*ನಿಂಗಪ್ಪ ಜಿ.ಎಸ್ ಬೆಣಕಲ್ ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ರಾಜ್ಯಮಟ್ಟದ “ಸೇವಾ ರತ್ನ” ಪ್ರಶಸ್ತಿ ಪ್ರಧಾನ*

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದ ಡಿಎಸ್ಎಸ್ ಕಾದ್ರೊಳ್ಳಿ ಬಣ್ಣ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಜಿ.ಎಸ್ ಬೆಣಕಲ್ ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಮಾಜಿಕ ಜಾಗೃತಿ, ಸಂಘಟನೆ ಬಲವರ್ಧನೆ ಹಾಗೂ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಗಣಿಸಿ ಅವರ ಗಣನೀಯ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ನಕ್ಷತ್ರ ಫೌಂಡೇಶನ್ ಹುಬ್ಬಳ್ಳಿ ಇವರ ವತಿಯಿಂದ ರಾಜ್ಯಮಟ್ಟದ ಸಮಾರಂಭದಲ್ಲಿ.22 ರವಿವಾರದಂದು ನಡೆಯುವ ಸಮಾರಂಭದಲ್ಲಿ ರಾಜ್ಯಮಟ್ಟದ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ.

ಡಿಎಸ್ ಎಸ್ ಕಾದ್ರೊಳ್ಳಿ ಬಣ್ಣ ಜಿಲ್ಲಾಧ್ಯಕ್ಷ ನಿಂಗಪ್ಪ ಬೆಣಕಲ್ ಪ್ರಶಸ್ತಿ ಸ್ವೀಕರಿ ಮಾತನಾಡಿ ಈ ಗೌರವ ಕೇವಲ ನನ್ನ ವ್ಯಕ್ತಿತ್ವ ಶ್ರಮದಿಂದ ಬಂದದ್ದಲ್ಲ. ನನ್ನ ಕುಟುಂಬದ ಅಚಲ ಸಹಕಾರ, ಸ್ನೇಹಿತರ ಬೆಂಬಲ ಮತ್ತು ಪ್ರೋತ್ಸಾಹವೇ ಈ ಸಾಧನೆಯ ನಿಜವಾದ ಬಲವಾಗಿದೆ. ಈ ಶ್ರೇಯಸ್ಸು ನನ್ನ ಕುಟುಂಬ ಹಾಗೂ ಸಂಗೀತ ಸಲ್ಲಬೇಕು ಎಂದು ಹೇಳಿದರು. ಈ ಗೌರವದಿಂದ ನನ್ನ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ
ನಕ್ಷತ್ರ ಫೌಂಡೇಶನ್ ಹುಬ್ಬಳ್ಳಿ ಪದಾಧಿಕಾರಿಗಳು, ವಿವಿಧ ಗಣ್ಯರು ಸಮಾಜ ಸೇವಕರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713