ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷರಾಗಿ ಸಿದ್ದಯ್ಯ ಕಳ್ಳಿಮಠ , ಉಪಾಧ್ಯಕ್ಷರಾಗಿ ಭರಮಪ್ಪ ತಳವಾರ ಪದಗ್ರಹಣ.
ಕುಕನೂರು ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ , ಉಪಾಧ್ಯಕ್ಷರ ಪದಗ್ರಹಣ ಸೋಮವಾರದಂದು ನೆರವೇರಿಸಲಾಯಿತು. ಅಧ್ಯಕ್ಷರಾದ ಸಿದ್ದಯ್ಯ ಕಳ್ಳಿಮಠ ಮಾತನಾಡಿ ಸಹಕಾರ ಸಂಘದ ಚುನಾವಣೆಯ ಮತ ಎಣಿಕೆಯಲ್ಲಿ12 ಸ್ಥಾನದಲ್ಲಿ11 ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಒಬ್ಬ ಅಭ್ಯರ್ಥಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.ಕಳೆದ ವರ್ಷ 2024ರ ಡಿಸೆಂಬರ್ 29ರಂದು ಸಹಕಾರ ಸಂಘದ ಚುನಾವಣೆ ಜರುಗಿತ್ತು. ಬರೋಬ್ಬರಿ 9 ತಿಂಗಳ ನಂತರ ಮತ ಎಣಿಕೆ ಮಾಡಲಾಗಿದೆ. ಸದ್ಯ 10 ತಿಂಗಳು ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಖಾಲಿಯಿದ್ದ ಸಂಘಕ್ಕೆ ಅಧ್ಯಕ್ಷ ಸ್ಥಾನಕ್ಕೆ ನಾನು ಸಿದ್ದಯ್ಯ ಕಳ್ಳಿಮಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭರಮಪ್ಪ ತಳವಾರ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದೆವು, ಅವಿರೋಧ ಆಯ್ಕೆ ಆಗಿದ್ದೇವೆ ಸರ್ವಾನು ಮತದಿಂದ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ. ಸದಸ್ಯರುಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ರೈತರಿಗೆ ಅನುಕೂಲವಾಗಬೇಕು ಮತ್ತು ಬೀದಿ ಬದಿಯ ವ್ಯಾಪಾರಸ್ಥರಿಗೆ ಹಾಗೂ ಇನ್ನಿತರ ರೈತರಿಗೆ ಕೃಷಿ ಸಾಲ ಬಡ್ಡಿ ರಹಿತ ಸಾಲ ನೀಡುವ ವ್ಯವಸ್ಥೆಯನ್ನು ಮಾಡುತ್ತೇವೆ.
ರೈತರಿಗೆ ಬೇಕಾದ ಬೀಜ ಗೊಬ್ಬರ ಸಿಗುವ ಹಾಗೆ ಅನುಕೂಲ ಮಾಡಿಕೊಡುವುದು ನಮ್ಮ ಮೊದಲ ಉದ್ದೇಶ. ಪಾರದರ್ಶಕವಾಗಿ ಕೆಲಸವಾಗಬೇಕು, ನಿಮ್ಮೆಲ್ಲರ ಸಹಕಾರ, ಮಾರ್ಗದರ್ಶನ ಅವಶ್ಯಕ. ಸನ್ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರ ಮಾರ್ಗದರ್ಶನದಂತೆ ನೀವುಗಳು ನಮ್ಮ ಮೇಲೆ ನೀಡಿರುವ ಜವಾಬ್ದಾರಿಯನ್ನು ಪಾರದರ್ಶಕವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.
ನಂತರ ನೂತನ ಉಪಾಧ್ಯಕ್ಷರಾದ ಭರಮಪ್ಪ ತಳವಾರ ಮಾತನಾಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಎಲ್ಲಾ ಸದಸ್ಯರುಗಳ ಮತ್ತು ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ, ಹಾಗೂ ಇನ್ನೂ ಅನುಕೂಲಗಳನ್ನು ಕಲ್ಪಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.
ಪಟ್ಟಣದ ವಿವಿಧ ರೈತರು ಹಾಗೂ ಯುವ ಮುಖಂಡರು ಗಣ್ಯರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಕೋರಿದರು.
ಶುಭ ಕೋರಲು ಆಗಮಿಸಿದ ಡಾಕ್ಟರ್ ಜಿ ಜಿ ಅಂಗಡಿ ಮಾತನಾಡಿ ನೂತನ ಅಧ್ಯಕ್ಷರಾಗಿರುವ ಸಿದ್ದಯ್ಯ ಕಳ್ಳಿಮಠ ಅವರು ಉತ್ತಮ ಆಡಳಿತಗಾರರು ,ಚಾಣಾಕ್ಷರು ಸಹಕಾರಿ ಸಂಘದಲ್ಲಿ ರೈತರಿಗೆ ರೈತರ ಪ್ರಗತಿಗೆ ಆದ್ಯತೆ ನೀಡಬೇಕು ಎಂದು ನೂತನ ಅಧ್ಯಕ್ಷರಿಗೂ ಹಾಗೂ ಉಪಾಧ್ಯಕ್ಷರಿಗೂ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ವರ್ಗದವರು, ಸದಸ್ಯರುಗಳು, ಪಟ್ಟಣದ ರೈತರು ಹಾಗೂ ಗಣ್ಯರು ಮುಖಂಡರು ಇತರರು ಇದ್ದರು.
ನಿರ್ಭಯ ದೃಷ್ಟಿ ನ್ಯೂಸ್ ಸ್ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು