ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡು ವಂತೆ ಕರೆ:-ಡಾ. ಪಕೀರಪ್ಪ ವಜ್ರಬಂಡಿ ಸಾಹಿತಿಗಳು ಮತ್ತು ನಿವೃತ್ತ ಪ್ರಾಚಾರ್ಯರು
ಕುಕನೂರು: ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ಡಾ. ಪಕೀರಪ್ಪ ವಜ್ರಬಂಡಿ ಸಾಹಿತಿಗಳು ಮತ್ತು ನಿವೃತ್ತ ಪ್ರಾಚಾರ್ಯರು ಹೇಳಿದರು.
ಅವರು ತಾಲೂಕ ಆಡಳಿತ/ತಾಲೂಕಾ ಪಂಚಾಯತ್/
ಪಟ್ಟಣ ಪಂಚಾಯತ್ ಕುಕನೂರು ಹಾಗೂ ಸಮಾಜ ಕಲ್ಯಾಣ ಇಲಾಖೆ ಯಲಬುರ್ಗಾ ಇವರ ಸಂಯುಕ್ತ ಆಶಯದಲ್ಲಿ ಅಕ್ಟೋಬರ್ 7 ಮಂಗಳವಾರ ಕೋಳಿಪೇಟೆಯ ಮಿನಿ ಬಸ್ ನಿಲ್ದಾಣದ ಹತ್ತಿರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ
ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ; ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ.
ವಾಲ್ಮೀಕಿಯವರ ಜೀವನವೇ ಒಂದು ದಾರಿ ದೀಪವಾಗಿದೆ, ಮಹಾನ್ ಗ್ರಂಥ ನೀಡಿದ ಮಹರ್ಷಿ ವಾಲ್ಮೀಕಿಯವರ ಕೊಡುಗೆ ಅಪಾರವಾಗಿದೆ. ಅವರ ಜೀವನವೇ ಎಲ್ಲರಿಗೂ ಮಾರ್ಗದರ್ಶನ ಮತ್ತು, ಎಲ್ಲರೂ ಅದನ್ನು ಪಾಲಿಸುವಂತೆ ತಿಳಿದರು.
ಮುರಳಿಧರ್ ಕುಲಕರ್ಣಿ ಗ್ರೇಡ್ ಟು ತಹಶೀಲದಾರರು ಜ್ಯೋತಿಯನ್ನು ಉದ್ಘಾಟಿಸಿ ಮಾತನಾಡಿ ವಾಲ್ಮೀಕಿಯ ಜೀವನದ ಕುರಿತು ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ಒಬ್ಬ ಬೇಡನಾಗಿದ್ದನು ಮುಂದೆ ರತ್ನಾಕರ. ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಿದರು.ವಾಲ್ಮೀಕಿಯವರು ಪರಮಾತ್ಮನನ್ನು (ಶ್ರೀ ರಾಮನನ್ನು) ಕುರಿತು ಬಹಳ ವರ್ಷಗಳ ಕಾಲ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದ ಹೆಸರು ‘ವಾಲ್ಮೀಕಿ’ ಎಂದು ಬಂದಿದೆ.
ಭೀಮಣ್ಣ ಹವಳೇ ಮಾತನಾಡಿ
ಮಕ್ಕಳಲ್ಲಿ ಒಳ್ಳೆಯ ಭಾವನೆ ಬಿಟ್ಟು, ಸಮಾಜದಲ್ಲಿ ಗುರು ಹಿರಿಯರ ಗೌರವದಿಂದ ಕಾಣುವ ಗುಣ ಬೆಳಸಬೇಕಿದೆ, ಜೊತೆಗೆ ನಮ್ಮ ಪುರಾಣ, ಗ್ರಂಥಗಳ ಬಗ್ಗೆ ತಿಳಿಸುವದರ ಜೊತೆಗೆ ಅದರಲ್ಲಿನ ಸತ್ವವನ್ನು ಮನದಟ್ಟು ಮಾಡಿಕೊಡಬೇಕೆಂದರು.
