
ನಿರ್ಭಯ ದೃಷ್ಟಿ ನ್ಯೂಸ್
ರೈತರ ಕುಂದು ಕೊರತೆಗಳ ಬಗ್ಗೆ ಸದನದಲ್ಲಿ ಯಾವ ಜನಪ್ರತಿನಿಧಿಗಳು ಕೂಡ ಧ್ವನಿ ಎತ್ತುತ್ತಿಲ್ಲ ಎಂ. ಎನ್. ಕುಕುನೂರು.
ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ. ಎನ್. ಕುಕನೂರು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಮಾತನಾಡಿ ರೈತರಿಗೆ ಸಾಕಷ್ಟು ಸಾಲ ಸೋಲವನ ಮಾಡಿ ಉತ್ತಿ ಬಿತ್ತಿ ಬೆಳೆದರೆ ಅಂತಹ ರೈತನಿಗೆ ಬೆಂಬಲ ಬೆಲೆ ಇಲ್ಲ. ಬೆಳೆ ಬಂದಾಗ ರೈತನು ಬೆಳೆದ ಬೆಳೆಗೆ ಒಂದು ಎಕ್ಕರೆಗೆ 40 ರಿಂದ 50,000 ವ್ಯಯವಿದೆ. ರೈತ ಬೆಳೆದ ಬೆಳೆಯನ್ನ ಮಾರುಕಟ್ಟೆಗೆ ಮಾರಲು ಬಂದಾಗ ರೈತನ ಬೆಳೆಗೆ ಕಡಿಮೆ ಬೆಲೆ ನೀಡಿ ಹೊರಗೆ ದಲ್ಲಾಳಿಗಳೇ ಖರೀದಿಸುತ್ತಾರೆ.
ಎಲ್ಲಾ ರೈತರು ಬೆಳೆ ಮಾರಿದ ನಂತರ ಬೆಂಬಲ ಬೆಲೆಯನ್ನ ಎ.ಪಿ.ಎಂ.ಸಿ ಬೆಂಬಲ ಬೆಲೆಯನ್ನು ಘೋಷಣೆ ಮಾಡುತ್ತದೆ.
ರೈತನ ಬೆಳೆಗೆ ದಲ್ಲಾಳಿಗಳು ಲಾಭವನ್ನು ಪಡೆಯಲಿದ್ದಾರೆ ಅತ್ಯಧಿಕ ಲಾಭವನ್ನು ಹೊಂದುತ್ತಾರೆ ರೈತನಿಗೆ ಯಾವ ಲಾಭವೂ ಸಿಗದೇ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ.
ಆದ್ದರಿಂದ ಸರ್ಕಾರವು ಬೆಳೆ ಬರುವ ಮುನ್ನವೇ ಬೆಂಬಲ ಬೆಲೆಯನ್ನ ಘೋಷಣೆ ಮಾಡಿ ರೈತನನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ರೈತರ ಬೇಡಿಕೆಗಳು ಭಾಗದ ರೈತರು ಬೆಳೆದಂತಹ ಮೆಕ್ಕೆ ಜೋಳಕ್ಕೆ ಕನಿಷ್ಠ 3,500/- ರೂಪಾಯಿ ಬೆಂಬಲ ಬೆಲೆಯ ಜೊತೆಗೆ ಖರೀದಿ ಕೇಂದ್ರಗಳನ್ನು ತೆಗೆಯಬೇಕು.ರಾಜ್ಯದಲ್ಲಿ ಬೆಳೆದಂತಹ ಉಳ್ಳಾಗಡ್ಡಿ ಬೆಲೆಯು ಪಾತಾಳಕ್ಕೆ ಬಿದ್ದಿದ್ದು ಮತ್ತು ರಾಜ್ಯದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ ರಾಜ್ಯ ಸರಕಾರ ಪ್ರತಿ ಕೆಜಿಗೆ 25/- ರೂಪಾಯಿ ಬೆಂಬಲ ನಿಗಧಿಮಾಡಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು.ತುಂಗಭದ್ರ ಡ್ಯಾಮ್ ನೀರನ್ನು 2ನೇ ಬೆಳೆಗೆ ಪೂರ್ಣ ಪ್ರಮಾಣದ ನೀರನ್ನು ಒದಗಿಸಬೇಕು ಎಂದು ಒತ್ತಾಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ರೈತರು ಬೆಳೆದಂತಹ ಎಲ್ಲಾ ಬೆಳೆಗಳಿಗೆ ರೂ.1,000/- ರೂಪಾಯಿ ಪ್ರೋತ್ಸಾಹಧನ ನೀಡಬೇಕು.
ಈ ಭಾಗದಲ್ಲಿ ಹೆಚ್ಚಾಗಿ “ಕಡಲೆ” ಬೆಳೆಯುವದರಿಂದ ಇಲ್ಲಿ “ಕಡಲೆ ಹಬ್ ನ್ನು” ಮಾಡಲು ಒತ್ತಾಯ. ಈ ಭಾಗದಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ಎಲ್ಲಾ ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಪರಿಹಾರವನ್ನು ನೀಡುತ್ತಿದೆ ಆಗುತ್ತಿರುವಂತಹ ತಾರ ತಮ್ಯವನ್ನು ಸರಿಪಡಿಸಬೇಕು ಮತ್ತು ಎಲ್ಲರಿಗೂ ಪರಿಹಾರ ಸಿಗುವಹಾಗೆ ಮಾಡಬೇಕು.
ಈ ಭಾಗದಲ್ಲಿ ನಿರುದ್ಯೋಗಿ ಯುವಕ ಯುವತಿಯರು ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು.ಸಾವಯವ ಕೃಷಿಗೆ ಹೆಚ್ಚು ಒತ್ತನ್ನು ಕೊಡಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೂರಕವಾದ ವಾತಾವರಣ ನಿರ್ಮಿಸಿ ಇದರ ಬಗ್ಗೆ ಹೆಚ್ಚಿಗೆ ಪ್ರಚಾರ ಮಾಡಬೇಕು.
ಗ್ರಾಮೀಣ ಭಾಗದ ಪುರುಷ ಮತ್ತು ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವಂತಹ ಮುದ್ರಾ ಯೋಜನೆ, ಪಿ.ಎಂ.ಇ.ಜಿ.ಪಿ, ಎನ್.ಆರ್. ಎಲ್ ಇನ್ನು ಮುಂತಾದ ಸ್ಕಿಮ್‌ಗಳಲ್ಲಿ ಹೆಚ್ಚಿನ ಅನುದಾನವನ್ನು ಬೀಡುಗಡೆ ಮಾಡಬೇಕು. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮಹಿಳಾ ಸಹಾಯಕರನ್ನು ಹೆಚ್ಚಿಸಬೇಕು ಮತ್ತು ಕೃಷಿಯ ಜೊತೆಗೆ ಉಪ ಕಸಬುಗಳನ್ನು ಮಾಡಬೇಕು ಹೆಚ್ಚಿನ ತರಬೇತಿಗಳನ್ನು ನೀಡಿ ಅವರಿಗೆ ಪ್ರೋತ್ಸಾಹ ಧನವನ್ನು ನೀಡಿ. ಯಲಬುರ್ಗಾ ಮತ್ತು ಕುಕನೂರ ತಾಲೂಕಿನ ಎ.ಪಿ.ಎಂ.ಸಿ. ರೈತ ಭವನವನ್ನು ನಿರ್ಮಿಸಬೇಕು.

ಈ ಮೇಲ್ಕಂಡ ವಿಷಯಕ್ಕೆ ಮಾನ್ಯ ತಹಸೀಲ್ದಾರ ಕುಕನೂರ ಮತ್ತು ಯಲಬುರ್ಗಾ, ಜಿಲ್ಲಾ ಅಧಿಕಾರಿಗಳು ಕೊಪ್ಪಳ, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಮುಖ್ಯ ಮಂತ್ರಿ ಆರ್ಥಿಕ ಸಲಹೆಗಾರರು ಬಸವರಾಜ ರಾಯರಡ್ಡಿ, ಕೃಷಿ ಸಚಿವರು, ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಎ.ಪಿ.ಎಂ.ಸಿ ಮತ್ತು ಸಹಕಾರ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗುತ್ತದೆ.
ಈ ಎಲ್ಲ ರೈತರ ಬೇಡಿಕೆಗಳನ್ನು ಈಡೇರಿಸದೆ ಇಲ್ಲದ ಪಕ್ಷದಲ್ಲಿ ಜನಪ್ರತಿನಿಧಿಗಳ ಕಾರ್ಯಕ್ರಮ ಬಹಿಷ್ಕರಿಸಿ ಕಪ್ಪು ಬಟ್ಟೆ ಧರಿಸುವ ಮೂಲಕ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದಂರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಎನ್ ಕುಕನೂರ, ಜಿಲ್ಲಾ ಅಧ್ಯಕ್ಷರಾದ ದೊಡ್ಡ ಭರಮಣ್ಣ, ತಾಲೂಕು ಅಧ್ಯಕ್ಷರಾದ ರಾಜೇಶ ಸಣ್ಣಕ್ಕಿ, ತಾಲೂಕ ಗೌರವ ಅಧ್ಯಕ್ಷರು ದೊಡ್ಡಪ್ಪ ಭಾವಿಕಟ್ಟಿ , ಹನುಮೇಶ್ ಎಸ್ ಎಚ್ ಶಾಖಾಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ದುರ್ಗಪ್ಪ ಬೇವಿನಗಿಡ ತಾಲೂಕ ಕಾರ್ಯಾಧ್ಯಕ್ಷರು, ಶರಣಪ್ಪ ಚೆನ್ನಪ್ಪನಹಳ್ಳಿ, ರುದ್ರೇಶ ಹೊಂಬಾಳ, ರವಿಚಂದ್ರ ರೇವಡಿ, ಇನ್ನೂ ಮುಂತಾದ ಜಿಲ್ಲೆ ಮತ್ತು ತಾಲ್ಲೂಕಿನ ಪದಾಧಿಕಾರಿಗಳು ಇದ್ದರು.
ನಿರ್ಭಯ ದೃಷ್ಟಿ ನ್ಯೂಸ್
ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು
