ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ :-ಹಾಲಪ್ಪ ಆಚಾರ್
ಕುಕನೂರು ತಾಲೂಕಿನ ಮಸಬಹಂಚಿನಾಳ ಪಕ್ಷದ ಕಾರ್ಯಾಲಯದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಜಯಂತಿಯ ಅಂಗವಾಗಿ ಮಾಜಿ ಸಚಿವರಾದ ಹಾಲಪ್ಪ ಆಚಾರ್ ಅವರು ಕಿತ್ತೂರು ರಾಣಿ ಚನ್ನಮ್ಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ
ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಈ ಎರಡನೇ ಯುದ್ಧದ ಸಮಯದಲ್ಲಿ, ಕಿತ್ತೂರು ಚೆನ್ನಮ್ಮ ತನ್ನ ಉಪನಾಯಕ ಸಂಗೊಳ್ಳಿ ರಾಯಣ್ಣನೊಂದಿಗೆ ಕ್ರೂರವಾಗಿ ಹೋರಾಡಿದಳು. ದುರದೃಷ್ಟವಶಾತ್, ರಾಣಿ ಮತ್ತು ಅವಳ ಪ್ರಮುಖ ಅಧಿಕಾರಿಗಳಿಗೆ ಸೈನ್ಯದಲ್ಲಿನ ದೇಶದ್ರೋಹಿಗಳು ಗನ್ ಪೌಡರ್‌ನಲ್ಲಿ ಹಸುವಿನ ಸಗಣಿ ಬೆರೆಸಿ ಆಯುಧಗಳನ್ನು ನಿಷ್ಪ್ರಯೋಜಕಗೊಳಿಸಿದರು. ರಾಣಿ ಚೆನ್ನಮ್ಮ ಅವರನ್ನು ಸೆರೆಹಿಡಿದು ಬೈಲ್‌ಹೊಂಗಲ ಕೋಟೆಯಲ್ಲಿ ಬಂಧಿಸಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ಫೆಬ್ರವರಿ 2, 1829 ರಂದು 51 ನೇ ವಯಸ್ಸಿನಲ್ಲಿ ಬ್ರಿಟಿಷ್ ಕಸ್ಟಡಿಯಲ್ಲಿ ನಿಧನರಾದರು.ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಿದೆ ಎಂದರು.
ವೀರವನಿತೆ ಕಿತ್ತೂರು ರಾಣಿ ಚೆನ್ನೆಮ್ಮ ರವರ ಫೋಟೋಗೆ ಪುಷ್ಪನಮನ ಸಲ್ಲಿಸಿದ
ಆರ್ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ ಬಸವರಾಜ ರಾಜೂರ ಮಾತನಾಡಿ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ರಾಣಿ ಚೆನ್ನಮ್ಮರ ಧೈರ್ಯ ಇಂದಿನ ವಿಧ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಮಾದರಿಯಾಗಲಿ ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ತೋರಿದ ಧೈರ್ಯವನ್ನು ಇಂದಿನ ಮಹಿಳೆಯರು ತಮಗಿರುವ ಸಮಸ್ಯೆಗಳ ವಿರುದ್ಧ ಹೋರಾಡುವ ಧೈರ್ಯ ಮಾಡಲು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕೆಂದು ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಮಾರುತಿ ಗಾವರಾಳ, ಮಂಜುನಾಥ ನಾಡಗೌಡ್ರ, ಲಕ್ಷ್ಮಣ ಕಾಳಿ, ಕರಬಸಯ್ಯ ಬಿನ್ನಾಳ್, ವಿನಾಯಕ್ ಯಾಳಗಿ, ರಾಮನಗೌಡ, ಕುಕನೂರ ಪ. ಪಂ. ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..

ನಿರ್ಭಯ ದೃಷ್ಟಿ ಸಂಪಾದಕರು
ಚನ್ನಯ್ಯ ಹಿರೇಮಠ ಕುಕನೂರು