ಮಾದ್ಯಮ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸಲಿ: ಶರಣಪ್ಪ ಗುಮಗೇರಿ

ಯಲಬುರ್ಗಾ: ತಾಲೂಕಿನಲ್ಲಿ ನಮ್ಮ ಸಂಘಟನೆ ನಿರಂತರವಾಗಿ ಚಾಲನೆಯಲ್ಲಿದೆ ಹಾಗೂ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವದು ಸಂತಸ ತಂದಿದೆ ಎಂದು ಜಿಲ್ಲಾಧ್ಯಕ್ಷ ಶರಣಪ್ಪ ಗುಮಗೇರಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಅವರು ಮಾತನಾಡಿದರು.

ಸಂಘ ಯಾವುದೇ ಇರಲಿ ನಿಷ್ಠೆ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸಿ ಅದರಿಂದ ಸಮಾಜಕ್ಕೆ ನೊಂದವರಿಗೆ ಒಳಿತಾಗುವದು ಎಂದರು.

ನೂತನ ಪದಾಧಿಕಾರಿಗಳ ನೇಮಕ: 

ನೂತನ ತಾಲೂಕು ಅಧ್ಯಕ್ಷರಾಗಿ ಶಿವಮೂರ್ತಿ ಇಟಗಿ, ಪ್ರಧಾನ ಕಾರ್ಯದರ್ಶಿ ಶಿವುಕುಮಾರ ಮ್ಯಾಗೇರಿ, 

ಗೌರವ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯಕಾರಣಿ ಸದಸ್ಯರಾಗಿ ಸ,ಶರಣಪ್ಪ ಪಾಟೀಲ್, ಉಪಾಧ್ಯಕ್ಷ ದೇವರಾಜ ದೊಡ್ಡಮನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಲಾಯಿತು.

ನಂತರ ಸಂಘದ ಮಾಜಿ ಅಧ್ಯಕ್ಷ ದಿ,ಖಾಜಾವಲಿ ಜರಕುಂಟಿ ಕುಟುಂಬಕ್ಕೆ ಆರ್ಥಿಕ ನೆರವನ್ನು ಜಿಲ್ಲಾಧ್ಯಕ್ಷರು ನೀಡಿದರು.

ಈ ಸಂದರ್ಭದಲ್ಲಿ ರವಿಕುಮಾರ್ ಚಲವಾದಿ, ವೀರೇಶ ಸ್ಟಾಂಪಿನ, ಕಳಕೇಶ, ಶರಣು , ಮೌನೇಶ, ದುರಗೇಶ ಅವರು ನೂತನ ತಾಲೂಕ ಕಾರ್ಯಕಾರ್ಯಿಣಿ ಸದಸ್ಯರಾಗಿ ಆಯ್ಕೆಯಾದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *