ಮಂಗಳೂರಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ
ನಿರ್ಭಯ ದೃಷ್ಟಿ ನ್ಯೂಸ್ :-
ಕುಕನೂರ ತಾಲೂಕಿನ ಮಂಗಳೂರು ಗ್ರಾಮದ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ಕಲ್ ನಲ್ಲಿ ರಾಷ್ಟ್ರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಗ್ರಾಮದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ವಿಶೇಷ ಪೂಜೆ ಸಲ್ಲಿಸಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ ಮಾಡಿದರು.
ವಿಶ್ವನಾಥ ಮರಿಬಸಪ್ಪನವರ ಕೊಪ್ಪಳ ಜಿಲ್ಲಾ ಪಂಚಸೇನಾ ಅಧ್ಯಕ್ಷರು ಮಾತನಾಡಿ ರಾಷ್ಟ್ರಮಾತೆ ಸ್ವಾತಂತ್ರ ಸಂಗ್ರಾಮದ ಬೆಳ್ಳಿಚುಕ್ಕಿ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ 23.10.1778ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತ ಗ್ರಾಮದಲ್ಲಿ ಜನಿಸಿದ ಚನ್ನಮ್ಮನವರು ಬಾಲ್ಯದಲ್ಲೇ ಸಾಹಸ ಪ್ರಿಯೆ, ಕುದುರೆ ಸವಾರಿ, ಕತ್ತಿ ಯಾಟ, ಬಿಲ್ಲು ಬಾಣ ಇವು ಅವರ ದಿನನಿತ್ಯದ ಆಟಗಳು ದೃಢ ಮನೋಬಲ ಮತ್ತು ನ್ಯಾಯ ಬುದ್ಧಿಯಿಂದ ಅವರು ತೊಡಗಿದ ಪ್ರತಿ ಕಾರ್ಯದಲ್ಲು ಶೌರ್ಯ ಪ್ರದರ್ಶಿಸಿದರು ಆ ಸಮಯದಲ್ಲಿ ಮಹಿಳೆಯರು ಅಂಗಳದ ಒಳಗೆ ಸೀಮಿತವಾಗಿದ್ದಾಗ, ಚನ್ನಮ್ಮನವರು ಹೊರಾಂಗಣದಲ್ಲಿ ಧೈರ್ಯ ಪ್ರದರ್ಶನದ ಮಾದರಿಯಾದರು ಎಂದರು.
ಬ್ರಿಟಿಷರ ವಿರುದ್ಧದ ಮೊದಲ ಮಹಿಳಾ ಕ್ರಾಂತಿಯಾಗಿ 1824 ರ ಕಿತ್ತೂರು ಇದ್ದ ಇತಿಹಾಸದಲ್ಲಿ ಚಿರಸ್ಮರಣೀಯ ರಾಣಿ ಚೆನ್ನಮ್ಮನವರ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಸ್ಥಳೀಯ ಯೋಧರು ಅಪಾರ ಶೌರ್ಯ ತೋರಿದರು ಅವರ ಸೇನಾಧಿಪತಿಗಳಾದ ಅಮತೂರು ಬಾಲಪ್ಪ, ಸಂಗೊಳ್ಳಿ ರಾಯಣ್ಣ, ಗುರುಬಸಪ್ಪ ನಾಯಕ,ಸಿದ್ದಪ್ಪನಾಯಕ ಮುಂತಾದವರು ರಾಣಿಯ ಮಾತಿಗೆ ಜೀವ ಕೊಡಲು ಸಿದ್ದರಾದರು ಯುದ್ಧದ ವೇಳೆ ಬ್ರಿಟಿಷ್ ಕಮಾಂಡರ್ ಥಾಕ್ಸನ್ ಹಾಗೂ ಅನೇಕರು ಕೊಲ್ಲಲ್ಪಟ್ಟರು ಕಿತ್ತೂರಿನಲ್ಲಿ “ಚೆನ್ನಮ್ಮ ಜಯಮಂಗಳ!” ಘೋಷಣೆಗಳು ಜೆಂಕರಿಸಿದವು ಎಂದು ಹೇಳಿದರು.
