ಆರ್ ಎಸ್ ಎಸ್ ಶತಾಬ್ದಿ ವಿಜಯ ದಶಮಿ ಉತ್ಸವ ನಿಮಿತ್ಯ ಭವ್ಯ ಪಥ ಸಂಚಲನ

ಆರ್. ಎಸ್ .ಎಸ್. ಶತಾಬ್ದಿ ವಿಜಯ ದಶಮಿ ಉತ್ಸವ ನಿಮಿತ್ಯ ಭವ್ಯ ಪಥ ಸಂಚಲನ

ಆರ್ ಎಸ್ ಎಸ್  ಶತಾಬ್ದಿ ವಿಜಯ ದಶಮಿ ಉತ್ಸವ ನಿಮಿತ್ಯ ಭವ್ಯ ಪಥ ಸಂಚಲನ

ಯಲಬುರ್ಗಾ ಪಟ್ಟಣದ ಮೊಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ ರವಿವಾರದಂದು ವಿಜಯ ಧಶಮಿ ವಿಜೇಯೋತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದವರಿಂದ ಪಥಸಂಚಲನ ನಡೆಸಿದರು,

ಶತಮಾನತ್ಸವ ಕಾರ್ಯಕ್ರಮದಲ್ಲಿ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗಶ್ವರ ಶ್ರೀಗಳು
ಭಾರತ ಮಾತೇ ಶ್ರೀ ಭೂವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕುವ ಮೂಲಕ ಗೌರವ ಸಮರ್ಪಿಸಿದರು, ಬಳಿಕ ಪಥಸಂಚಲನಕ್ಕೆ ಚಾಲನೆ ನೀಡಿದರು,

ಸಾರ್ವಜನಿಕರು ದಾರಿ ಉದ್ಧಕ್ಕೂ ಸ್ವಾಗತ ಕೋರಲು ಮನೆಯ ಮುಂದೆ ರಂಗೋಲಿ ಹಾಕಿದ್ದರು,ಮತ್ತು ಮಹಿಳೆಯರು, ಮಕ್ಕಳು ಹೂ ಹಾಕುವದರೊಂದಿಗೆ ಭಾರತ ಮಾತೇಗೆ ಅತ್ಯಂತ ಭಕ್ತಿ ಪೂರ್ವಕ ಗೌರವ ಸಲ್ಲಿಸಿದರು,

ಈ ಪಥ ಸಂಚಲನ ದಲ್ಲಿ ಹಿರಿಯರು,ಯುವಕರು, ಮಕ್ಕಳು ಘನ ವೇಷ ತೋಟ್ಟು ಕೈಯಲ್ಲಿ ದಂಡ ಹಿಡಿದು ವಿರಾಜ ಮಾನರಾಗಿ, ಭಾಗವಹಿಸಿದ್ದರು,
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ 100 ವರ್ಷದ ತುಂಬಿದ ಹಿನ್ನೆಲೆ ವಿಜಯ ದಶಮಿ ಉತ್ಸವ, ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದರು,

ಈ ವೇಳೆ ಹಿಂದೂ ಸೇವಾ ಪ್ರತಿಷ್ಠಾನ ಸಂಚಾಲಕರಾದ ಸುಧಾಕರ್ ಘನ ಅಧ್ಯಕ್ಷತೆ ವಹಿಸಿ, ಅವರು ಸಂಘ ಮೂಲ ಉದ್ದೇಶ ”ದೇಶ ಭಕ್ತಿ” ಕುರಿತು ಮಾತನಾಡಿದರು,

ಮುಖ್ಯ ಅಥಿತಿಗಳಾಗಿ, ನಗರದ ವಕೀಲರಾದ ಸುಭಾಸ ಹೊಂಬಳ ಇವರು ಈ ಕುರಿತು ಮಾತನಾಡಿದರು,

ಮತ್ತು ಮಾಜಿ ಸಚಿವರಾದ ಹಾಲಪ್ಪ ಆಚಾರ ರವರು ಘನ ವಸ್ತ್ರ ಉಡುಪು ಧರಿಸಿ ಭಾಗವಹಿಸಿದ್ದರು, ಅದೆ ಪ್ರಕಾರ ಅನೇಕ ಮುಖಂಡರು, ಘನ ವಸ್ತ್ರ ಉಡುಪು ಧರಿಸಿ ಆಗಮಿಸಿರುವದು ವಿಶೇಷವಾಗಿ ಕಂಡು ಬಂದಿತು,

ಇದೆ ವೇಳೆ ವಿವಿಧ ವೃತ್ತದಲ್ಲಿ ಭಾಲ ಮಕ್ಕಳು ಅಗ್ರ ಘಣ್ಯ ನಾಯಕರಾದ ಸ್ವಾಮಿ ವಿವೇಕಾನಂದ, ವೀರರಾಣಿ ಚನ್ನಮ್ಮ ಹೀಗೆ ಇನ್ನು ಅನೇಕ ನಾಯಕರ ವೇಷ ಭೂಷಣ ಉಡುಗೆ ತೋಟ್ಟು ಸಾರ್ವಜನಿಕರ ಕಣ್ ಮನ ಸೆಳೆದರೂ,

ಈ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಯಲಬುರ್ಗಾ, ಕುಕನೂರ, ಬೆವೂರ್, ಕುಷ್ಟಗಿ ಪೊಲೀಸ್ ಠಾಣೆ ಸಿಪಿಐ, ಪಿಎಸ್ಐ ಗಳು, ಹಾಗು ಸಿಬ್ಬಂದಿಗಳು ಯಾವದೇ ಘಟನೆ ಆಗದಂತೆ ಬಂಧುಬಸ್ತ್ ಮಾಡಲಾಗಿತ್ತು,

ವರಧಿ ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *