*ಪಾಲಕರು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಗಮನಹರಿಸಬೇಕು : ಲಕ್ಷ್ಮಣ ಕಾಳಿ*

* Breaking news:-ನಿರ್ಭಯ ದೃಷ್ಟಿ ನ್ಯೂಸ್****

ಕುಕನೂರ : ಶನಿವಾರದಂದು ಪಟ್ಟಣದ ಅಂಬೇಡ್ಕ‌ರ್ ನಗರದ ಕಿರಿಯ ಪ್ರಾಥಮಿಕ ಶಾಲೆಯ ಪಾಲಕರ ಸಭೆ ಜರುಗಿತು.ಸಭೆಯ ಅಧ್ಯಕ್ಷತೆಯನ್ನು SDMC- ಅಧ್ಯಕ್ಷ ಲಕ್ಷಣ ಕಾಳಿ ವಹಿಸಿದ್ದರು. – ಸಭೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಅವಧೂತ ಆಶ್ರೀತ ಅವರ ಪ್ರಸ್ತಾವಿಕ ನುಡಿಗಳನ್ನು ನುಡಿದರು.

ಮಹೇಶ ಅಸೂಟಿ ಸಹ ಶಿಕ್ಷಕರು – ಪೋಷಕರ ಸಭೆಯ ಉದ್ದೇಶಗಳಾದ – ಮನೆಯಲ್ಲಿ ಕಲಿಕಾ ವಾತಾವರಣ, ಕಲಿಕಾ ಪರಿಸರ ನಿರ್ಮಾಣ ಮಾಡಿದ ಪೋಷಕರಿಗೆ ಪ್ರಶಂಸೆ, ಮಕ್ಕಳಲ್ಲಿ ಕಲಿಕಾ – ಪ್ರಗತಿ ಅನಾವರಣ ಹಾಗೂ ಸಾಮಾಜಿಕ ಮೌಲ್ಯಗಳು ಕುರಿತು ತಿಳಿಸಿದರು.

ನಂತರ.SDMC ಅಧ್ಯಕ್ಷ ಲಕ್ಷಣ ಕಾಳಿ ಮಾತನಾಡಿ ಇದು ಪಾಲಕರ – ಎರಡನೇ ಸಭೆಯಾಗಿದ್ದು ಪಾಲಕರು – ಪ್ರತಿದಿನ ತಮ್ಮ ಮನೆಯಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಗಮನಹರಿಸಬೇಕು.

ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಶಿಕ್ಷಕರಿಗೆ ಪ್ರೇರಣೆ ನೀಡಿದರು.

ಸಭೆಯ ಮಹತ್ವದ ಬಗ್ಗೆ ತಿಳಿಸುತ್ತಾ 2026 -27 ನೇ ಸಾಲಿನ ದಾಖಲಾತಿ ಹೆಚ್ಚಳ ಮಾಡುವಂತೆ ಪಾಲಕರಿಗೆ ಮನ ವರಿಕೆ ಮಾಡಿದರು. ಅದೇ ರೀತಿ ಮುಂ ದಿನ ಮುರಾರ್ಜಿ ಶಾಲಾ ಪರೀಕ್ಷೆಯಲ್ಲಿ ನಮ್ಮ ಶಾಲೆ ಮಕ್ಕಳು ಹೆಚ್ಚು ಆಯ್ಕೆಯಾ ಗುವಂತೆ ಶಿಕ್ಷಕರು ಶ್ರಮಿಸುವಂತೆ

ತಿಳಿಸಿದರು . ಸಭೆಯಲ್ಲಿ ಪಾಲಕರು ಹಾಗೂ SDMC ಸದಸ್ಯರಾದ ದೇವಪ್ಪ ಆರಬೆರಳಿನ, ಲಕ್ಷ್ಮಿ ಭಜಂತ್ರಿ, ಹೇಮಾ ಭಜಂತ್ರಿ, ಅರವಿ ಂದ್ ಛಲವಾದಿ, ಭಾರತಿ ಗುರ್ಲೆಕೊಪ್ಪ ಹಾಗೂ ಇನ್ನೂಳಿದ ಹಿರಿಯ ಸರ್ವ ಸದಸ್ಯರು. ಶಿಕ್ಷಕರಾದ ಮಹೇಶ ಅಸೂಟಿ, ರತ್ನವ್ವ ಮಾಲೀಗೌಡ್ರ, ಶೈಲಜಾ ಕುಲಕರ್ಣಿ ಮತ್ತು ಹಿರಿಯ ಪಾಲಕರು ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *