*ಸಕಲ ಸದ್ಭಕ್ತರ ಸಹಕಾರದಿಂದ ಅದ್ದೂರಿಯಾಗಿ ಜರುಗಿದ ಬಳ್ಳೇಶ್ವರ ಜಾತ್ರಾ ಮಹೋತ್ಸವ,,! ಗುದ್ನೇಶ ಹುಂಡಿ,,* 

ಕುಕನೂರು : ನಮ್ಮ ಗ್ರಾಮದ ಬಳ್ಳೇಶ್ವರ ಜಾತ್ರಾಮಹೋತ್ಸವವು ನಿರಂತರ 39ವರ್ಷಗಳಿಂದ ಅತಿ ಉತ್ಸಾಹ ಹಾಗೂ ವಿಜೃಂಭಣೆಯಿಂದ ನೆರವೇರುತ್ತಾ ಬಂದಿದ್ದು ಇದಕ್ಕೆ ಗ್ರಾಮದ ಹಿರಿಯರ, ಯುವಕರ, ಮಹಿಳೆಯರ ಸಹಕಾರ ಕಾರಣವಾಗಿದೆ. ಗ್ರಾಮದ ಹಾಗೂ ಸುತ್ತ ಮುತ್ತಲಿನ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಜರುಗಿದವು ಎಂದು ಗ್ರಾಮದ ಮುಖಂಡರಾದ ಗುದ್ನೇಶ ಹುಂಡಿ ಹೇಳಿದರು.

ಅವರು ತಾಲೂಕಿನ ಬಳಗೇರಿ ಗ್ರಾಮದ ಶ್ರೀ ಬಳ್ಳೇಶ್ವರ ದೇವಸ್ಥಾನದ ಬಳ್ಳೇಶ್ವರ ಸ್ವಾಮಿಯ 39ನೇ ವರ್ಷದ ರಥೋತ್ಸವ ಹಾಗೂ ಸಾಮೂಹಿಕ ವಿವಾಹ, ಕಾರ್ಯಕ್ರಮಗಳು ಸಂಪನ್ನಗೊಂಡ ನಂತರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

ನಂತರ ದೊಡ್ಡಪ್ಪ ಕೋಮಾರ ಮಾತನಾಡಿ ಪ್ರತಿ ವರ್ಷದಂತೆ ಶಿವರಾತ್ರಿಯಿಂದ ಪ್ರಾರಂಭಗೊಳ್ಳುವ ಜಾತ್ರಾ ಮಹೋತ್ಸವ ಪ್ರಯುಕ್ತ ಸ್ವಾಮಿಗೆ ವಿಷೇಶ ಅಭಿಷೇಕ ಹಾಗೂ ಅಮವಾಸ್ಯೆಯಂದು ಕುಂಭ ಮೆರವಣಿಗೆ ಎರಡನೇ ದಿನ ಬುಧವಾರದಂದು ಐದು ಜೋಡಿ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ ಜರುಗಿತು. 

ಸಾಯಂಕಾಲ 5.30ಕ್ಕೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ 

ರಥೋತ್ಸವವು ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು ಎಂದು ತಿಳಿಸಿದರು. ನಂತರ 

ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ತಮ್ಮ ತನು, ಮನ,ಧನದಿಂದ ಹಗಲು ರಾತ್ರಿ ಸೇವೆ ಸಲ್ಲಿಸಿದ್ದಾರೆ ಎಂದರು. ನಂತರ ಗ್ರಾಮದ ಹಿರಿಯರಾದ ಕಳಕರಡ್ಡಿ ರಡ್ಡೇರ್ ಮಾತನಾಡಿದರು.

ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಹರಗಿನ ಡೋಣಿಯ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕುಕನೂರು ಅನ್ನದಾನೀಶ್ವರ ಮಠದ ಮಹಾದೇವಯ್ಯ ಸ್ವಾಮಿಗಳು ಮತ್ತು ನಗರಗಡ್ಡಿ ಮಠದ ಶಾಂತಲಿಂಗ ಮಹಾ ಸ್ವಾಮಿಗಳು, ಗವಿಸಿದ್ದೇಶ್ವರ ಶಾಖಾ ಮಠದ ಅಭಿನವ ಬಿಸರಳ್ಳಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಬಳಗೇರಿಯ ವಿಶ್ವನಾಥ ಹಿರೇಮಠ ಇವರು ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ದ್ಯಾಮಣ್ಣ ಕಮ್ಮಾರ, ಶಿವಪ್ಪ ಬಡಗೇರ, ಮುದಿಯಪ್ಪ ನಂದೇಪ್ಪನವರ, ಮುಡಿಯಪ್ಪ ಕಮತರ, ಮಾಜಿ ಗ್ರಾಪಂ ಅಧ್ಯಕ್ಷ ಶರಣಪ್ಪ ಚಾಕ್ರಿ, ಮಹಾಂತೇಶ ಮೇಟಿ, ಬಸವರಾಜ ತಳವಾರ, ನಾಗಪ್ಪ ನಂದೇಪ್ಪನವರ, ಬಳ್ಳೇಶ ಹೂಗಾರ, ಶರಣಗೌಡ ಮಾಲಿಪಾಟೀಲ್, ಕಳಕೇಶ ತೋಟರ್, ಹನುಮಗೌಡ ಮೇಟಿ, ವೆಂಕಣ್ಣ ಬೂಕನಟ್ಟಿ, ಬಸಪ್ಪ ಉಪ್ಪಾರ, ಮಲ್ಲಪ್ಪ ಅಬ್ಬಿಗೇರಿ, ಸೇರಿದಂತೆ ಇನ್ನಿತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞9164386713

Leave a Reply

Your email address will not be published. Required fields are marked *