*ತಾಲೂಕಿನ ಅಭಿವೃದ್ಧಿಗೆ ಕೊರತೆ ಇಲ್ಲ : ಯಂಕಣ್ಣ ಯರಾಶಿ*

ಕುಕುನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಮುತುವರ್ಜಿಯಿಂದ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಅಭಿವೃದ್ಧಿಗೆ ತಾಲೂಕಿನಲ್ಲಿ ಯಾವುದೇ ಕೊರತೆ ಇಲ್ಲ ಎಂದು ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 17ನೇ ಬಜೆಟ್ ನಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕುಕನೂರು ತಾಲೂಕಿನ 20 ಗ್ರಾಮಗಳಿಗೆ ಹಾಗೂ ಯಲಬುರ್ಗಾ ತಾಲೂಕಿನ 3 ಗ್ರಾಮಗಳಿಗೆ ಸುಮಾರು 125 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಅನುಮೋದನೆಯನ್ನು ನೀಡಿದ್ದಾರೆ ಎಂದರು.

ಪ್ರತಿಯೊಬ್ಬ ವ್ಯಕ್ತಿಗೂ 80 ಲೀಟರ್ ನೀರು ಕೊಡುವಂತೆ ಯೋಜನೆ ಸಫಲತೆ ಆಗಲಿಲ್ಲ. ಆದ್ದರಿಂದ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವ ಮೂಲಕ ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಮಂಜೂರು ಮಾಡಿಸಿದ್ದಾರೆ ಎಂದರು.

ತಾಲೂಕಿನ 23 ಹಳ್ಳಿಗಳಿಗೆ ಅಂದರೆ ಬನ್ನಿಕೊಪ್ಪದಿಂದ ಕರಮುಡಿವರೆಗೂ ಈ ಯೋಜನೆಯನ್ನು ನೀಡಲಾಗಿದೆ ಎಂದರು.

ತಾಲೂಕಿನಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕುಕನೂರು ಪಟ್ಟಣದಲ್ಲಿ ತಾಲೂಕ ಕ್ರೀಡಾಂಗಣ ನಿರ್ಮಾಣ, ಮ್ಯಾದನರಿ ಕ್ರಾಸ್ ವರೆಗೆ ರಸ್ತೆ ಅಭಿವೃದ್ಧಿ, ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು ರೂ.18 ಕೋಟಿಗಳ ಕಟ್ಟಡ ಮಂಜೂರಾತಿ, ಬೇವೂರು ಗ್ರಾಮದಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ಮಂಜೂರಾತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಗೌಡ ಚಂಡೂರು, ಹಿರಿಯ ಮುಖಂಡರಾದ ಸತ್ಯ ನಾರಾಯಣಪ್ಪ ಹರಪನಹಳ್ಳಿ, ಸಿದ್ದಯ್ಯ ಕಳ್ಳಿಮಠ, ಮಂಜುನಾಥ ಕಡೇಮನಿ, ಸಂಗಮೇಶ ಗುತ್ತಿ, ರೆಹಮಾನ ಸಾಬ್ ಮಕಪ್ಪನವರ್, ಶಿವುಕುಮಾರ ಆದಾಪೂರ, ಸುಭಾಸ್ ಮಾದಿನೂರು, ಬಸವರಾಜ ಮಾಸೂರು, ಶ್ರೀಧರ ದೇಸಾಯಿ, ಬಸವರಾಜ ಮುತ್ತಾಳ, ಹೊನ್ನಪ್ಪ ಮರಡಿ, ಕಾರ್ತಿಕ ಜಾಧವ್ ಸೇರಿದಂತೆ ಇತರರು ಇದ್ದರು.

 

*ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713*

Leave a Reply

Your email address will not be published. Required fields are marked *