ವಿದ್ಯೆ ಕಲಿಸಿದ ಸಂಸ್ಥೆಯ ಬಗ್ಗೆ ಅಪಾರ ಪ್ರೀತಿ ಗೌರವ, ಅಭಿಮಾನ ಹೊಂದಿ:-ಸೋಮಶೇಖರ ನಿಲೋಗಲ್

ಕುಕನೂರು ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮ ಮಾರ್ಚ್ 6 ಶುಕ್ರವಾರದಂದು ಮಾಡಲಾಯಿತು.

ಸರಸ್ವತಿ ಪೂಜೆಯನ್ನು ನೆರವೇರಿಸಿ ಪುಷ್ಪ ಸಮರ್ಪಿಸುವ ಮೂಲಕ
ಮುಖ್ಯ ಅತಿಥಿಗಳಾಗಿ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯ ಉಪ ಪ್ರಾಚಾರ್ಯರಾದ ಸೋಮಶೇಖರ ನಿಲೋಗಲ್ ಅವರು ವಿದ್ಯಾರ್ಥಿಗಳನ್ನ ಉದ್ಧೇಶಿಸಿ ಮಾತನಾಡಿ “ಗುರುಗಳು ಮೇಣದ ಬತ್ತಿಯಂತೆ ತಮ್ಮ ಇಡೀ ಸರ್ವಸ್ವ ವನ್ನು ತ್ಯಾಗ ಮಾಡಿ ವಿದ್ಯೆ ಕಲಿಸುತ್ತಾರೆ.ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಬೆಳಕಾಗುತ್ತಾರೆ ಹೇಗೆ ಮೇಣದ ಬತ್ತಿಯು ತನ್ನನ್ನು ತಾನು ಸುಟ್ಟುಕೊಂಡು ಬೆಳಕನ್ನು ಕೊಡುವ ಸಾರ್ಥಕ ಗುಣ ಹೊಂದಿದೆ ಎಂದು ತಿಳಿಸಿದರು.ಇಂತಹ ಪೂಜ್ಯರ ತಪೋಬಲದ ಸಾನಿದ್ಯದಲ್ಲಿ ಅದ್ಯಯನ ಮಾಡುವ ನೀವೆಲ್ಲರೂ ಪುಣ್ಯವಂತರು.ಒಳ್ಳೆಯವರ ಸ್ನೇಹ ಮಾಡಿ ತಂದೆ ತಾಯಿ. ಗುರುಗಳನ್ನು ಮತ್ತು ನಿಮಗೆ ವಿದ್ಯೆ ಕಲಿಸಿದ ಸಂಸ್ಥೆಯ ಬಗ್ಗೆ ಅಪಾರ ಪ್ರೀತಿ ಗೌರವ, ಅಭಿಮಾನ ಹೊಂದಿ ಎಂದು ತಿಳಿಸಿದರು.

ಶಾಲಾಭಿವೃದ್ದಿಯ ಸದಸ್ಯರಾದ ಗವಿಸಿದ್ದಪ್ಪ ಕರಮುಡಿ ಅವರು ಮಾತನಾಡಿ ಶಿಕ್ಷಣದ ಬೇರುಗಳು ಕಹಿಯಾಗಿರಬಹುದು ಆದರೆ ಅದರ ಫಲ ಸಿಹಿಯಾಗಿದೆ ಎಂದು ಹೇಳಿ ಭವಿಷ್ಯದಲ್ಲಿ ಉತ್ತಮ ಅಭ್ಯಾಸ ಮಾಡಿ ಉನ್ನತ ಸ್ಥಾನಮಾನ ಪಡೆಯಿರಿ ಎಂದರು.
ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ ಎಂ ಹೊಸಮನಿ ಅವರು ಮಾತನಾಡಿ ವಿದ್ಯಾರ್ಥಿಗಳು ಓದಿದ ವಿಷಯವನ್ನು ಹೇಗೆ ನೆನೆಪಿಟ್ಟುಕೊಳ್ಳಬೇಕೆಂದು ತಿಳಿ ಹೇಳಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ ಬಂಡಿವಡ್ಡರ ಅವರು ಮಾತನಾಡಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಟ್ಟು ಉತ್ತಮ ಫಲಿತಾಂಶ ಪಡೆಯಿರಿ ಎಂದು ತಿಳಿಸಿದರು. ಕಾಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಎಸ್ ಜೆ ಪಾಟೀಲ್ ನೆರವೇರಿಸಿದ್ದರು . ಸ್ವಾಗತ ಪುಷ್ಪಾರ್ಪಣೆಯನ್ನು ವಿ ಬಿ ಕಟ್ಟಿ ನೆರವೇರಿಸಿದರು. ಶರಣಪ್ಪ ಗುಡ್ಲಾನೂರ ಅವರು ಕಾರ್ಯಕ್ರಮದ ನಿರೂಪಣೆ ಹಾಗೂ ವಿ ಆರ್ ಹಿರೇಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಬಿ ವಿ ಲಕ್ಷಾಣಿ , ಡಿ ಡಿ ಜೋಗಣ್ಣವರ, ಆರ್ ಡಿ ರಾಠೋಡ, ಎಸ್ ಎಂ ಹಿರೇಮಠ, ನಿವೃತ್ತ ಮುಖ್ಯೋಪಾಧ್ಯಾಯ ಬಿ ಎಸ್ ಅರಳೆಲೆಮಠ, ಮಂಜುಳಾ , ಮೃತ್ಯುಂಜಯ್ಯ, ಶಾಲಾ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *