*ಗುತ್ತಿಗೆದಾರರ ವಿವಿದ ಬೇಡಿಕೆ ಈಡೇರಿಸುವಂತೆ ಇಒ ಸಂತೋಷ್ ಬಿರಾದಾರ್ ಪಾಟೀಲ್ ಭರವಸೆ,,* 

ಕುಕನೂರು : ಕುಕನೂರು ಹಾಗೂ ಯಲಬುರ್ಗಾ ತಾಲೂಕಿನ ಕಲ್ಯಾಣ ಕರ್ನಾಟಕದ ಗುತ್ತಿಗೆದಾರರ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧುವಾರದಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಗುರುವಾರ ಅಧಿಕಾರಿಗಳ ಭರವಸೆಯೊಂದಿಗೆ ಮುಕ್ತಾಯಗೊಳಿಸಿದ್ದಾರೆ.

 

ಸತ್ಯಾಗ್ರಹದಲ್ಲಿ ಜಿಲ್ಲಾಧ್ಯಕ್ಷ ಸಿದ್ದು ಮಣ್ಣಿನವರ ಮಾತನಾಡಿ ಕಲ್ಯಾಣ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರು ಸರಕಾರದ ನಿಯಮಕ್ಕೆ ಅನುಗುಣವಾಗಿ ಲೈಸೆನ್ಸ್ ಹೊಂದಿದ್ದು ಜೊತೆಗೆ ಜಿಎಸ್‌ಟಿ ಸಹ ಪಾವತಿಸಲಾಗುತ್ತಿದೆ ಎಂದರು.

 

ಆದರೆ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ಎಸ್ ಸಿ ಎಸ್ ಟಿ ಗುತ್ತಿಗೆದಾರರಿಗೆ ಕೆಲಸವಿಲ್ಲದೆ ಸಂಕಷ್ಟ ಎದುರಾಗಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಳ್ಳಲು ಬುಧವಾರದಿಂದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು ನಮ್ಮ ಮನವಿಗೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಪಾಟೀಲ್ ಅವರು ಶೀಘ್ರವೇ ನಿಮ್ಮ ಮನವಿಗೆ ಸ್ಪಂದಿಸಲಾಗುವುದು ಎಂದು ಯಲಬುರ್ಗಾ ಸಿಪಿ ಮೌನೇಶ್ ಹಾಗೂ ಕುಕನೂರ್ ಪಿಎಸ್ಐ ಟಿ. ಗುರುರಾಜ್ ಇವರ ಸಮ್ಮುಖದಲ್ಲಿ ಭರವಸೆ ನೀಡಿದ್ದರಿಂದ ಧರಣಿ ಸತ್ಯಾಗ್ರಹ ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಕೊಪ್ಪಳ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ, ಗುತ್ತಿಗೆದಾರರ ಸಂಘದ ಮಹೇಶ ಹಿರೇಮನಿ, ಜಗದೀಶ ಸೂಡಿ, ಶ್ರೀನಿವಾಸ ಗದ್ದಿ, ಸಂಗಪ್ಪ ಜೋಗಣ್ಣವರ್, ನೀಲಪ್ಪ ಬೆಣಕಲ್, ಲಕ್ಷ್ಮಣ ಕಾಳಿ, ದೇವಪ್ಪ ಹರಿಜನ, ಕಳಕಪ್ಪ ಚಲವಾದಿ, ಬಸವರಾಜ ಹಾಳಕೇರಿ,ಶಿವಾನಂದ ರಾರಾಳ, ಮುತ್ತು ಅಂಬಳಿ, ಸೇರಿದಂತೆ ಇನ್ನಿತರರು ಇದ್ದರು.

 

ನಿರಂತರ ಸುದ್ದಿ ಜಾಹಿರಾತು ಪ್ರಕಟಣೆಗಾಗಿ ನಿರ್ಭಯ ದೃಷ್ಟಿ ನ್ಯೂಸ್ ಸಂಪಾದಕರು ಚನ್ನಯ್ಯ ಹಿರೇಮಠ ಕುಕನೂರು ಇವರನ್ನು ಸಂಪರ್ಕಿಸಿ 📞 9164386713

Leave a Reply

Your email address will not be published. Required fields are marked *