀಗಳಿಗೆ ಕೊಟ್ಟಿರುತ್ತಾರೆ . ಸಾವಿರಾರು ಹುಣಸಿ ಬೀಜ ಬಿತ್ರಿದ್ದರಿಂದ ಇಂದು ಅವುಗಳು ಹೆಮ್ಮರವಾಗಿ ಬೆಳೆದು ಲಕ್ಷಾಂತರ ರೂಪಾಯಿಗಳನ್ನು ಆದಾಯ ಕೊಡುತ್ತವೆ ಸುಮಾರು 800 ವರ್ಷಗಳಿಂದ ಗುದ್ದೇಶ್ವರ ದೇವಸ್ಥಾನದ ಹೆಸರಿನಲ್ಲಿ ಈ ಒಂದು 188 ಎಕರೆ ಜಮೀನು ಖಾತೆ ಇದ್ದು 1954 ರಿಂದ ಪಹಣಿ ಪತ್ರಿಕೆಗಳಲ್ಲಿ ನಮೋದಿಸಿರುತ್ತಾರೆ ಆದರೂ ಸಹಿತ ಸೇವಾದಾರಾದ ನಾವುಗಳು ಮತ್ತು ಗುದ್ನೇಶ್ವರ ದೇಮಾನದ ಪುಜಾರಿಗಳು/ದೇವಸ್ತಾನದ ಪೂಜೆ  ಕೈಂಕರ್ಯಗಳನ್ನು ನಾವುಗಳು ದೇವಸ್ಥಾನ ಹೊರತುಪಡಿಸಿ ಇನ್ನು ಉಳಿದ ಹೊರಸೇವೆಗಳನ್ನು ನಮ್ಮ ಪುರ್ವಜರು ಮಾಡುತ್ತಾ ಬಂದಿರುತ್ತಾರೆ.ನಾವುಗಳು ಅದೆ ಧಾರ್ಮೀಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಸದ್ಯ ನಾವುಗಳು ಈ ಜಮೀನನ್ನು ಉಳಿಮ ಮಾಡಿ ನಮ್ಮ ಜೀವನವನ್ನು ನಡೆಸಿಕೊಂಡು ಬಂದಿರುತ್ತೇವೆ ನಂತರದಲ್ಲಿ ದಿನಾಂಕ 1-1-1981 ರಲ್ಲಿ ಸೇವಾದದರಿಗೆ 40 ಎಕರೆ ಮತ್ತು ಅರ್ಚಕರಿಗೆ 45 ಎಕರೆ ಜಮೀನಿಗೆ ಇನಾಮರದ್ದತಿಗೆ ಅರ್ಜಿಯನ್ನು ಸಲ್ಲಿಸಿ, ಭೂ ನ್ಯಾಯ ಮಂಡಳಿ ಯಲಬುರ್ಗಾ ರವರಿಂದ ಆದೇಶ ಮಾಡಿಸಿಕೊಂಡಿದ್ದು ಇರುತ್ತದೆ ಅದರ ಸಂಖ್ಯೆ, ಕುಮ್ ಆರ್ ನಂಬರ್ ಇನಾ 336 ದಿನಾಂಕ ಒಂದು ಹನ್ನೆರಡು 1981 ಎಂದು ಇರುತ್ತದೆ ನಂತರದಲ್ಲಿ ನಾವುಗಳು ಗೇಣಿ ದುಡ್ಡನ್ನು ಸರಕಾರಕ್ಕೆ ತುಂಬಿರುತ್ತೇವೆ. ಹಾಗೂ ನಾಲೈದು ಪೀಳಿಗೆಗಳಿಂದ ನಾವೇ ಮಾಡುತ್ತಾ ಬಂದಿರುತ್ತೇವೆ ಬೆಳೆಗಳ ಮಾಹಿತಿ ಕೂಡ ನಮ್ಮದು ಇರುತ್ತದೆ ಇದಲ್ಲ ಮಾಹಿತಿ ಇದ್ದರೂ ಸಹಿತ ತಾಲೂಕ ಆಡಳಿತ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಸದರಿ ಜಮೀನನ್ನು ಹೊರತುಪಡಿಸಿ ಉಳಿದ ಜಮೀನಿನಲ್ಲಿ ಈಗಾಗಲೇ ನವೋದಯ ಶಾಲೆಗೆ 40 ಎಕರೆ ಐಟಿಐ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿಗೆ 10 ಎಕರೆ ವಾಟರ್ ಟ್ಯಾಂಕ್ ಒಂದು ಎಕರೆ ಮುರಾರ್ಜಿ ಸ್ಕೂಲಿಗೆ 4 ಎಕರೆ ಇವುಗಳನ್ನು ಸರ್ಕಾರದವರು ಉಪಯೋಗಿಸುತ್ತಿದ್ದಾರೆ.

ಉಳಿದ ಜಮೀನು ಅಜ್ಞನ ಜಾತ್ರೆಗೆ ಅವಶ್ಯಕತೆ ಇರುವುದರಿಂದ ತಾವು ಈ ಗುದ್ದೇಷ್ಮನ ಮಠದ ಜಮೀನನ್ನು ಕೈ ಬಿಟ್ಟು ಬೇರೆ ಸರ್ಕಾರಿ ಜಮೀನುಗಳು ಇದ್ದು ಅದರಲ್ಲಿ ತಾಲೂಕ್ ಆಡಳಿತ ಭವನ ಕೋರ್ಟು ಹಾಗೂ ಬುದ್ಧ ಬಸವ ಅಂಬೇಡ್ಕರ್ ಭವನ ನಿರ್ಮಿಸಬೇಕಾಗಿ ವಿನಂತಿ ಕುಕನೂರು ಗ್ರಾಮದ ಸರ್ವೆ ನಂಬರ್ 171 ರಲ್ಲಿ 31 ಎಕರೆ 13 ಗುಂಟೆ ಗಾವರಾಳ ಸಿನಿಮಾದ ಸರ್ವೆ ನಂಬರ್ 5 ರಲ್ಲಿ ಸುಮಾರು 100 ಎಕರೆ ಜಮೀನಿದ್ದು ಇವುಗಳು ಕುಕನೂರಿಗೆ ಹೊಂದಿಕೊಂಡ ಇರುವ ಜಮೀನುಗಳಾಗಿವೆ ಇದರಲ್ಲಿ ಎಲ್ಲಾ ಕಚೇರಿ ಗಳನ್ನು ನಿರ್ಮಾಣ ಮಾಡಲು ಸಾಕಷ್ಟು ಜಮೀನು ಇರುತ್ತದೆ.

1954 ಪಹಣಿ ಪತ್ರಿಕೆಗಳಲ್ಲಿ ಸಂಪೂರ್ಣ ಜಮೀನು ಶ್ರೀಗುದ್ರೇಶ್ವರ ದೇವರ ಪೂಜಾರಿ ಸಂಗನಬಸಯ್ಯ ಮತ್ತು 18 ಜನ ಸೇವದಾರರು ಗುದ್ನೇಪ್ಪನ ಮಠ ಇವರ ಹೆಸರಿನಲ್ಲಿ ಖಾತೆ ಇರುವುದು. ನಂತರದ ದಿನಗಳಲ್ಲಿ 1981ರ ಟ್ರಿಬಿನಲ್ ಆದೇಶ ಸಂಖ್ಯೆ. ಎಲ್ ಆರ್ ಎಂ ಇನಾಂ 336 ದಿನಾಂಕ 1.12 1981ರ ಆದೇಶದಂತೆ, ಪೂಜಾರಿ ಅವರಿಗೆ 45 ಎಕರೆ ಹಾಗೂ ಸೇವಾದಾರರಾದ ನಮ್ಮ ಮನೆತನದ ಹಿರಿಯರಿಗೆ 40 ಎಕರೆ ಆದೇಶವಾಗಿದ್ದು ಇರುತ್ತದೆ. ಸುಮಾರು ನೂರಾರು ವರ್ಷಗಳಿಂದ ನಮ್ಮ ಮನೆತನದ ಹಿರಿಯರು ಹಾಗೂ ನಾವುಗಳು ಸಾಗುವಳಿದಾರರು ಇದ್ದಾಗಿಯೂ ಕೂಡ ನಮ್ಮನ್ನು ಒಕ್ಕಲು ಎಬ್ಬಿಸಿ ಸದರಿ ಭೂಮಿಯನ್ನು ಕಬಳಿಸುವ ದುರುದ್ದೇಶದಿಂದ, ತಮ್ಮ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ನಮ್ಮಗಳ ಮೇಲೆ ಸುಳ್ಳು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಲಾಯ್ತು ಎಂದು ಮಾತನಾಡಿದರು.

ನಂತರ ಮಾತನಾಡಿದ ಜಗದೀಶ ಎಚ್. ತೊಂಡೆಹಾಳ ವಕೀಲರು, ಬಹುಜನ ದಲಿತ ಸೇನೆ ಕರ್ನಾಟಕ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮಾತನಾಡಿ ಸೂಕ್ತ ದಾಖಲಾತಿಗಳೊಂದಿಗೆ ನಾವುಗಳು ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡದಲ್ಲಿ ರಿಟ್ ಪೆಟಿಷನ್ ಸಂಖ್ಯೆ 104421/2024 ನ್ನು ದಾಖಲಿಸಿ ಸದರಿ ತಾಲೂಕ ಆಡಳಿತ ಕಛೇರಿ ನ್ಯಾಯಾಲಯ ಹಾಗೂ ಬುದ್ಧ ಬಸವ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಬಾರದು ಎಂದು ತಡೆಯಾಜ್ಞೆಯನ್ನು ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುತ್ತದೆ. ಹೀಗಿರುವಾಗ ಕನ್ನಡಪ್ರಭ ದಿನಪತ್ರಿಕೆ ಯಲ್ಲಿ ಹಾಗೂ ಲೋಕಧ್ವನಿ ದಿನಪತ್ರಿಕೆಯಲ್ಲಿ ಪ್ರಕಟವಾದ ದಿನಾಂಕ 31.10.2025. ವಿಷಯವನ್ನು ಓದಿ ತಿಳಿದುಕೊಂಡು ನಮ್ಮಗಳ ಮನಸ್ಸಿಗೆ ತುಂಬಾ ನೋವು ಮತ್ತು ಆಘಾತ ಉಂಟಾಗಿರುತ್ತದೆ ಸದರಿ ಪತ್ರಿಕಾ ಪ್ರಕಟಣೆಯಲ್ಲಿ ಬಳಸಿರುವ ಭೂಗಳ್ಳರು ಎನ್ನುವ ಪದ ನಮ್ಮನ್ನು ಗಾಸಿಗೊಳಿಸಿದರಿಂದ ನಾವುಗಳು ಸೂಕ್ತವಾದ ಕಾನೂನು ಸಲಹೆಯನ್ನು ನೀಡಿ ಹೇಳಿಕೆಯನ್ನು ನೀಡಿದವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇವೆ ಮತ್ತು ಖಂಡಿಸುತ್ತೇವೆ ಸದರಿ ಜಮೀನಿನ ವಿಷಯದ ಕುರಿತು ಪ್ರಕರಣಗಳು ಮಾನ್ಯ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ಅಂತಿಮ ತೀರ್ಪಿಗೆ ನಾವು ಬದ್ಧರಿರುತೇವೆ. ಹಾಗೂ ಮಠದ ಭಕ್ತರಾಗಿ ಸೇವಾದಾರರಾಗಿ ಶ್ರೀಮಠಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದು ಮಾತನಾಡಿದರು.

ಇದೇ ನವಂಬರ್ 4ರಂದು ಗುದ್ನೇಪ್ಪನ ಮಠದಿಂದ ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದವರೆಗೆ ನೀಲಗುಂದದ ಪ್ರಭುಲಿಂಗ ದೇವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಸರ್ಕಾರಕ್ಕೆ ಹಾಗೂ ಆಡಳಿತ ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಲಾಗುತ್ತಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮದ ಗುರು ಹಿರಿಯರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಗುದ್ನೇಪ್ಪನ ಮಠದ ಹಿರಿಯರು ಚನ್ನಬಸಯ್ಯ ದೂಪದ್, ಮಹೇಶ್ವರಿ ಸಾವಳಗಿ ವಕೀಲರು,ವೀರಯ್ಯ ಬ್ಯಾಳಿ, ವೀರಯ್ಯ ದೇವಗಣ ಮಠ, ಸಿದ್ದಿಂಗಯ್ಯ ಬಂಡಿ, ರುದ್ರಯ್ಯ ಸೆಲೂಡಿ ಜಂಗಮ ಸಮಾಜದ ತಾಲೂಕ ಅಧ್ಯಕ್ಷ ಮಹೇಶ ಕಲ್ಮಠ, ರುದ್ರಯ್ಯ ಇನಾಮ್ದಾರ್, ಪಟ್ಟಣ ಪಂಚಾಯಿತಿ ಸದಸ್ಯ ಜಗನ್ನಾಥ ಭೋವಿ, ಶರಣಯ್ಯ ಹುಣಸಿಮರದ, ರುದ್ರಯ್ಯ ವಿರೂಪಣ್ಣನವರ್, ಮಲ್ಲಯ್ಯ ಹಲಸಿನಮರದ್, ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

 

ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *