*ಕನ್ನಡ ನಾಡು ನುಡಿ ರಕ್ಷಣೆ ನಮ್ಮೆಲ್ಲರ ಹೊಣೆ : ಶರಣಪ್ಪ ಕೊಪ್ಪದ*

ಕುಕನೂರು : ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ಅವುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ನಿವೃತ್ತ ಶಿಕ್ಷಕರಾದ ಶರಣಪ್ಪ ಕೊಪ್ಪದ ಹೇಳಿದರು.
ಅವರು ಸೋಮವಾರದಂದು ಪಟ್ಟಣದ ಶ್ರೀಮತಿ ರಾಮಬಾಯಿ ಅಂಬೇಡ್ಕರ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕುಕುನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಂತರ ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಆರ್.ಪಿ. ರಾಜೂರು ಮಾತನಾಡಿ ಮಾತೃಭಾಷೆ ಕನ್ನಡವನ್ನು ಉಳಿಸಲು ಬೆಳೆಸಲು ಮತ್ತು ಜಾಗೃತಿ ಗೊಳಿಸುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗುವ ದತ್ತಿ ಉಪನ್ಯಾಸ ಕಾರ್ಯಕ್ರಮ ಮಹತ್ವ ಪೂರ್ಣವಾಗಿದೆ ಎಂದರು.
ವೇದಿಕೆಯ ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಮಬಾಯಿ ಅಂಬೇಡ್ಕರ್ ಬಾಲಕಿರ ಪ್ರೌಢಶಾಲೆಯ ಸಂಸ್ಥಾಪಕಿ ಲಕ್ಷ್ಮಮ್ಮ ಕಾಳಿ, ಉಪನ್ಯಾಸಕ ಎಸ್.ಎಂ ಹಿರೇಮಠ, ಹಿರಿಯ ಪತ್ರಕರ್ತ ರುದ್ರಪ್ಪ ಭಂಡಾರಿ, ಕಸಾಪ ಪ್ರಧಾನ ಕಾರ್ಯದರ್ಶಿ ಫೀರ್ ಸಾಬ್ ದಪೇದಾರ, ಚಂದ್ರು ಬಾನಾಪುರ ನಿವೃತ್ತ ಶಿಕ್ಷಕ ಅಶೋಕ್ ಮಾದಿನೂರು, ಕೆ.ಆರ್. ಕುಲಕರ್ಣಿ, ಮುಖ್ಯ ಗುರು ಅಮರೇಶ ಶಿವ ರೆಡ್ಡಿ, ಶಿಕ್ಷಕ ಬಸವರಾಜ ಉಪ್ಪಿನ, ಶೇಖರ ಗೌಡ ಪೊಲೀಸ್ ಪಾಟೀಲ್, ಮತ್ತಿತರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಕನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಕಳಕಪ್ಪ ಕುಂಬಾರ ಅಧ್ಯಕ್ಷತೆ ವಹಿಸಿದ್ದರು.
ಎನ್.ಆರ್. ಮುದುಗಲ್, ರವಿ ಹಿರೇಮನಿ ಮತ್ತಿತರ ಪಾಲ್ಗೊಂಡಿದ್ದರು. ಮೇಘರಾಜ್ ಜಿಡಗಿ ಪ್ರಾರ್ಥಿಸಿದರು. ಶಿಕ್ಷಕ ಎಫ್. ಜಿ.ಅಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713