ಮಹರ್ಷಿ ವಾಲ್ಮೀಕಿ ತಾಲೂಕ ಅಧ್ಯಕ್ಷ ಬಸನಗೌಡ ಪಾಟೀಲ್ ವಟಪರವಿ ಕಾರ್ಯಕ್ರಮವನ್ನು ಉದ್ದೇಶಿಸಿ.
ಶಶಿಧರ ಸಕ್ರಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಯಲಬುರ್ಗಾ ರವರು ಪ್ರಾಸ್ತಾವಿಕ ನುಡಿಗಳ ನಾಡಿ ಇಲಾಖೆಯ ವತಿಯಿಂದ ದೊರೆಯುವ ಸೌಲಭ್ಯಗಳು ಬಗ್ಗೆ ಸೇರಿಸಲಾಗಿದೆ.
ಕಾರ್ಯಕ್ರಮದ ನಿರೂಪಣೆಯನ್ನು, ವಂದನಾರ್ಪಣೆಯನ್ನು ಶರಣಪ್ಪ ವೀರಾಪೂರ ಶಿಕ್ಷಕರು ನೆರವೇರಿಸಿದರು.
ಮಾರುತಿ ಜೀವಣ್ಣವರ್ ಸ್ವಾಗತಿಸಿದರು.
ಬೆಳಗ್ಗೆ ಕುಕುನೂರು ಪಟ್ಟಣದ ರೈಲು ನಿಲ್ದಾಣದ ಹತ್ತಿರದಿಂದ ಬೇಡರ ಕಣ್ಣಪ್ಪ ವೃತ್ತದಿಂದ ಶಿರೂರು ವೀರಭದ್ರಪ್ಪ ವೃತ್ತದ ಮುಖಾಂತರ ಕೋಳಿ ಬೇಟಿಯ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದವರೆಗೆ
ಕುಂಭ ವಾದ್ಯ ಮೇಳದೊಂದಿಗೆ
ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರ ಮೆರವಣಿಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ
ಅಜಯ್ ಕುಮಾರ್, ನಾಗರಾಜ್ ಜೆಸ್ಕಾಂ ಇಲಾಖೆ, ಪೀರ್ ಸಾಬ್ ದಪೇದರ್ ಸಿ ಆರ್ ಪಿ ಶಿಕ್ಷಣ ಇಲಾಖೆ,
ರಾಮಣ್ಣ ಯಡ್ಡೋಣಿ ನಗರ ಘಟಕ ಅಧ್ಯಕ್ಷರು, ಬಿನ್ನಾಳ್ ತಾಲೂಕ ಪ್ರಕಾಶ್ ಉಪಾಧ್ಯಕ್ಷರು, ಸಮಾಜದ ಹಿರಿಯರಾದ ರಾಮಣ್ಣ ಮುಂದಲಮನಿ, ಸಂಜೀವಪ್ಪ ತಳವಾರ್ ಇಟಗಿ, ಬರಮಪ್ಪ ತಳವಾರ್, ಶಂಕ್ರಪ್ಪ ಬನ್ನಿಕೊಪ್ಪ, ಯಲ್ಲಪ್ಪ ಮುಂದಲಮನಿ,
ಸಿದ್ದು ವಾಲ್ಮೀಕಿ, ಸುಭಾಷ್ ಪೂಜಾರ್, ಶ್ರೀಕಾಂತ್ ಬಿಳಗಿ, ಹನುಮಪ್ಪ ಮರಡಿ, ಶರಣಪ್ಪ ರಾಟಿಮನಿ, ನನ್ನಿಪ್ಪ ತಳವಾರ್, ರಾಮಪ್ಪ ಹಿರೇಮನಿ, ಶಿವಕುಮಾರ್, ಇತರರು.         
                  *ಸುದ್ದಿ ಜಾಹಿರಾತಿಗಾಗಿ ಸಂಪರ್ಕ
ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು 9164386713*

ಒಪ್ಲಸ್_1026 

 

 

 

Leave a Reply

Your email address will not be published. Required fields are marked *