ರಾಣಿ ಚೆನ್ನಮ್ಮ ಕೇವಲ ಕಿತ್ತೂರಿನ ರಾಣಿಯಲ್ಲ, ಬದಲಾಗಿ ಇಡೀ ಭಾರತದ ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಸೆಲೆ :-ಮಂಜುನಾಥ ನಾಡಗೌಡ

ನಿರಂತರ ಸುದ್ದಿ ಪ್ರಕಟಣೆಗಾಗಿ, ನಿರ್ಭಯ ದೃಷ್ಟಿ ನ್ಯೂಸ್ !!


ಕುಕನೂರು ಪಟ್ಟಣದ ಬಸವನಗೌಡ ತೊಂಡಿಹಾಳರವರ ಕಚೇರಿಯಲ್ಲಿ ಶನಿವಾರದಂದು ಕಿತ್ತೂರು ರಾಣಿ ಚನ್ನಮ್ಮ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮವು ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಪ್ರಾರಂಭವಾಯಿತು. ನಗರದ ಹಿರಿಯರು, ಗಣ್ಯರು, ಮಹಿಳೆಯರು ಭಾಗವಹಿಸಿ, ಅವರ ತ್ಯಾಗಮಯ ಜೀವನವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜುನಾಥ ನಾಡಗೌಡ ರಾಣಿ ಚನ್ನಮ್ಮ ಅವರು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬುದನ್ನು ನೆನಪಿಸಿದರು. 1824ರಲ್ಲಿ ಬ್ರಿಟಿಷರ ದೌರ್ಜನ್ಯ ನೀತಿಗೆ ವಿರೋಧವಾಗಿ ಕಿತ್ತೂರು ಸಮರ ನಡೆಸಿದ ಅವರ ಸಾಹಸವು ಇಂದಿಗೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ.ರಾಣಿ ಚೆನ್ನಮ್ಮ ಕೇವಲ ಕಿತ್ತೂರಿನ ರಾಣಿಯಲ್ಲ, ಬದಲಾಗಿ ಇಡೀ ಭಾರತದ ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಸೆಲೆ ಎಂದು ಅಭಿಪ್ರಾಯಪಟ್ಟರು. ಮಹಿಳಾ ಶಕ್ತಿ, ದೇಶಭಕ್ತಿ ಮತ್ತು ಸ್ವಾಭಿಮಾನಕ್ಕೆ ರಾಣಿ ಚನ್ನಮ್ಮ ಅವರು ಪ್ರತೀಕವಾಗಿದ್ದಾರೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಕೊನೆಯಲ್ಲಿ ಎಲ್ಲರೂ ದೇಶದ ಏಕತೆ, ಸ್ವಾಭಿಮಾನ ಮತ್ತು ಸಮಾಜಸೇವೆಯ ಮಾರ್ಗದಲ್ಲಿ ನಡೆಯುವ ಪ್ರತಿಜ್ಞೆ ತೆಗೆದುಕೊಂಡರು. ಈ ಪುಣ್ಯಸ್ಮರಣೆ ಕಾರ್ಯಕ್ರಮವು ರಾಣಿ ಚನ್ನಮ್ಮ ಅವರ ಆದರ್ಶಗಳನ್ನು ಮತ್ತಷ್ಟು ಬಲಪಡಿಸುವಂತೆ ಮಾಡಿತು.
ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರಾದ ಬಸವನಗೌಡ ತೊಂಡಿಹಾಳ, ಕುಕನೂರು ತಾಲೂಕಾಧ್ಯಕ್ಷರಾದ ವೀರಣ್ಣ ಅಣ್ಣಿಗೇರಿ, ಶ್ರೀಮತಿ ಶಾಂತ ತೊಂಡಿಹಾಳ, ಮುಖಂಡರಾದ ಮಂಜುನಾಥ ನಾಡಗೌಡ, ಶರಣಗೌಡ ಪಾಟೀಲ್, ರಾಮನಗೌಡ ಅರಿಶಿನಬಿಡಿ, ಕಳಕೇಶ ಹತ್ತಿಕಟಗಿ, ಚಂದ್ರು ಬಗನಾಳ, ಶರಣಪ್ಪ ಚೆಂಡೂರ, ಮಲ್ಲಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಿರಂತರ ಸುದ್ದಿ ಜಾಹೀರಾತಿಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *