
ಕುಕನೂರು ತಾಲೂಕಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ಅವಳಿ ತಾಲೂಕುಗಳ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವವನ್ನು ಕುಕನೂರು ಪಟ್ಟಣದಲ್ಲಿ ರವಿವಾರದಂದುವಿಜೃಂಬಣೆಯಿಂದ ನೆರವೇರಿಸಲಾಯಿತು.
ಪಟ್ಟಣದ ಮಹಾಮಾಯಾ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಮತ್ತು ಕುಂಭ ಮೆರವಣಿಗೆ ಸಮಾಜದ ಯುವಕರಿಂದ ಡಿಜಿ ಹಾಡಿಗೆ ನೃತ್ಯ ನಡೆಸಲಾಯಿತು..
ಪಟ್ಟಣದ ಮಗಜಿ ಮಂಗಲ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆರ್ಯಡಿಗ ಸಮಾಜದ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ ಬಿಚ್ಚಾಲೆ ನೆರವೇರಿಸಿದರು ಮಾತನಾಡಿ, ಸಮಾಜದಲ್ಲಿನ ಮೇಲು–ಕೀಳು, ಜಾತಿ–ಮತ, ದ್ವೇಷದ ಗೋಡೆಗಳನ್ನು ಒಡೆದು ಹಾಕಿ ಎಲ್ಲರಲ್ಲಿಯೂ ಭ್ರಾತೃತ್ವ ಮತ್ತು ಸಮಾನತೆಯ ವಿಷಯ ಬಿಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳು ಕೇವಲ ಒಂದು ಸಮುದಾಯಕ್ಕೆ ಗುರುವಲ್ಲ. ಇಡೀ ಲೋಕಕ್ಕೆ ಜ್ಞಾನದ ಗುರು ಇಂತಹ ಗುರುವಿನ ವಾಣಿಯಂತೆ ಅವರ ತತ್ವ ಆದರ್ಶಗಳನ್ನು ಎಲ್ಲರೂ ಮೈಿಸಿಕೊಳ್ಳಬೇಕು.


ಸಮಾಜದ ಮುಖಂಡರಾದ ಹನುಮಂತಪ್ಪ ಹಂಪನಾಳ ಮಾತನಾಡಿ ನಮ್ಮ ಈಡಿಗ ಸಮಾಜವು ಅತ್ಯಂತ ಸಣ್ಣ ಸಮಾಜವಾಗಿದೆ. ಎಲ್ಲರನ್ನು ಪ್ರೀತಿಯಿಂದ ಕಾಣುವ ಸಮಾಜವಾಗಿದೆ ಎಂದು ಹೇಳಿದರು.
ಪಟ್ಟಣದ ಅನ್ನದಾನೀಶ್ವರ ಮಠದ ಮಹದೇವ ಶ್ರೀಗಳು ಎಲ್ಲಾ ಮಠದ ಕಾರ್ಯಕ್ರಮಗಳಲ್ಲಿ ಕರೆದು ಸಹಕಾರ ನೀಡಿ ನನ್ನನ್ನು ಪ್ರತಿ ಹಂತಗಳಲ್ಲಿ ಬೆಳೆಸಿದ್ದಾರೆ. ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ ಅವರು ಈಡಿಗ ಸಮಾಜದವರು ಅವರ ಶ್ರದ್ಧೆ ಮತ್ತು ಪ್ರೀತಿ ಸಮಾಜ ಸೇವೆಯನ್ನು ಗುರುತಿಸಿದ್ದಾರೆ ಫೋಟೋಗಳು ಪೂಜಿಸುವಂತಹ ಜನರು ಇದ್ದಾರೆ ಅದು ಹೆಮ್ಮೆಯ ವಿಷಯವಾಗಿದೆ. ನಾವು ರಾಜಕೀಯವಾಗಿ ಬೆಳೆಯಬೇಕಾದರೆ ಪಟ್ಟಣ ಪಂಚಾಯಿತಿ ಸದಸ್ಯನಾಗಬೇಕಾದರೆ ಹಾಲಪ್ಪ ಆಚಾರ್ ನಮ್ಮ ಸಮಾಜದ ನನ್ನನ್ನು ಗುರುತಿಸಿ ಅದೇ ರೀತಿ ನಮ್ಮ ಸಮಾಜದ ಇತರರನ್ನು ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರು ಬೆಳೆಸುವಲ್ಲಿ ಸಹಕಾರಿಯಾಗಿದೆ. ಇನ್ನು ಈಡಿಗ ಸಮಾಜ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬಲಿಷ್ಠಗೊಳ್ಳಬೇಕಿದೆ ಎಂದು ಹೇಳಿದರು.
ನಂತರ ಗ್ರೇಡ್ ಟು ತಶಿಲ್ದಾರ್ ಮುರಳಿದ ರಾವ್ ಕುಲಕರ್ಣಿ.
ಈ ಸಂದರ್ಭದಲ್ಲಿ
ವೆಂಕಟೇಶ ಈಳಗೇರ ಆರ್ಯ ಈಡಿಗ ಸಮಾಜದ ತಾಲೂಕ ಅಧ್ಯಕ್ಷರು, ಬಸವರಾಜ ಕೊಳಗೇರಿ, ಮಂಜುನಾಥ್ ಈಳಗೇರ್, ಹನುಮಂತ ಗೌಡ ಕೊಳಗೇರಿ, ರಾಜಪ್ಪ ಈಳಗೇರ್, ವೆಂಕಟೇಶ ಬಂಗೇರ, ಭೀಮವ್ವ ಈಳಗೇರಿ, ರಾಧಾ ಈಳಗೇರ, ಸುಜಾತ ಈಳಗೇರ, ಕುಕನೂರು ಯಲಬುರ್ಗಾ ತಾಲೂಕ ಈಳಗೇರ, ಆರ್ಯ ಈಡಿಗ ಸಮಾಜದ ಗುರು ಹಿರಿಯರು ಎಟ್.
ವರದಿ ಚನ್ನಯ್ಯ ಹಿರೇಮಠ ಕುಕನೂರ
