oplus_1026

*ವಿದ್ಯುತ್ ಪೂರೈಕೆಯ ನ್ನು ನಿರಂತರವಾಗಿಡಲು, ಹಗಲಿರುಳೆನ್ನದೆ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಅಪಾಯಕಾರಿ ಕೆಲಸ ನಿರ್ವಹಿಸುವ ಲೈನ್‌ಮ್ಯಾನ್‌ಗಳು:-ನಾಗರಾಜ*

 

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಪ ವಿಭಾಗ ಕುಕುನೂರು ವತಿಯಿಂದ ವಿದ್ಯುತ್ ಇಲಾಖೆಯ ಕಚೇರಿಯಲ್ಲಿ ಪವರ್ ಮ್ಯಾನ್ ದಿನಾಚರಣೆ ನೆರವೇರಿಸಲಾಯಿತು.

*Breaking news:-ನಿರ್ಭಯ ದೃಷ್ಟಿ ನ್ಯೂಸ್******

ಕುಕನೂರು: ರಾಷ್ಟ್ರೀಯ ಪವರ್ ಮ್ಯಾನ್ ದಿನಾಚರಣೆಯು (Lineman Day) ವಿದ್ಯುತ್ ಪೂರೈಕೆಯ ನ್ನು ನಿರಂತರವಾಗಿಡಲು, ಹಗಲಿರುಳೆನ್ನದೆ ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ಅಪಾಯಕಾರಿ ಕೆಲಸ ನಿರ್ವಹಿಸುವ ಲೈನ್‌ಮ್ಯಾನ್‌ಗಳು ಹಾಗೂ ವಿದ್ಯುತ್ ಸಿಬ್ಬಂದಿಯ ತ್ಯಾಗ, ಬದ್ಧತೆ ಮತ್ತು ಸೇವೆಯನ್ನು ಗೌರವಿಸುವ ವಿಶೇಷ ದಿನವಾಗಿದೆ. ಈ ದಿನವನ್ನು ಮುಖ್ಯವಾಗಿ ಅವರ ತ್ಯಾಗವನ್ನು ಸ್ಮರಿಸಲು ಆಚರಿಸಲಾಗುತ್ತದೆ ಎಂದು ಕುಕುನೂರು ಸಹಾಯಕ ಅಭಿಯಂತರರು ನಾಗರಾಜ ಮಾತನಾಡಿ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಪವರ್ ಮ್ಯಾನ್ ಗಳು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

 ಪವರ್ ಮ್ಯಾನ್ ಗಳ ಕೆಲವೊಂದಿಷ್ಟು ನಿರ್ಲಕ್ಷತನ ಮತ್ತು ಸರಿಯಾದ ಮಾಹಿತಿಯ ಅರಿವಿಲ್ಲದೆ ಹಲವಾರು ವಿದ್ಯುತ್ ಅವಘಡಗಳು ಸಂಭವಿಸುತ್ತವೆ. ನಮ್ಮ ಪವರ್ ಮ್ಯಾನ್ಗಳಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯುತ್ ಅವಘಡಗಳಿಗೆ ಸಂಬAಧಿಸಿದAತೆ ದೂರು ಕರೆಗಳು ಬಂದರೆ ಬೆಸ್ಕಾಂನಿAದ ತುರ್ತಾಗಿ ಸೇವೆ ಒದಗಿಸಲಾಗುವುದು ಎಂದು ಹೇಳಿದರು. ಸಾರ್ವಜನಿಕರೊಂದಿಗೆ ಹೆಚ್ಚಿನ ಸಂಪರ್ಕದಲ್ಲಿರುವ ಲೈನ್ ಮ್ಯಾನ್‌ಗಳು ವಿದ್ಯುತ್ ಅವಘಡ ಸಂಭವಿಸದAತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೀವ ರಕ್ಷಣೆ ಮಾಡಿಕೊಳ್ಳಬೇಕು. ವಿದ್ಯುತ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಉಂಟಾಗಬಹುದಾದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು ಎಂದರು.

