*ಬಿಸಿಯೂಟ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ ನಡೆಯುವುದಿಲ್ಲ:-ಟಿ ಜಿ ದಾನಿ*


*ಅಕ್ಷರ ದಾಸೋಹ ಯೋಜನೆಯಲ್ಲಿ ಅಡುಗೆ ತಯಾರಿಕರ ತರಬೇತಿ ಕಾರ್ಯಗಾರ*

ಕುಕುನೂರು ಪಟ್ಟಣದ ಶ್ರೀ ಗವಿಸಿದ್ದೇಶ್ವರ ಶಾಲೆಯಲ್ಲಿ ಶನಿವಾರದಂದು ಕುಕನೂರು ಹೋಬಳಿ ವ್ಯಾಪ್ತಿಯ ಸರಕಾರಿ ಮತ್ತು ಅನುದಾನಿತ ಶಾಲೆಗಳ ಅಡಿಗೆ ತಯಾರಿಕರ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.

ಟಿ ಜಿ ದಾನಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ರವರು ಕಾರ್ಯಕ್ರಮದ ಚಾಲನೆ ನೀಡಿ ಪ್ರಾಸ್ತಾವಿಕ ಮಾತನಾಡಿ
ಬಿಸಿಯೂಟ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ ನಡೆಯುವುದಿಲ್ಲ. ಬಿಸಿಯೂಟದ ಹಿಂದೆ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕೆಂಬ ಉದ್ದೇಶವಿದ್ದು, ಯಾವುದೇ ಕಾರಣಕ್ಕೂ ಅಡುಗೆ ಸಿಬ್ಬಂದಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದರು.
ತರಬೇತಿಯಲ್ಲಿ ಅಡಿಗೆಯವರ ಕರ್ತವ್ಯಗಳು, ಆಹಾರ ಧಾನ್ಯಗಳ ಸಂರಕ್ಷಣೆ, ಮತ್ತು ಸ್ವಚ್ಛತೆ ಜಾಗರೂಕತೆ, ಮುನ್ನೆಚ್ಚರಿಕೆಯ ಕ್ರಮಗಳು ಇತ್ಯಾದಿಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವೈದ್ಯಾಧಿಕಾರಿಗಳಾದ ಲಾಲ್ ಸಾಬ್ ರವರು ನೆರವೇರಿಸಿ ಮಾತನಾಡಿ ಶಾಲೆಗೆ ಬರುವ ಆಹಾರ ಪಡಿತರಗಳ ಗುಣಮಟ್ಟ ಪರಿಶೀಲಿಸಿ, ಗುಣಮಟ್ಟ ಖಾತರಿ ಪಡಿಸ­ಬೇಕು. ಆಹಾರ ಪದಾ­ರ್ಥಗಳು, ತರಕಾರಿಗಳನ್ನು ಬಳಸಿಕೊ­ಳ್ಳುವ ಮುನ್ನ ಅವುಗಳ ಸ್ವಚ್ಛತೆಗೆ ಮಹತ್ವ ನೀಡಿ, ಗುಣಮಟ್ಟ ಪರಿಶೀಲಿಸಿದ ಬಳಿಕವೇ ಬಳಸಬೇಕು, ಅಡುಗೆ ಸಿಬ್ಬಂದಿ ಒಂದು ಕ್ಷಣ ಕರ್ತವ್ಯದಲ್ಲಿ ಲೋಪವೆಸಗಿದರೆ, ಅದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ಬೀರುವುದರಿಂದ ಜಾಗ್ರತೆ ವಹಿಸಬೇಕು’ ಎಂದರು.

ವೆಂಕಟೇಶ್ ಕೊಂಕಲ್ ಮಾನ್ಯ ಶಿಕ್ಷಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ ರವರು ಮಾರ್ಗದರ್ಶನ ನೀಡಿದರು. ಅಗ್ನಿಶಾಮಕ ಸಿಬ್ಬಂದಿಯವರು ಗ್ಯಾಸ್ ಏಜೆನ್ಸಿ ಕೆ ಎಂ ಎಫ್ ಇವರು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಕಾರ್ಯಗಾರದಲ್ಲಿ 160ಕ್ಕೂ ಹೆಚ್ಚು ಅಡಿಗೆದಾರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಕೆ. ಬಂಡಿವಡ್ಡರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ. ಎಂ. ಹೊಸಮನಿ, ಶಾಲಾ ಸಿಬ್ಬಂದಿಯವರು ಮತ್ತು ಅಡಿಗೆಯವರ ಸಂಘದ ಅಧ್ಯಕ್ಷರಾದ ಜಯಶ್ರೀ ತೋಟದಮನೆ, ಪದ್ಮಾವತಿ, ಕಾರ್ಯದರ್ಶಿಗಳಾದ ಶಿವನಗೌಡ ವಿದ್ಯಾರ್ಥಿಗಳು ಇತರರು ಹಾಜರಿದ್ದರು.

ಕಾರ್ಯಕ್ರಮ ಪೂರ್ವದಲ್ಲಿ ಮಕ್ಕಳಿಂದ ತಯಾರಿಸಿದ Food Fest ನಲ್ಲಿ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಹಾಗೂ ಅನಾರೋಗ್ಯಕರ ಕನಸುಗಳ ಬಗ್ಗೆ ಮಾದರಿ ಸಮೇತ ವಿವರಣೆಯನ್ನು ನೀಡಿದರು.

ವರದಿ ಚನ್ನಯ್ಯ ಹಿರೇಮಠ ಕುಕನೂರ

Leave a Reply

Your email address will not be published. Required fields are marked *