ಎಚ್‌ಐವಿಯ ಹರಡುವಿಕೆ ಮತ್ತು ಮುಂದಿನ ಭವಿಷ್ಯದಲ್ಲಿ ಏಡ್ಸ್ ನಿಯಂತ್ರಿಸುವ ಆಧುನಿಕ ನಾಗರಿಕ ಸಮುದಾಯ ಜಾಗೃತರಾಗಬೇಕು :-ಕಾಳಪ್ಪ ಬಡಿಗೇರ್ ಸಾರ್ವಜನಿಕರಿಗೆ ಕರೆ
ಕುಕನೂರು:-
ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕುಕನೂರು ಪಟ್ಟಣದ ಬಸ್ ನಿಲ್ದಾಣದ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ಅಧಿಕಾರಿ ಡಾ. ರಾಮಕೃಷ್ಣ ರಡ್ಡಿ ವೈದ್ಯಾಧಿಕಾರಿಗಳು, ಇವರ ಸಂಯುಕ್ತ ಆಶ್ರಯದಲ್ಲಿ ಸ್ನೇಹಾ ಮಹಿಳಾ ಸಂಘ ಕೊಪ್ಪಳ, ಜನನಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್ಸ್ ಗವಿಸಿದ್ದೇಶ್ವರ ನರ್ಸಿಂಗ್ ಸೈನ್ಸ್ ಯಲಬುರ್ಗಾ, ಜನಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಸಾವಿರಾರು ನಾಗರಿಕರು ಸೇರುವ ಪ್ರಮುಖ ಸ್ಥಳವಾದ ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾಯಿತು.
ಕಾಳಪ್ಪ ಬಡಿಗೇರ್ ಐಸಿಟಿಸಿ ಕೌನ್ಸಲರ್ ಯಲಬುರ್ಗಾ
ಕಾರ್ಯಕ್ರಮವನ್ನು ನೀಡಿ ಮಾತನಾಡಿ, ಎಚ್‌ಐವಿಯ ಹರಡುವಿಕೆ ಮತ್ತು ಮುಂದಿನ ಭವಿಷ್ಯದಲ್ಲಿ ಏಡ್ಸ್ ನಿಯಂತ್ರಿಸುವ ನಾಗರಿಕ ಸಮುದಾಯ ಜಾಗೃತರಾಗಬೇಕು ಎಂದು ಹೇಳಿದರು.
ಜನಜಾಗೃತಿ ಆಂದೋಲನ ಕಾರ್ಯಕ್ರಮವು ನಾಗರಿಕರಿಗೆ ಉಪಯುಕ್ತವಾದದ್ದು ಹಾಗೂ ಸಂತೆಗೆ ಬಂದಂತಹ ಪ್ರತಿಯೊಬ್ಬ ನಾಗರಿಕನೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಉಚಿತವಾಗಿ ಎಚ್‌ಐವಿ ಸೋಂಕಿತ ಪರೀಕ್ಷೆ ಹಾಗೂ ಮಾಹಿತಿ, ಕರಪತ್ರಗಳನ್ನು ಮನೆಗೆ ಕೊಂಡೊಯ್ದು ಪ್ರತಿ ಕುಟುಂಬದ ಸದಸ್ಯನೂ ಎಚ್‌ಐವಿ ಬಗ್ಗೆ ಜಾಗೃತರಾಗಬೇಕು, ಸುಶಿಕ್ಷಿತರಾಗಬೇಕು ಎಂದರು. ಹಾಗೂ ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಅತ್ಯಂತ ಜಿಲ್ಲೆಯಾದ್ಯಂತ ಕಾರ್ಯಕ್ರಮವನ್ನು ಜನರಿಗೆ ತಲುಪಿಸುತ್ತಿದೆ ಶ್ಲಾಘೀಸಿದರು.
ಎಚ್‌ಐವಿ ಸೋಂಕಿನ ತಪಾಸಣೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಗುರುತಿಸಲಾದ ಸೇವಾ ಕೇಂದ್ರಗಳು, ಐಸಿಟಿಸಿ ಕೇಂದ್ರಗಳಿಗೆ ಉಚಿತ ಗೌಪ್ಯತೆ ಕಾಪಾಡುವ ಮೂಲಕ ಚಿಕಿತ್ಸೆ ಹಾಗೂ ಎಚ್‌ಐವಿ ಸೋಂಕಿತರಿಗೆ ಸೌಲಭ್ಯಗಳು ಆಯ್ದ ಎಆರ್‌ಟಿ ಕೇಂದ್ರಗಳಲ್ಲಿ ಉಚಿತ ಸೌಲಭ್ಯ ದೊರೆಯುತ್ತದೆ ಬಗ್ಗೆ ಮಾಹಿತಿ ನೀಡಲಾಗಿದೆ.
ಶ್ರೀ ಗವಿಸಿದ್ದೇಶ್ವರ ಇನ್ ಸ್ವಿಟ್ಯೂಟ್ ಆಪ್ ನರ್ಸಿಂಗ್ ಸೈನ್ಸ್ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳಿಂದ ಏಡ್ಸ್ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.
ಲೋಕೇಶ್ ಲಮಾಣಿ ಶಿಕ್ಷಕರು ಮಾತನಾಡಿ ಏಡ್ಸ್ (HIV/AIDS) ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಸ್ವಯಂಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಇದರ ಮುಖ್ಯ ಉದ್ದೇಶಗಳು ಎಚ್‌ಐವಿ/ಏಡ್ಸ್ ಬಗ್ಗೆ ಜನರಲ್ಲಿ ನಿಖರವಾದ ಮಾಹಿತಿಯನ್ನು ನೀಡುವುದು, ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಹೋಗಲಾಡಿಸುವುದು, ತಾರತಮ್ಯವನ್ನು ಕಡಿಮೆ ಮಾಡುವುದು ಮತ್ತು ಎಚ್‌ಐವಿ ಪರೀಕ್ಷೆಗೆ ಪ್ರೋತ್ಸಾಹಿಸುವುದು. ಈ ಕಾರ್ಯಕ್ರಮಗಳು ಸಾಮಾನ್ಯವಾಗಿ ಸಮುದಾಯ ಆಧಾರಿತ ಅಭಿಯಾನಗಳು, ಸಾಮಾಜಿಕ ಮಾಧ್ಯಮ ಪ್ರಚಾರಗಳು, ಶಾಲಾ ಶಿಕ್ಷಣ ಕಾರ್ಯಕ್ರಮಗಳು, ಮತ್ತು ಉಚಿತ ಎಚ್‌ಐವಿ ಪರೀಕ್ಷಾ ಶಿಬಿರಗಳನ್ನು ಒಳಗೊಂಡಿದೆ. ಆದ್ದರಿಂದ ಎಲ್ಲರೂ ಸುರಕ್ಷಿತವಾಗಿರಲು ಇಂತಹ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಲಿವೆ.
ಈ ಸಂದರ್ಭದಲ್ಲಿ
ದೇವಪ್ಪ ಹಳ್ಳಪ್ಪನವರ್ ಸ್ನೇಹಾ ಮಹಿಳಾ ಸಂಘಗಳ ವ್ಯವಸ್ಥಾಪಕರು,
ಕವಿತಾ ಶಹಪೂರ್ ಐಸಿಟಿಸಿ ಕೌನ್ಸಲರ್, ಕಾಳಪ್ಪ ಎನ್ ಕುಂಬಾರ್ ಹಿರಿಯರು ಆರೋಗ್ಯ ಸಹಾಯಕರು, ಲಕ್ಷ್ಮಣ್ ಡೊಳ್ಳಿನ ಓ ಡಬ್ಲ್ಯೂ ಕೊಪ್ಪಳ, ಮಂಜುನಾಥ್ ಆಪ್ತ ಸಮಾಲೋಚಕರು ಕೊಪ್ಪಳ, ಚಂದ್ರಪ್ಪ ಲ್ಯಾಬ್ಟೆಕ್ನಿಷಿಯನ್ ಯಲಬುರ್ಗಾ, ಕೆಲವು.          
                       ಸಂಪಾದಕರು:- ಚನ್ನಯ್ಯ ಹಿರೇಮಠ ಕುಕನೂರು

 

 

Leave a Reply

Your email address will not be published. Required fields are marked *