*ಮಹಿಳೆ ಅಬಲೆ ಅಲ್ಲ, ಸಬಲೆ :-ಸಿಸ್ಟರ್ ಕಮಲಾ ಜೋಸೆಫ್*

ಕುಕನೂರು ಪಟ್ಟಣದ ಎಸ್ಎಪ್ಎಸ್ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಶಾಲಾ ಮಕ್ಕಳ ಮಹಿಳಾ ಪೋಷಕರಿಗೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿಸ್ಟರ್ ಕಮಲಾ ಜೋಸೆಫ್ ಬಳ್ಳಾರಿ ನೆರವೇರಿಸಿ ಮಾತನಾಡಿ ಹೆಣ್ಣು ದುರ್ಬಲ ಅಲ್ಲ. ಅವಳು ಮೃದುವಾಗಿರಬಹುದು. ಆದರೆ ಆ ಮೃದುವಿನೊಳಗೆ ಪರ್ವತದಷ್ಟು ಧೈರ್ಯ ಇರುತ್ತದೆ. ಅವಳು ಒಮ್ಮೆ ನಿರ್ಧರಿಸಿದರೆ ಜೀವನವೇ ಬದಲಾಗುತ್ತದೆ.
ಮಹಿಳೆ ಮನೆಯಲ್ಲೇ ಇರಲಿ ಅತವಾ ಹೊರಗಡೆ ದುಡಿಯಲು ಹೋಗಲಿ, ಆಕೆ ಉದ್ಯೋಗಸ್ತೆಯೇ, ಸಾದಕಿಯೇ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಮನೆಯಿಂದ ದೇಶದ ಉನ್ನತಿವರೆಗೂ ಅನೇಕ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಸ್ತ್ರೀ ತನ್ನ ಅನನ್ಯ ಶಕ್ತಿಯಿಂದ ನಾನಾ ಕ್ಶೇತ್ರಗಳಲ್ಲಿ ಮುನ್ನಡೆಯುತ್ತ ಜಗತ್ತಿನ ಗಮನ ಸೆಳೆದು ಒಂದು ಶಕ್ತಿಯಾಗಿ ಪರಿಣಮಿಸಿದ್ದಾಳೆ. ಈ ಮೂಲಕ ತಾನು ಅಬಲೆ ಎಂಬ ಮಾತನ್ನು ಸುಳ್ಳು ಮಾಡಿದ್ದಾಳೆ. ಅವಳ ಶಕ್ತಿಗೆ ಮತ್ತಶ್ಟು ಬಲವನ್ನು, ಬೆಂಬಲವನ್ನು ನೀಡಿದರೆ ಇನ್ನಶ್ಟು ಬಲಿಶ್ಟ ಸಮಾಜವನ್ನು ಕಟ್ಟುವ ಕನಸು ನನಸಾಗುವ ಸಾದ್ಯತೆಯಿದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳ ಮಹಿಳಾ ಪೋಷಕರಿಗೆ ವಿವೇದ ಸ್ಪರ್ಧೆಗಳು ಹಾಗೂ ನೃತ್ಯ ಪ್ರದರ್ಶನ ನೆರವೇರಿಸಲಾಯಿತು.
ಸಂದರ್ಭದಲ್ಲಿ
ಫಾದರ್ ಸಜ್ಜಿ ಜಾರ್ಜ್, ಫಾದರ್ ಆರೋಗ್ಯ ಸ್ವಾಮಿ, ಸಿಸ್ಟರ್ ಮೇರಿ ರಾಜ್, ಶಾಲಾ ಶಿಕ್ಷಕಿಯರು, ಶಿಕ್ಷಕರು ಪಾಲಕರು ಹಾಗೂ ಶಾಲಾ ಮುದ್ದು ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ವರ್ಗದವರು ಇತರರು ಇದ್ದರು.

ನಿರಂತರ ಸುದ್ದಿ ಜಾಹಿರಾತು, ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713