ಕೊಪ್ಪಳ ಜನತೆಯ ಪರವಾಗಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ರಕ್ಷಣಾ ವೇದಿಕೆ ಕೊಪ್ಪಳದ ನಿಯೋಗದಲ್ಲಿ ಮಹಾಂತೇಶ ಕೊಟ್ಬಾಳ,ಡಿ.ಎಚ್ಚ.ಪೂಜಾರ, ಕೆ.ಬಿ.ಗೋನಾಳ,ಶರಣು ಗಡ್ಡಿ, ಕರೀಮ್ ಪಾಷಾ,ಅಲ್ಲಮಪ್ರಭು ಬೆಟ್ಟದೂರು ಮನವಿ ನೀಡಿ
ಗಿಣಿಗೇರಿ,ಅಲ್ಲನಗರ,ಬಗಬನಾಳ ಮುಂತಾದ ಬಾಧಿತ ಪ್ರದೇಶಕ್ಕೆ ಮುಖ್ಯ ಮಂತ್ರಿಗಳು ಭೇಟಿ ಕೊಡಬೇಕು.ಕೊಪ್ಪಳಕ್ಕೆ ಸಮೀಪವಿರುವ ಎಂ.ಎಸ್. ಪಿ.ಎಲ್ ಹೊಗೆ,ಬೂದಿಯಿಂದ ಕೊಪ್ಪಳದ ೪೦ ಭಾಗ ಬಾಧಿತವಾಗಿದೆ.ಹೀಗಾಗಿ ಕಾರ್ಖಾನೆ ಬಂದ್ ಮಾಡಬೇಕು.ಯಾವುದೇ ಕಾರ್ಖಾನೆ ವಿಸ್ತರಣೆ ನಿಲ್ಲಿಸಬೇಕು.ಬಸಾಪುರ ಕೆರೆ ಜನ,ಜಾನುವಾರುಗಳಿಗೆ ಮುಕ್ತಗೊಳಿಸಬೇಕು.ಬಾಧಿತ ೨೦ ಗ್ರಾಮಗಳಿಗೆ ಮುಖ್ಯಮಂತ್ರಿ
ಆರೋಗ್ಯ ಸಚಿವರು,ಜಿಲ್ಲಾ ಉಸ್ತುವಾರಿ ಮಂತ್ರಿಗಳು,ಉದ್ಯಮ ಮಂತ್ರಿಗಳು ಭೇಟಿ ಕೊಡಬೇಕು ಎಂದು ಹೇಳಿ ಮನವಿಕೊಡಲಾಯ್ತು.