ಕುಕನೂರು ಪಟ್ಟಣದ ಶ್ರೀ ಮಹಾಮಾಯ ದೇವಸ್ಥಾನದಲ್ಲಿರುವ ಶ್ರೀ ಗುರು ದತ್ತ ಮಂದಿರದಲ್ಲಿ ಅಕ್ಟೋಬರ್ 8.10.2025 ರಿಂದ 19.10. 2025 ರವರಿಗೆ ಶ್ರೀ ಗುರು ದ್ವಾದಶಿ ಉತ್ಸವ ಮಹಾ ರುದ್ರಾನುಷ್ಟಾನದೊಂದಿಗೆ ನಡೆಯುತ್ತದೆ. ಕಾರಣ ಭಕ್ತಾದಿಗಳು ಭಾಗವಹಿಸಿ ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ಗುರುದತ್ತನ ಕೃಪೆಗೆ ಪಾತ್ರರಾಗಬೇಕು ಎಂದು ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸೇವಾ ಟ್ರಸ್ಟ್ ಕುಕನೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಉತ್ಸವದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು

ಅಕ್ಟೋಬರ್ 8 ರಿಂದ 10ನೇ ತಾರೀಕಿನವರೆಗೆ ಸಂಜೆ 6 ರಿಂದ 8 ರವರೆಗೆ ವಿಶ್ವನಾಥರಾವ ಎಸ್. ಕುಲಕರ್ಣಿ ಗುರುವಿನಹಳ್ಳಿ ಇವರಿಂದ ಗಮಕವಾಚನ 11 .10. 2025 ರಿಂದ 13. 10. 2025 ರವರೆಗೆ ಕೀರ್ತನ ವಿದೂಷಿ ಪ್ರತಿಮಾ ಜಾಗಟಗಾರ್ ಕೋಳೂರು ಇವರಿಂದ ಸಂಜೆ 6 ರಿಂದ 8 ರವರೆಗೆ ಹರಿಕೀರ್ತನೆ,14.10.2025 ಸಂಜೆ 6:00 ಇಂದ 8ರವರೆಗೆ ವೇದಮೂರ್ತಿ ಪಂಡಿತ್ ವಿಶ್ವನಾಥಭಟ್ ಶಿರಸಿ ಇವರಿಂದ ಪ್ರವಚನ,

15.10.2025 ರಿಂದ16.102025 ರವರೆಗೆ ಸಂಜೆ 6 ರಿಂದ 8 ವರೆಗೆ ಗಂಗೇಶ್ವರಾನಂದ ವೇದ ವೇದಾಂಗ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಆಗಮಿಕರು ವಿದ್ವಾನ್ ವಿಷ್ಣು ಎಲ್. ಭಟ್ಟ್. ಅರ್ಚಕರು ಇಡಗುಂಜಿ ಇವರಿಂದ ಉಪನ್ಯಾಸ,

17.10.2025 ಶುಕ್ರವಾರ ಏಕಾದಶಿ ರುದ್ರಸ್ವಾಹಾಕಾರ 1. ಗಂಟೆಗೆ ಪೂರ್ಣಾಹುತಿ ನಂತರ ಫಲಹಾರ ರಾತ್ರಿ 8 ರಿಂದ ಸಂಗೀತ ಕಾರ್ಯಕ್ರಮ ಶ್ರೀಪಾದ ಹೆಗಡೆ ಸೋಮನ ಮನೆ ಇವರಿಂದ ಇವರಿಂದ.

18.10.2025 ಶನಿವಾರ ದ್ವಾದಶಿ ಶ್ರೀ ಗುರುದತ್ತಯಾಗ 1. ಗಂಟೆಗೆ ಪೂರ್ಣಾಹುತಿ ನಂತರ ತೀರ್ಥ ಮಹಾಪ್ರಸಾದ ಸಾಯಂಕಾಲ 7ಕ್ಕೆ ಪ್ರತಿಭಾ ಪುರಸ್ಕೃತರಿಗೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ವರದಿ ವಾಚನ.

19.10.2025 ರವಿವಾರ ತ್ರಯೋದಶಿ ಅಭಿಷೇಕ ಬುತ್ತಿ ಪೂಜೆ, ಗೋಪಾಲಕಾವಲಾ, ಅವಭ್ರತ ಸ್ನಾನ, ತೀರ್ಥ ಮಹಾಪ್ರಸಾದವರಿಗೆ ಕಾರ್ಯಕ್ರಮ ಮುಕ್ತಾಯ.

 

ಶ್ರೀ ಗುರುದತ್ತಾತ್ರೇಯನಿಗೆ ದೇಣಿಗೆ ನೀಡುವವರು

ಎಸ್.ಬಿ.ಅಯ್. ಕುಕನೂರು ಟ್ರಸ್ಟ್ ಖಾತೆ ನಂ.62008266188 IFSC:SBIN 0020222 ಸಲ್ಲಿಸಬಹುದು.

 

ವರದಿ ಚನ್ನಯ್ಯ ಹಿರೇಮಠ ಕುಕನೂರು

 

Leave a Reply

Your email address will not be published. Required fields are marked *