ವಿದ್ಯಾರ್ಥಿಗಳು ಪ್ರತಿ ಸಂದರ್ಭ ಧನಾತ್ಮಕ ಚಿಂತನೆ , ಸಮಯ ಪ್ರಜ್ಞೆ ಹೊಂದಿರಬೇಕು. ಆಗ ಅಂದುಕೊಂಡ ಗುರಿ ಸಮೀಪಕ್ಕೆ ಹೋಗಬಹುದು:-ಪೀರಸಾಬ್ ದಪೇದಾರ್

 

ಕುಕನೂರು :-  ಯಶಸ್ಸಿಗೆ ಯಾವುದೇ ಒಂದು ಮಾನದಂಡವಿಲ್ಲ. ಪ್ರತಿಯೊಬ್ಬ ಮನುಷ್ಯ ತನ್ನದೇ ಜೀವನ ಶೈಲಿ ಹೊಂದಿರುತ್ತಾನೆ, ಸಾಧನೆ ಮಾಡಬೇಕು ಎನ್ನುವವರು ನಾಳೆ ಮಾಡುವ ಕೆಲಸ ಇಂದೇ ಮಾಡುತ್ತೇನೆ ಎನ್ನುವ ವೇಗ ರೂಢಿಸಿಕೊಳ್ಳಬೇಕು. ಆಗ ಮಾತ್ರ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಪ್ರತಿ ಸಂದರ್ಭ ಧನಾತ್ಮಕ ಚಿಂತನೆ , ಸಮಯ ಪ್ರಜ್ಞೆ ಹೊಂದಿರಬೇಕು. ಆಗ ಅಂದುಕೊಂಡ ಗುರಿ ಸಮೀಪಕ್ಕೆ ಹೋಗಬಹುದು ಎಂದ ಪೀರಸಾಬ ದಪೇದಾರ್ ಸಿಆರ್‌ಪಿ ಹೇಳಿದರು.
ಅವರು ಕುಕನೂರು ಪಟ್ಟಣದ ಶ್ರೀಮತಿ ರಮಾಬಾಯಿ ಬಿ, ಅಂಬೇಡ್ಕರ್ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರದಂದು ಬಿಳ್ಕೊಡುಗೆ ಸಮಾರಂಭದ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ

ಶಿಕ್ಷಕರು ಸಮಾಜ ತಿದ್ದುವ ಹಾಗೂ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಸಮಾಜದಲ್ಲಿ ಹೆಚ್ಚಿನ ಗೌರವ ಸ್ಥಾನಮಾನ ಇದೆ. ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಶಿಸ್ತು, ಸಂಸ್ಕಾರವನ್ನೂ ಕಲಿಸುತ್ತಾರೆ. ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತಷ್ಟು ಶ್ರಮ ವಹಿಸಬೇಕು. ಈ ಬಾರಿ ಎಸ್‌ಎಸ್‌ಎಲ್‌ಸಿ , ಪರೀಕ್ಷೆಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರಲು ಶ್ರೀಮತಿ ರಾಮಾಬಾಯಿ ಬಿ, ಅಂಬೇಡ್ಕರ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪೂರಕವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ವಿದ್ಯಾನಂದ ಗುರುಕುಲ ಉಪನ್ಯಾಸಕರಾದ ಶ್ರೀಕಾಂತ್ ಕುಲಕರ್ಣಿ ಮಾತನಾಡಿ
ಯಶಸ್ಸಿಗೆ ಯಾವುದೇ ಒಂದು ಮಾನದಂಡವಿಲ್ಲ. ಪ್ರತಿಯೊಬ್ಬ ಮನುಷ್ಯ ತನ್ನದೇ ಜೀವನ ಶೈಲಿ ಹೊಂದಿರುತ್ತಾನೆ, ಸಾಧನೆ ಮಾಡಬೇಕು ಎನ್ನುವವರು ನಾಳೆ ಮಾಡುವ ಕೆಲಸ ಇಂದೇ ಮಾಡುತ್ತೇನೆ ಎನ್ನುವ ವೇಗ ರೂಢಿಸಿಕೊಳ್ಳಬೇಕು. ಆಗ ಮಾತ್ರ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಪ್ರತಿ ಸಂದರ್ಭ ಧನಾತ್ಮಕ ಚಿಂತನೆ , ಸಮಯ ಪ್ರಜ್ಞೆ ಹೊಂದಿರಬೇಕು. ಆಗ ಅಂದುಕೊಂಡ ಗುರಿ ಸಮೀಪಕ್ಕೆ ಹೋಗಬಹುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕುಕನೂರು ತಾಲೂಕು ಅಧ್ಯಕ್ಷರಾದ ಕಳಕಪ್ಪ ಕುಂಬಾರ್ ಮಾತನಾಡಿ
ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವು ಅದನ್ನು ಹುಡುಕಬೇಕು. ಪ್ರತಿಭೆಗೆ ಬಡವ, ಸಿರಿವಂತರೆಂಬ ಭೇದವಿಲ್ಲ. ವಿದ್ಯೆ, ಯಶಸ್ಸು ಶ್ರಮಿಕನ ಸ್ವತ್ತು ವಿನಾ ಸೋಮಾರಿಯದ್ದಲ್ಲ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಶ್ರದ್ಧೆ, ಸಮಯ ಪಾಲನೆ, ಕಠಿಣ ಪರಿಶ್ರಮ ಇಟ್ಟುಕೊಳ್ಳಬೇಕೆಂದರು.

2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕಕ್ಕೆ 125 ಅಂಕ ಪಡೆದಿದ್ದಕ್ಕಾಗಿ ಕು. ಸಿಂಧೂ ಚನ್ನಪ್ಪನಹಳ್ಳಿ ವಿದ್ಯಾರ್ಥಿನಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.

2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕು. ಸೃಷ್ಟಿ ಮಾರುತಿ ಆರೇರ್ ವಿದ್ಯಾರ್ಥಿನಿ
ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಕ್ಕಾಗಿ ಅಭಿನಂದನಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.

ಎ. ಎಸ್. ಶಿವರಡ್ಡಿ ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲಾ ವರದಿ ವಾಚನ ಮಾಡಿದರು.

ಶಿಕ್ಷಕರಾದ ಎಫ್ ಜಿ ಅಂಗಡಿ
ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು ನಿರೂಪಣೆಯನ್ನು ಕುಮಾರಿ ನಿವೇದಿತಾ ಪೂಜಾರ್ ನೆರವೇರಿಸಿದರು.

ಈ ಸಂದರ್ಭದಲ್ಲಿ
ಲಕ್ಷ್ಮಮ್ಮ ಬಿ ಕಾಳೆ ಅಧ್ಯಕ್ಷರು ಆಡಳಿತ ಮಂಡಳಿ, ಸಿ ಎಂ ಮದುಕರ ಕಾರ್ಯದರ್ಶಿಗಳು, ಲಕ್ಷ್ಮಿ ವೀರೇಶ ಸಬರದ ಪಟ್ಟಣ ಪಂಚಾಯತ್ ಸದಸ್ಯರು, ಉಮಾ ಮಹಿಳಾ ವಸತಿ ಮೇಲ್ವಿಚಾರಕರು, ರತ್ನಮ್ಮ ತಳವಾರ್, ಶ್ರೀಶೈಲಪ್ಪ ತಾವರಗೇರಿ, ಎಸ್ ಎಮ್ ಮಾಲಿಗೌಡ್ರು, ಬಸವರಾಜ ಚಲವಾದಿ, ನಾರಾಯಣ ಮುದುಗಲ್, ಗವೀಶ ನಾಯ್ಕರ,ದೇವರಾಜ, ಪ್ರಿಯಾಂಕ, ಸಾವಿತ್ರಿ ಶಿರೂರು ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.

ವರದಿ ಚನ್ನಯ್ಯ ಹಿರೇಮಠ ಕುಕನೂರು

Leave a Reply

Your email address will not be published. Required fields are marked *