ಕೆಲಸ ಮಾಡುವಾಗ ಬೇಜವಾಬ್ದಾರಿ ಅಥವಾ ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಸಂಭವಿಸಬಹುದು. ಆದ್ದರಿಂದ ತರಬೇತಿ ಅವಧಿಯಲ್ಲಿ ನೀಡುವ ಸಲಹೆಗಳನ್ನು ಅರಿತು, ಯಾವುದೇ ಅನುಮಾನವಿದ್ದರೂ ಪರಿಹರಿಸಿಕೊಳ್ಳಬೇಕು. ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನಸಾಮಾನ್ಯರು ದೂರು, ಸಮಸ್ಯೆಗಳನ್ನು ತಿಳಿಸಿದಾಗ ಸೌಜನ್ಯ ಹಾಗೂ ಗೌರವದಿಂದ ವರ್ತಿಸಬೇಕು’ ಎಂದು ನಿರ್ದೇಶನ ನೀಡಿದರು.

 ಮಂಗಳೂರು ಶಾಖೆಯ ಶರಣಪ್ಪ ಮಾತನಾಡಿ, ಲೈನ್‌ಮ್ಯಾನ್‌ಗಳು ವಿದ್ಯುತ್‌ ವಿತರಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ವಿದ್ಯುತ್ ಕಂಬ, ವಿದ್ಯುತ್ ಮಾರ್ಗ, ವಿದ್ಯುತ್ ಪರಿವರ್ತಕಗಳ ಅಳವಡಿಕೆ, ದುರಸ್ತಿ ಮತ್ತು ನಿರ್ವಹಣೆಯ ಕೆಲಸಗಳಲ್ಲಿ ತೊಡಗಿರುವ ಅವರು ಅಪಾಯದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಲೈನ್‌ ಮ್ಯಾನ್‌ಗಳು ಮುನ್ನೆಚ್ಚರಿಕಾ ಕ್ರಮವಾಗಿ ರಬ್ಬ‌ರ್ ಕೈಗವಸು, ಇನ್ಸುಲೇಟೆಡ್ ಬೂಟು, ಹೆಲೈಟ್ ಮತ್ತು ಸೇಫ್ಟಿ ಬೆಲ್ಟ್, ಸೇಫ್ಟಿ ಗಾಗಲ್ ಮತ್ತು ಸ್ಪೆಷಲ್ ಜಾಕೆಟ್‌ಗಳನ್ನು ಬಳಸುವುದರಿಂದ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಹಾಗೂ ಇಲಾಖೆಯ ಇತರರು ಪವರ್ ಮ್ಯಾನ್ ದಿನಾಚರಣೆ ಕುರಿತು ಮಾತನಾಡಿದರು.

ಹಿರಿಯ ಲೈನ್ ಮ್ಯಾನ್ ಬಸವರಾಜ್ ಚಕ್ರಸಾಲಿ ಅವರಿಗೆ ಸನ್ಮಾನಿಸಿ ಗೌರವಿಸಿ ಕೇಕ್ ಕತ್ತರಿಸಲಾಯಿತು. 

ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿದ್ಯುತ್ ಅವಗಡದಲ್ಲಿ ಮೃತ ಹೊಂದಿದ ಸಿಬ್ಬಂದಿಯವರಿಗೆ ಎರಡು ನಿಮಿಷಗಳ ಮೌನಚರಣೆ ನೆರವೇರಿಸಲಾಯಿತು. 

ಕಾರ್ಯಕ್ರಮದ ನಿರೂಪಣೆ ಅಂದಪ್ಪ ಬೆಣಕಲ್ ನೆರವೇರಿಸಿದರು.

ಸಂದರ್ಭದಲ್ಲಿ  ವಿದ್ಯುತ್ ಇಲಾಖೆಯ ಪ್ರಭಾರಿ ಕುಕುನೂರು ಶಾಖಾಧಿಕಾರಿ ಆಕಾಶ, ಇಟಗಿ ಶಾಖಾಧಿಕಾರಿ ವೀರೇಶ ಕೆ, ಮಂಗಳೂರು ಶಾಖೆಯ ಅಧಿಕಾರಿ ಶರಣಪ್ಪ, ವಿದ್ಯುತ್ ಇಲಾಖೆ ಕಂದಾಯ ಸಹಾಯಕ ಅಧಿಕಾರಿ ಚಂದ್ರಶೇಖರ ಪಣಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (659) ಪದಾಧಿಕಾರಿಗಳು ಲೈನ್ ಮ್ಯಾನ್ ಗಳು ಇತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *