ಸರ್ವ ಜನಾಂಗದ ಒಳಿತಿಗಾಗಿ ಜೀವ ತ್ಯಾಗ ಮಾಡಿದ ಮಹಾನ್ ಸಂತ ಸೇವಾಲಾಲ: ಶಿವರಾಜ ಕಾರಬಾರಿ

ಕುಕನೂರ : ಸಮಾಜದಲ್ಲಿ ಸರ್ವ ಜನಾಂಗದ ಜೀವಿಗಳ ಒಳಿತಿಗಾಗಿ ತಮ್ಮ ಜೀವನ ಮತ್ತು ಜೀವ ವನ್ನೇ ತ್ಯಾಗ ಮಾಡಿದ ಮಹಾನ್ ಸಂತ ಸೇವಾಲಾಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಂಜಾರ ಸಮಾಜದ ಯುವ ಮುಖಂಡ ಶಿವರಾಜ ಕಾರಬಾರಿ ಹೇಳಿದರು.
ಕುಕನೂರು ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ಸಂತ ಸೇವಾಲಾಲರ 287 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ಪ್ರಕೃತಿ ಮಡಿಲಲ್ಲಿ ಪ್ರತಿವೊಂದು ಜೀವಿಗೂ ತನ್ನದೇ ಆದ ಬದುಕುವ ಹಕ್ಕು ಇದೆ ಎಂದು ಸಾರಿ ಯಾವುದೇ ಜಾತಿ ಪಂಗಡದ ವೈಶಮ್ಯ ವಿಲ್ಲದೆ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡು. ಸಮಾಜದಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸುವ ಮಾರ್ಗವನ್ನು ತಿಳಿಸಿದ್ದಾರೆ, ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನು ನಡೆಸಿ ಮನುಷ್ಯ ಆದವನು ಸನ್ಮಾರ್ಗದಲ್ಲಿ ಹೇಗೆ ನಡೆಯಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ, ಅಂತಹ ಮಹಾನ್ ಪವಾಡ ಪುರುಷ ನ ಜಯಂತೋತ್ಸವವನ್ನು ಮನ್ನಾಪುರ ಗ್ರಾಮದ ಬಂಜಾರ ಸಮುದಾಯದಿಂದ ಬಂಜಾರ ವೇಷ ತೊಟ್ಟು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತಿದೆ ಎಂದು ಹೇಳಿದರು.

ನಂತರ ಯುವ ಮುಖಂಡ ಬಸವರಾಜ ಲಂಬಾಣಿ ಮಾತನಾಡಿ ಮನ್ನಾಪುರ ಗ್ರಾಮದಲ್ಲಿ ಪವಾಡ ಪುರುಷ ಸಂತ ಸೇವಾಲಾಲ ಜಯಂತೋತ್ಸವವನ್ನು ಗ್ರಾಮದ ಮಹಿಳಿಯರು ಮಕ್ಕಳು ಯುವಕರು ಸೇರಿಕೊಂಡು ಹಬ್ಬದ ರೀತಿಯಲ್ಲಿ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ, ಅಂತ ಸೇವಾಲಾಲರ ಭಾವಚಿತ್ರವನ್ನು ಸೇವಾಲಾಲ್ ವೃತ್ತದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಬಂಜಾರ ಸಮುದಾಯದ ಉಡುಗೆ ತೊಟ್ಟು ಸಮುದಾಯದ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ವೆಂಕಟೇಶ್ ಲಂಬಾಣಿ, ಪರಶುರಾಮ ಲಂಬಾಣಿ, ಸಂತೋಷ ರಾಠೋಡ, ಕೃಷ್ಣ ನಾಯಕ , ಪರಶು ಲಂಬಾಣಿ, ರಾಜು ಲಂಬಾಣಿ, ಯಲ್ಲಪ್ಪ ಕಾರಬಾರಿ, ಭೀಮಪ್ಪ ನಾಯಕ ಈರಪ್ಪ ನಾಯಕ , ಇತರರು ಇದ್ದರು.
ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713
