*ಭಾರತವನ್ನು ಶ್ರೀ ಮಂತ, ಸಮೃದ್ದ ರಾಷ್ಟ್ರ ಮಾಡಲು ಯುವ ಸಮೂಹ ಮುಂದಾಗಬೇಕು : ಅರುಣ ಕುಮಾರ. ಜಿ.*

ಕುಕನೂರು : ದೇಶದ ಪ್ರತಿಯೊಬ್ಬ ಯುವಕ, ಯುವತಿ, ಮಹಿಳೆಯರು, ಮಕ್ಕಳು, ಭಾರತ ಶ್ರೀಮಂತ, ಸಮೃದ್ದ ಮಾಡುವುದು ಹೇಗೆ ಎಂಬ ಯೋಚನೆ ಮಾಡಬೇಕಿದೆ. ಕೇವಲ ನೌಕರಿ ಹುಡುಕಿಕೊಂಡು ಹೋಗುವದರಿಂದ ಸಮೃದ್ದವಾಗುವುದಿಲ್ಲ, ನಾನು ಸಹ 10ಜನರಿಗೆ ಕೆಲಸ ಕೊಡುತ್ತೇನೆ ಎಂಬ ಯೋಚನೆ ಮಾಡಬೇಕು, ಅಂತ ಶಕ್ತಿ ಸಾಮರ್ಥ್ಯ, ಬುದ್ದಿವಂತಿಕೆ, ಉದ್ಯಮಶೀಲತೆ ನಮ್ಮೆಲ್ಲರಲ್ಲಿದೆ. ಅದನ್ನು ಉಳಿಸುವ ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಆರ್ ಎಸ್ ಎಸ್ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ಅರುಣ ಕುಮಾರ ಜಿ ಅವರು ಕರೆ ಮಾಡಿದರು.
ಅವರ ಹಿಂದು ಸಮ್ಮೇಳನ ಸಮಿತಿ ಇಟಗಿ ಮಂಡಲದ ವತಿಯಿಂದ ರವಿವಾರದಂದು ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ.
ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತ , ಶೇ. 65ರಷ್ಟು ಯುವಕರನ್ನು ಹೊಂದಿದ ದೇಶ 150ಕೋಟಿ ಭಾರತೀಯರಲ್ಲಿ ಸುಮಾರು 75 ರಿಂದ 80 ಕೋಟಿ ಯುವ ಸಮುದಾಯವಿದೆ. ಇಂತಹ ಒಂದು ಬಂಡವಾಳ ಇಂತಹ ಒಂದು ಶ್ರೇಷ್ಠ ಶಕ್ತಿ ಜಗತ್ತಿನ ಯಾವ ದೇಶಕ್ಕಿಲ್ಲಾ, ಇದು ಕೇವಲ 2050ರ ಒಳಗೆ ಮಾತ್ರ ಇರುತ್ತೆ, 2050ರ ನಂತರ ನಮ್ಮ ದೇಶವು ಸಹಿತ ಅಮೇರಿಕಾ, ಜಪಾನ್, ರಷ್ಯಾದಂತೆ ವಯಸ್ಸಾಗಿರುವ ದೇಶಗಳಿಗೆ ನಮ್ಮ ಭಾರತವು ಹೋಗಿಬಿಡುತ್ತದೆ.
ವಿಶ್ವದ ವಿದೇಶಿ ಕಂಪನಿಗಳಲ್ಲಿ ಹೆಚ್ಚು ಸಿಇಒಗಳಿರುವುದು ಭಾರತೀಯರು, ನಮ್ಮಲ್ಲಿ ಶಕ್ತಿ ಇದೆ ಅದಕ್ಕಾಗಿ ಉಳಿದಿರುವ 24 ವರ್ಷಗಳಲ್ಲಿ ಭಾರತವನ್ನು ಹೊಂದಿದೆ ಭವ್ಯ ಭಾರತ, ಶ್ರೇಷ್ಠ ಭಾರತನ್ನಾಗಿ ಪರಂವೈಭವದ ಭಾರತವನ್ನಾಗಿ ಮಾಡಬೇಕು. ಅಂತಹ ಕಾಲ ಖಂಡದಲ್ಲಿ, ಸುವರ್ಣ ಯುಗದಲ್ಲಿ ಹುಟ್ಟಿದ ನಾವು ಪುಣ್ಯವಂತರಾಗಿದ್ದರೆ, ನಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಬೇಕಿದ್ದು ಆ ಯೋಚನೆಯ ಬಗ್ಗೆ ಮಾಡಬೇಕು. ಒಬ್ಬರಿಗಾಗಿ ಮತ್ತೊಬ್ಬರು ಬದುಕೋಣ ಬಾಳೋಣ ಎಂದು ಹೇಳಿದರು.
ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಕುಕನೂರು ಮಠದ ಅನ್ನದಾನೀಶ್ವರ ಮಹಾದೇವ ಸ್ವಾಮಿಗಳು ಮಾತನಾಡಿ ಹಿಂದು ಎಂದರೇ ಯಾರ ಭಾವನೆ ಸ್ಮರಣಿಕೆ ಮಾಡುತ್ತಾರೋ ಅವರು ಹಿಂದು, ಯಾರ ಹಿಂಸೆಯನ್ನು ಧೂಷಣೆ ಮಾಡುತ್ತಾರೆ ಅವರೆಲ್ಲಾ ಹಿಂದುಗಳು.ನಮ್ಮ ಮನೆ ಹೊಸ್ತಿಲ ಒಳಗೆ ನಮ್ಮ ಜಾತಿ ಇರಲಿ ಜಗತ್ತಿಗೆ ನಾವೆಲ್ಲಾ ಹಿಂದುಗಳು ಎಂದು ಹೇಳಿದರು.
ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ, ಕೃಷ್ಣ, ರಾಮ, ಹನುಮ ಜನಿಸಿದ ನಾಡು ಈ ಭರತ, ಈ ಭೂಮಿ ಹಿಂದು ಧರ್ಮದಿಂದ ಸ್ಥಾಪಿತವಾದ ಭೂಮಿಯಾಗಿದೆ ಎಂದ.
ನಮ್ಮ ಭಾರತ ದೇಶ ಉತ್ತಮವಾಗಿರಬೇಕಾದರೇ ನಾಡಿನ ಜನ ಸಂಸ್ಕಾರವಂತರಾಗಬೇಕು ಅಂದಾಗ ಮಾತ್ರ ದೇಶ, ನಾಡು
ದೇಶದ ಬಗ್ಗೆ ಹಿಂದು ಧರ್ಮದ ಬಗ್ಗೆ, ಹಿಂದು ದೇವತೆಗಳ ಬಗ್ಗೆ ಯಾರಾದರೂ ವಿರೋಧಿಸಿದರೆ ಹಿಂದು ಧರ್ಮ ಜಾಗೃತರಾಗಬೇಕು, ಮಕ್ಕಳನ್ನು ಹಾಗೂ ಮಹಿಳೆಯರನ್ನು ದೇವರೆಂದು ಪೂಜಿಸುವ ಧರ್ಮ ಯಾವುದಾದರು ಇದ್ದರೇ ಅದು ಹಿಂದು ಧರ್ಮ ಎಂದರು. ಇಲ್ಲಿ ನಾವೆಲ್ಲರೂ ಹಿಂದು ನಾವೆಲ್ಲಾ ಒಂದು ವೇದೋಕ್ತಿಯೊಂದಿಗೆ ಬದುಕಬೇಕು ಎಂದು ಜನತೆಗೆ ಕರೆ ಮಾಡಿ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಿ ಹುಲಿಗೆಮ್ಮ ಹುರಕಣ್ಣವರ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಸವರಾಜ ಎಂ ಹಳ್ಳಿ, ನವೀನ್ ಕುಮಾರ ಗುಳಗಣ್ಣವರ್, ಬಸಲಿಂಗಪ್ಪ ಭೂತೆ, ಅಂದಪ್ಪ ಹುರಳಿ, ಮುತ್ತಯ್ಯ ಕಳ್ಳಿಮಠ, ಅಂದಾನಪ್ಪ ಅಂಗಡಿ, ಸಿದ್ದಪ್ಪ ಸಜ್ಜನ, ಸೋಮಶೇಖರ್ ಪಾಟೀಲ್, ವಿರುಪಾಕ್ಷಪ್ಪ ಹುರುಳಿ, ಸೋಮಣ್ಣ ಬಡಗೇರ, ಶ್ರೀಕಾಂತ ಪೂಜಾರ, ಗವಿಸಿದ್ದಪ್ಪ ಮುದ್ದಬಳ್ಳಿ, ಅಮರೇಶ ಹಿರೇಮನಿ, ಮಹೇಶ ಹಿರೇಮನಿ, ದೇವಪ್ಪ ಹರಿಜನ, ನಾಗರಾಜ ವೆಂಕಟಾಪೂರ, ಪ್ರಭುರಾಜ ಹಳ್ಳಿ, ಮಹಾಂತೇಶ ಗೋಧಿ, ಅನಂತ ಗುಳಗಣ್ಣವರ್, ಗವಿಸಿದ್ದಪ್ಪ ಗುಳಗಣ್ಣವರ್, ಲಕ್ಷ್ಮಣ ಕೋರಿ, ಲಕ್ಷ್ಮಣ ಕಾಳಿ, ರಾಜಶೇಖರ ಹೊಂಬಳ, ಪ್ರವೀಣ ಗುಳಗಣ್ಣವರ್, ಸಂಜಿವಪ್ಪ ಸಂಗಟಿ, ಶರಣಪ್ಪ ಹೊಸಭಾವಿಸೇರಿದಂತೆ ನೂರು ಯುವಕರು, ಮಹಿಳೆಯರು ಇದ್ದಾರೆ.
ಧರ್ಮದಿಂದ ನಡೆದವರು ಜಗತ್ತಿಗೆ ದೊಡ್ಡವರಾಗುತ್ತಾರೆ. ನಾವು ಹಿಂದು ಎಂದು ಹೇಳಿದರೂ ಆಚರಣೆ ಮಾಡುವುದು ಕಡಿಮೆ. ಹಿಂದುಗಳು ಜಾಗೃತರಾಗಿ ಜೀವನ ನಡೆಸಬೇಕು ಇಲ್ಲದೇ ಹೋದರೆ ಬೇರೆಯವರ ನಮ್ಮನ್ನು ಆಳುವ ಸ್ಥಿತಿ ಬರಬಹುದು. ಈ ದೇಶ ಸಾಕಷ್ಟು ದಾಳಿಯನ್ನು ಎದುರಿಸಿದೆ. ಆದರೆ ನಮ್ಮಲ್ಲಿನ ಧರ್ಮ ಜಾಗೃತವಾಗಬೇಕು.
*ಮಹಾದೇವ ಸ್ವಾಮಿಗಳು.*
ನಮ್ಮಲ್ಲಿ ದೇವೋಪಾಸನೆಯಲ್ಲಿ ಹಲವು ಗೊಂದಲಗಳಿವೆ, ನಮ್ಮಲ್ಲಿ ಮೌಡ್ಯ ಸಾಕಷ್ಟಿದೆ, ಹಿಂದುಗಳಿಗೆ ದೇವನೊಬ್ಬ ನಾಮ ಹಲವು, ಆದರೆ ನಮ್ಮ ಅನೂಕೂಲಕ್ಕಾಗಿ, ಆಚರಣೆಗಾಗಿ ದೇವರನ್ನು ಮಾಡಿಕೊಂಡಿದ್ದೇವೆ.
ಶಿವ, ಹರಿ, ಹರ, ಬುದ್ದ, ರಾಮ, ಕೃಷ್ಣ, ಮಹಾವೀರ ಇವುಗಳೆಲ್ಲವೂ ಎಲ್ಲರೂ ಮಹಾಪುರುಷರು, ನಮಸ್ಕರಿಸುವಾಗ ಎಲ್ಲ ದೇವನು ಒಂದೆ ಎಂದು ನಮಸ್ಕರಿಸಬೇಕು, ಭಗವದ್ಗೀತೆ, ವಚನ ಸಾಹಿತ್ಯ ಇವುಗಳ ಆಧ್ಯಾತ್ಮಿಕ ಶಕ್ತಿ ಅಗತ್ಯ. ವಚನ, ವೇದ, ಉಪನಿಷತ್ತು, ಮಹಾಭಾರತ, ರಾಮಾಯಣ ಎಲ್ಲಾ ಒಂದೇಯಾಗಿವೆ.
*ಅರುಣ ಕುಮಾರ. ಜಿ ಆರ್ಎಸ್ಎಸ್. ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರದ ಪ್ರಮುಖರು.*
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713