ಕೃಷಿ ಪತ್ತಿನ ಸಹಕಾರಿ ಸಂಘದ ಗಾಳಿ,ಗಂಧ ಗೊತ್ತಿಲ್ಲ ಎಂದವರಿಗೆ ಇಂದು ಇದರ ಗಾಳಿ,ಗಂಧ ತೋರಿಸುವ ಕೆಲಸ ಶಾಸಕರು ಮಾಡಿದ್ದಾರೆ,,! ಸಂಗಮೇಶ್ ಗುತ್ತಿ

ಕುಕನೂರು : ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಜಯ ಸಾಧಿಸಿದ 11 ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಶುಕ್ರವಾರದಂದು ಮಹಾಮಾಯ ದೇವಸ್ಥಾನಕ್ಕೆ ತೆರಳಿ ಶ್ರೀದೇವಿಗೆ ಪೂಜೆ ಸಲ್ಲಿಸಿದರು.

 ನಂತರ ವೀರಭದ್ರಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಿಹಿ ವಿತರಿಸುವ ಮೂಲಕ ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

 ನಂತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಜಯ ಸಾಧಿಸಿದ ಅಭ್ಯರ್ಥಿಗಳಿಗೆ ಗೌರವ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಕುಕುನೂರು ತಾಲೂಕ ಗ್ಯಾರಂಟಿ ಯೋಜನೆ ಅಧ್ಯಕ್ಷ ಸಂಗಮೇಶ್ ಗುತ್ತಿ ಮಾತನಾಡಿ ಕುಕನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಕಳೆದ 2024ರ ಡಿಸೆಂಬರ್ 29 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ, 12 ಜನ ಅಭ್ಯರ್ಥಿಗಳು ಭಾಗವಹಿಸಿದ್ದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರ ಮಾರ್ಗದರ್ಶನದಲ್ಲಿ 11 ಜನ ಜಯಶಾಲಿಗಳಾಗಿದ್ದಾರೆ.

ಬಿಜೆಪಿಗರೂ ಕಾಂಗ್ರೆಸನವರಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಗಾಳಿ, ಗಂಧ ಗೊತ್ತಿಲ್ಲ ಎಂದು ಹೇಳಿದ್ದರು ಇಂದು ಗಾಳಿ ಗಂಧದ ಸುವಾಸನೆ ಗೊತ್ತಾಗುತ್ತಿದೆ ಎಂದು ಸಂಗಮೇಶ ಗುತ್ತಿ ವ್ಯಂಗವಾಡಿದರು.

ನಂತರ ಮುಖಂಡ ಯಂಕಣ್ಣ ಯರಾಶಿ ಮಾತನಾಡಿ ಉತ್ತಮ ಚಾರಿತ್ರ್ಯ ಉಳ್ಳವರು ರಾಜಕೀಯದಲ್ಲಿ ತೊಡಗಿದಾಗ ಮಾತ್ರ ಸಮಾಜದ ಏಳ್ಗೆ ಸಾದ್ಯ ಎಂದರು.

ಭೀಮರಡ್ಡಿ ಶಾಡ್ಲಗೇರಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ನೀಡುವ ಸಾಲ ಸೌಲಭ್ಯಗಳಂತೆಯೇ ನಮ್ಮ ಸಹಕಾರಿ ರಂಗದಲ್ಲಿ ರೈತರಿಗೆ ಸಾಲ ಸೌಲಭ್ಯದ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಮುತುವರ್ಜಿ ವಹೀಸಬೇಕು ಎಂದು ತಿಳಿಸಿದರು.

ಶೇಖರ್ ಗೌಡ ಉಳ್ಳಾಗಡ್ಡಿ ಮಾತನಾಡಿ ಚುನಾವಣೆಯಲ್ಲಿ ಸಹಕಾರಿ ಸಂಘ ಭದ್ರ ಬುನಾದಿ ಇದ್ದಂತೆ. ಚುನಾವಣೆಗಳು ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮವಾಗಿ ಜರುಗುತ್ತವೆ ಎಂಬ ವಿಶ್ವಾಸ ನಮಗಿದೆ. ಸೂಸೈಟಿಯಲ್ಲಿ

ರೈತರಿಗೆ, ಕಿರು ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡುವುದರ ಮೂಲಕ ಸಂಘದ ಶ್ರೇಯಸ್ಸಿಗೆ ಪ್ರತಿಯೊಬ್ಬ ನಿರ್ದೇಶಕರು ಶ್ರಮಿಸಬೇಕು ಎಂದರು.

ಮುಖಂಡ ವಿಷ್ಣು ಚಿಲಗೋಡ ಮಾತನಾಡಿ ಎಷ್ಟೋ ವರ್ಷಗಳ ಕಾಲ ಈ ಸಹಕಾರಿ ಕ್ಷೇತ್ರ ಬೇರೆಯವರ ಕಪಿ ಮುಷ್ಠಿಯಲ್ಲಿತ್ತು. ಆದರೆ ಕಪಿಮುಷ್ಠಿಯಿಂದ ಹೊರಗೆ ಬಂದಿದ್ದು ಇದರಲ್ಲಿ ಪ್ರತಿಯೊಬ್ಬರು ಜಾಗೃತಿಯಿಂದ ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಿ, ಯಾವುದೇ ಪಕ್ಷ ಭೇದವಿಲ್ಲದೇ ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವರಿಗೆ ಸಾಲ ನೀಡಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಆಡಳಿತ ನಡೆಸಬೇಕು ಎಂದು ಕಿವಿ ಮಾತನ್ನು ಹೇಳಿದರು.

ಫಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ ಹಿರಿಯರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರಗೌಡ ಉಳ್ಳಾಗಡ್ಡಿಯವರ ನೇತೃತ್ವದಲ್ಲಿ ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬ ನಿರ್ದೇಶಕರು ಆಡಳಿತ ನಡೆಸಲು ಮುಂದಾಗಬೇಕು ಎಂದರು.

ಸಹಕಾರಿ ರಂಗ ಬಹಳ ಕೆಳ ಮಟ್ಟಕ್ಕೆ ಹೋಗಿರುವುದರ ಕುರಿತು ಶಾಸಕ ರಾಯರಡ್ಡಿಯವರಿಗೆ ತಿಳಿಸಿದಾಗ ಫೆಬ್ರುವರಿ 08ರಂದು ಸಹಕಾರಿ ಜಾಗೃತಿ ಸಮಾವೇಶ ಮಾಡದಿದ್ದರೇ ನಾವ್ಯಾರು ಇಂದು ಇಲ್ಲಿ ಕೂಡಲು ಸಾಧ್ಯವಾಗುತಿರಲಿಲ್ಲಾ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಈ ಸಂಸ್ಥೆ ಇಂದು1.50ಕೋಟಿ ಸಾಲದಲ್ಲಿದೆ. ಇದರ ಕುರಿತು ನಾವು ಮುಂದಿನ ದಿನಗಳಲ್ಲಿ ಕ್ರಮ ಕೈಗೊಂಡು ಸಹಕಾರಿ ಕ್ಷೇತ್ರವನ್ನು ಸಮರ್ಪಕವಾಗಿ ಮುನ್ನೆಡೆಸುವ ಜವಾಬ್ದಾರಿ ನಿಮ್ಮೆಲ್ಲರಾಗಿದ್ದು. ಸಹಕಾರಿ ಸಂಘದಲ್ಲಿ 12ಜನ ನಿರ್ದೇಶಕರ ಜವಾಬ್ದಾರಿ ಇದಾಗಿದ್ದು, ಪ್ರತಿಯೊಬ್ಬ ಸದಸ್ಯರು ಜಾಗೃತಿಯಿಂದ ಕಾರ್ಯ ನಿರ್ವಹಿಸಬೇಕು ಇಲ್ಲವಾದಲ್ಲಿ ಅದಕ್ಕೆ ಸದಸ್ಯರೇ ಹೊಣೆಗಾರರಾಗಿರುತ್ತಾರೆ ಎಂದರು.

ಶಾಸಕರ ಕಾಳಜಿಯಿಂದ ಕೆಎಂಎಫ್ ನಿರ್ದೇಶಕರ ಇಲ್ಲಿಯವರೇ ಆಗಿದ್ದು ಈ ವೇಳೆ ಸ್ಮರಿಸಲೇಬೇಕಿದೆ. ಶಾಸಕ ರಾಯರಡ್ಡಿಯವರಿಗೆ ಸಹಕಾರಿ ಕುರಿತು ಬಹಳ ಕಾಳಜಿ ಇದೆ. ಯಾವಾಗಲೂ ಇದರ ಕುರಿತು ಜವಾಬ್ದಾರಿ ವಹಿಸುತ್ತಿದ್ದಾರೆ. ತಾಲೂಕಿನಲ್ಲಿರುವ 34ಸಂಸ್ಥೆಗಳು ಉತ್ತಮವಾಗಿ ಬೆಳಯಬೇಕು ಎಂದು ಆಶಿಸಿದರು.

ನಂತರ ಸಿದ್ದಯ್ಯ ಕಳ್ಳಿಮಠ, ಕೆರೆಬಸಪ್ಪ ನಿಡಗುಂದಿ ಮಾತನಾಡಿದರು.

ಈ ಸಂದರ್ಭದಲ್ಲಿ ಹನುಮಂತಗೌಡ ಚಂಡೂರ, ವೀರನಗೌಡ ಬಳೂಟಗಿ, ಮಂಜುನಾಥ ಕಡೇಮನಿ, ಅಶೋಕ ತೋಟದ, ರೆಹಮಾನ್ ಸಾಬ ಮಕ್ಕಪ್ಪನವರ್, ರಾಮಣ್ಣ ಬಜೇಂತ್ರಿ, ನಿಂಗಪ್ಪ ಗೊರ್ಲೆಕೊಪ್ಪ, ಮಲಿಯಪ್ಪ ಅಣ್ಣಿಗೇರಿ, ಗಗನ ನೋಟಗಾರ, ಮಂಜು ಯಡಿಯಾಪೂರ,ದಸ್ತಗೀರಸಾಬ ಗೈಬುಸಾಬ ರಾಜೂರ,ಮಹಿಳಾ ನಿರ್ದೇಶಕರು ರತ್ನಮ್ಮ ಸಂಗಪ್ಪ ಗದಗ, ಶಂಶಾದಬೇಗಂ, ಭರಮಪ್ಪ ಬಸಪ್ಪ ತಳವಾರ,ಗುದ್ದೇಪ್ಪ ಸಣ್ಣ ಈರಪ್ಪ,ಶ್ರೀನಿವಾಸರಾವ್‌ ಹನುಮಂತರಾವ್ ದೇಸಾಯಿ,ಸಂಗಪ್ಪ ಕುಂಬಾರ, ಕಾರ್ತಿಕ್ ಜಾದವ್,ರಫಿಸಾಬ ಹಿರೇಹಾಳ,ಸೇರಿದಂತೆ ಇನ್ನಿತರ ಕಾರ್ಯಕರ್ತರು, ಉಪಸ್ಥಿತರಿದ್ದರು.

ಸಂಪಾದಕರು:-ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *