ಕಾಯಕ ಗ್ರಾಮದ (ದತ್ತು) ಮೂಲಕ ಅಧಿಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಒತ್ತು ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ್ ಬಿರಾದರ್ ಪಾಟೀಲ್
ಕುಕನೂರ* ಕಾಯಕ ಗ್ರಾಮ (ದತ್ತು ಗ್ರಾಮ) ಯೋಜನೆಗೆ ಯರೇಹಂಚಿನಾಳ ಮತ್ತು ಬನ್ನಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಸರ್ ಚಾಲನೆ ನೀಡಿದರು ನಂತರ ಮಾತನಾಡಿದ, ಅವರು ಅಧಿಕಾರಿಗಳು ಗ್ರಾಮವನ್ನು ದತ್ತು ತೆಗೆದುಕೊಂಡು ಅವರ ಮೇಲುಸ್ತುವಾರಿಯಲ್ಲಿ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮವನ್ನಾಗಿ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೋಂದಿಗೆ ಸಮನ್ವಯತೆಯನ್ನು ಸಾಧಿಸಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಯ ಈ ಯೋಜನೆಯ ಉದ್ದೇಶವಾಗಿದೆ.

ಇದರಿಂದಾಗಿ ಗ್ರಾಮ ಪಂಚಾಯಿತಿಯ ಹಂತದಲ್ಲಿ ಅನುಷ್ಠಾನವಾಗುವ ಯೋಜನೆಗಳಾದ *ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಯೋಜನೆ, ಬೀದಿ ದೀಪಗಳ ನಿರ್ವಹಣೆ ಕೂಸಿನ ಮನೆ, ಅರಿವು ಕೇಂದ್ರ ಸಂಪನ್ಮೂಲ ಕ್ರೂಢೀಕರಣ* ಸೇರಿದಂತೆ ಸರ್ಕಾರದ ಹಲವಾರು ಮಹತ್ವಕಾಂಕ್ಷಿ ಯೋಜನೆಗಳನ್ನು ಕಾಲಮಿತಿಯಲ್ಲಿ ಮಾಡಬೇಕು ಎಂದು ಕರೆ ನೀಡಿದರು.
ಅದಕ್ಕಾಗಿ ಗ್ರಾಮ ಪಂಚಾಯಿತಿ ಹಂತದಲ್ಲಿ ತಂಡವನ್ನು, ರಚಿಸಿ ಅದರ ಮೂಲಕ ಯಾವ ಯೋಜನೆ ಯಾವ ಕಾಲದಲ್ಲಿ ಆಗಬೇಕು ಎಂದು ಪರಿಶೀಲನೆ ಮಾಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜ್ಯೋತಿ, ಬನ್ನಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರಾಜ ವೆಂಕಟಾಪೂರ, ಪಿ.ಡಿ. ಓ ರಮೇಶ ತಿಮ್ಮಾರಡ್ಡಿ, ಗ್ರಾಮ ಪಂಚಾಯತಿ ಸದಸ್ಯರು, ತಾ.ಪಂ ವಿಷಯ ನಿರ್ವಾಹಕ ಬಸಲಿಂಗಪ್ಪ ಹಂಚಿನಾಳ, ಪಂಚಾಯತಿಯ ಬಿಲ್ ಕಲೆಕ್ಟರ್ ಕಂಪ್ಯೂಟರ್ ಆಪರೇಟರ್, ಎಮ್.ಬಿ.ಕೆ ಸ್ವ ಸಹಾಯ ಸಂಘದ ಮಹಿಳೆಯರು ಸಿಬ್ಬಂದಿಗಳು ಹಾಜರಿದ್ದರು.

ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು:- ಚನ್ನಯ್ಯ ಹಿರೇಮಠ