ನಮ್ಮ ಮಂಗಳೂರು ಗ್ರಾಮದಲ್ಲಿ ನಮ್ಮ ಪಂಚಮಸಾಲಿ ಸಮಾಜದ ಎಲ್ಲಾ ಸಮಾಜ ಬಾಂಧವರು ಒಗ್ಗಟ್ಟಾಗಿ ಸೇರಿಕೊಂಡು ಮುಂದಿನ ವರ್ಷದಲ್ಲಿ ಈ ಸರ್ಕಲ್ಲಿನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಕಂಚಿನ ಪುತ್ತಳಿ ನಿರ್ಮಾಣ ಮಾಡಲು ಎಲ್ಲರೂ ತನುಮನ ದನದಿಂದ ಸಹಕಾರ ನೀಡಬೇಕಾಗಿ ಸಮಾಜ ಬಾಂಧವರಲ್ಲಿ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಶೇಖರಗೌಡ್ರ ಪೊಲೀಸಪಾಟೀಲ, ಶರಣಪ್ಪ ಹ್ಯಾಟಿ, ರವೀಂದ್ರನಾಥ ಕೊಟ್ರಪ್ಪ ತೋಟದ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ,ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಎಮ್ಮಿ, ಶೇಖರಗೌಡ್ರ ಮಾಲಿಪಾಟೀಲ, ಮಂಗಳೇಶಪ್ಪ ಬಗನಾಳ, ಸಿದ್ದನಗೌಡ್ರ ಕೀರ್ತಗೌಡ್ರ, ಮೃತ್ಯುಂಜಯ ಪಾಟೀಲ, ಈರಣ್ಣ ಎಮ್ಮಿ,ಬಸಪ್ಪ ಕರಡಿ, ರುದ್ರಗೌಡ್ರ ಪಾಟೀಲ, ಮುದುಕಪ್ಪ ಬ್ಯಾಳಿ ಮೈಲಾರಪ್ಪ ಕಂದಗಲ್, ವಿರೂಪಾಕ್ಷಪ್ಪ ಮಹಾಂತ, ಈರಣ್ಣ ಉಮಚಗಿ, ಶಂಕ್ರಪ್ಪ ಉಳ್ಳಾಗಡ್ಡಿ,ಈರಣ್ಣ ಮರಿಬಸಪ್ಪನವರ,ನಿಂಗನಗೌಡ್ರ ಪೋಲೀಸಪಾಟೀಲ, ಮಂಗಳೇಶ ಯತ್ನಟ್ಟಿ, ಬಸವರಾಜ ತೊದ್ಲರ್, ಗವಿಸಿದ್ದಪ್ಪ ಛಟ್ಟಿ, ಪ್ರಭುಗೌಡ್ರ ಕೀರ್ತಗೌಡ್ರ,ನೀಲನಗೌಡ್ರ ಪೋಲೀಸಪಾಟೀಲ, ಕಲ್ಯಾಣಪ್ಪ ತೊದ್ಲರ್, ಮೈಲಾರಪ್ಪ ಗೊಂಡಬಾಳ, ನಿಂಗರಾಜ ಹಲಗೇರಿ, ಚೆನ್ನಪ್ಪಗೌಡ್ರ ಪೊಲೀಸಪಾಟೀಲ ದೇವರಾಜ ಇಟಗಿ, ಕಳಕೇಶ ಪಟ್ಟಣಶೆಟ್ಟಿ,ಮಂಗಳೇಶ ಉಳ್ಳಾಗಡ್ಡಿ,ಜಗದೀಶ ಉಮಚಗಿ, ಬಸವರಾಜ ಉಮಚಗಿ, ಡಾ. ಪ್ರಸನ್ನ ಅಂಗಡಿ, ನಾಗನಗೌಡ್ರ ದಾನಗೌಡ್ರ, ಶಿವು ಗಟ್ಟೆಪ್ಪ ಉಮಚಗಿ, ಶರಣಪ್ಪ ಬಸಪ್ಪ ಬಂಡ್ರಕಲ್, ವೀರಭದ್ರಪ್ಪ ಚಿನ್ನೂರು, ಪ್ರಶಾಂತ ಲದ್ದಿ, ವಿರೇಶ ವಿರುಪಾಕ್ಷಪ್ಪ ಉಮಚಗಿ, ಗುರುಲಿಂಗಪ್ಪ ಗೊಂಡಬಾಳ, ಗುರುರಾಜ ಇಲಕಲ್, ಮುತ್ತು ತಳವಾರ,ರವಿ ನಿಂಗಪ್ಪ ಆಗೋಲಿ, ಬಸವರಾಜ ನಿಂಗಾಪುರ ಲಕ್ಷಪ್ಪ ದೇಸಾಯಿ ವಿರೂಪಾಕ್ಷಪ್ಪ ಬೇನಳ್ಳಿ, ಮುತ್ತಾಳ, ಸಂಗಪ್ಪ ನರಿಯರ,ಮುತ್ತಣ್ಣ ತೊದ್ಲರ್, ಶರಣಪ್ಪ ತೊದ್ಲರ್, ಎಲ್ಲಾ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಸುದ್ದಿ ಜಾಹಿರಾತಿಗಾಗಿ ಸಂಪರ್ಕಿಸಿ
ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು